2026-04-24 05:43:00

Rajkumar 97th birthday celebration | ರಾಜಕುಮಾರ್ ಅವರ 97 ನೇ ವರ್ಷದ ಹುಟ್ಟುಹಬ್ಬ ಸಂಭ್ರಮ | Speed news kannada

Rajkumar 97th birthday celebration | ರಾಜಕುಮಾರ್ ಅವರ 97 ನೇ ವರ್ಷದ ಹುಟ್ಟುಹಬ್ಬ ಸಂಭ್ರಮ | Speed news kannada

ನಟಸಾರ್ವಭೌಮ ವರನಟ ಡಾ. ರಾಜ್‌ಕುಮಾರ್‌ ಅವರಿಗೆ 97ನೇ ವರ್ಷದ ಜನ್ಮದಿನ. 97ನೇ ಜಯಂತಿ ಆಚರಿಸಲು ಕಂಠೀರವ ಸ್ಟುಡಿಯೋದಲ್ಲಿ ಸಕಲ ಸಿದ್ಧತೆಗಳು ನಡೆದಿದೆ. ಹೂವಿನ ಅಲಂಕಾರದಿಂದ ಸಮಾಧಿ ಸಿದ್ಧವಾಗಿದೆ. ಇಂದು ರಾಜ್ ಕುಟುಂಬದಿಂದ ಸಮಾಧಿಗೆ ಪೂಜೆ ಸಲ್ಲಿಸಲಾಗುತ್ತದೆ. ನಂತರ ಅವರ 97ನೇ ವರ್ಷದ ಜನ್ಮದಿನ ಆಚರಣೆ ಮಾಡಲಾಗುತ್ತದೆ. ‌ಡಾ. ರಾಜ್‌ಕುಮಾರ್‌  ಅವರ ಹುಟ್ಟುಹಬ್ಬದ ಪ್ರಯುಕ್ತ ಅಭಿಮಾನಿಗಳು ಕಂಠೀರವ ಸ್ಟೂಡಿಯೋದ ಮುಂದೆ ಜನಸಾಗರವೆ ನಿರ್ಮಾಣವಾಗಿದೆ. ಸಮಾಧಿಗೆ ಕೆ. ಗೋಪಾಲಯ್ಯರವರು ಪೂಜೆ ಸಲ್ಲಿಸಿದ್ದು, ಮುಖ್ಯ ಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ ಕೆ ಶಿವಕುಮಾರ್ ಹಾಗೂ ಶೋಭಾ ಕರಂದ್ಲಾಜೆ ರವರು ಸಹ ಭಾಗಿ ಆಗಲಿದ್ದಾರೆ ಎನ್ನಲಾಗಿದೆ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.