2026-03-07 06:26:34

Rahul Gandhi hits back at Modi | ನಾಚಿಕೆ ಎಂದರೆ ಎಪ್‌ ಸ್ಟೀನ್ ಫೈಲ್ಸ್‌ ಗಳಲ್ಲಿ ಕಾಣಿಸಿಕೊಳ್ಳುವುದು ಮೋದಿಗೆ ರಾಹುಲ್‌ ಗಾಂಧಿ ತಿರುಗೇಟು | Speed News Kannada

Rahul Gandhi hits back at Modi | ನಾಚಿಕೆ ಎಂದರೆ ಎಪ್‌ ಸ್ಟೀನ್ ಫೈಲ್ಸ್‌ ಗಳಲ್ಲಿ ಕಾಣಿಸಿಕೊಳ್ಳುವುದು ಮೋದಿಗೆ ರಾಹುಲ್‌ ಗಾಂಧಿ ತಿರುಗೇಟು | Speed News Kannada

ನವದೆಹಲಿ:  ಕಾಂಗ್ರೆಸ್ ಕೀಳು ಮಟ್ಟದ ರಾಜಕೀಯ ಮಾಡುತ್ತಿದೆ ಎಂದು ಪ್ರಧಾನಿ ಮೋದಿ ವಾಗ್ದಾಳಿ ನಡೆಸಿದ ಬೆನ್ನಲ್ಲೇ ಲೋಕಸಭೆ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ತಕ್ಕ ಎದಿರೇಟು ನೀಡಿದ್ದಾರೆ. ನೀವು ಮಾಡಿಕೊಂಡಿರುವ ಭಾರತ–ಅಮೆರಿಕಾ ವ್ಯಾಪಾರ ಒಪ್ಪಂದ ನಾಚಿಕೆಗೇಡಿನದ್ದು ಎಂದು ಜರಿದಿದ್ದಾರೆ.
ಈ ಕುರಿತು ವೀಡಿಯೋ ಸಂದೇಶ ಬಿಡುಗಡೆ ಮಾಡಿರುವ ರಾಹುಲ್ ಗಾಂಧಿ, ಕೀಳು ಮಟ್ಟದ ರಾಜಕೀಯ ಮಾಡುತ್ತಿರುವದು ಪ್ರಧಾನಿ ಮೋದಿಯವರೇ ನಿಮಗೆ ನಾಚಿಕೆಯಾಗಬೇಕು ಎಂದು ಹೇಳಿದ್ದಾರೆ.
ನಿಮ್ಮ ಸರ್ಕಾರ ಅಮೆರಿಕದ ಜತೆ ಮಾಡಿಕೊಂಡಿರುವ ಒಪ್ಪಂದ ದೇಶದ ಹಿತಾಸಕ್ತಿಗೆ  ಮಾರಕವಾಗಿದೆ. ಈ ಮೂಲಕ ದೇಶವನ್ನು ಮಾರಿದ್ದೀರಿ. ಅದು ನಾಚಿಕೆಗೇಡಿನ ಸಂಗತಿ. ಈ ಒಪ್ಪಂದಿಂದ  ದೇಶದ ಡೇಟಾ ಭದ್ರತೆಗೆ ಧಕ್ಕೆ ಉಂಟಾಗಿದೆ. ಕೃಷಿಕರು ಮತ್ತು ಜವಳಿ ಉದ್ಯಮ ನಷ್ಟಕ್ಕೀಡಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ದೆಹಲಿಯಲ್ಲಿ ನಡೆದ AI ಇಂಪ್ಯಾಕ್ಟ್ ಸಮ್ಮೇಳನದಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರು ಅರೆಬೆತ್ತಲೆ ಪ್ರತಿಭಟನೆ ನಡೆಸಿದ್ದರು. ಈ ವರ್ತನೆಯನ್ನು ಪ್ರಧಾನಿ ಮೋದಿ “ಕೀಳು ಮಟ್ಟದ ನಾಚಿಕೆಗೇಡಿನ ರಾಜಕೀಯ” ಎಂದು ಟೀಕಿಸಿದ್ದರು. ಇದಕ್ಕೆ ಪ್ರತಿಯಾಗಿ ರಾಹುಲ್ ಗಾಂಧಿ, “ನಾಚಿಕೆ ಬಗ್ಗೆ ನೀವು ಮಾತನಾಡುತ್ತೀರಾ? ನಾಚಿಕೆ ಎಂದರೇನು ಎಂಬುದನ್ನು ನಾನು ಹೇಳುತ್ತೇನೆ,” ಎಂದು ತಿರುಗೇಟು ನೀಡಿ ಶಾಂತಿಯುತ ಪ್ರತಿಭಟನೆ ಪ್ರಜಾಪ್ರಭುತ್ವದ ಮೂಲ ತತ್ವವಾಗಿದೆ ಎಂದು ತಮ್ಮ ಕಾರ್ಯಕರ್ತರನ್ನು ಸಮರ್ಥಿಸಿಕೊಂಡರು. 
ನಿಮ್ಮ, ನಿಮ್ಮ ಸಚಿವರ ಮತ್ತು ನಿಮ್ಮ ಸ್ನೇಹಿತರ ಹೆಸರು ಎಪ್‌ ಸ್ಟೀನ್ ಫೈಲ್ಸ್‌ ಗಳಲ್ಲಿ ಕಾಣಿಸಿಕೊಳ್ಳುವುದು, ಇಂತಹ ಗಂಭೀರ ಅಪರಾಧಿಯೊಂದಿಗೆ ಸಂಬಂಧ ಹೊಂದಿರುವುದು ನಾಚಿಕೆಗೇಡಿನದ್ದು ಎಂದು ರಾಹುಲ್‌ ಗಾಂಧಿ ಟೀಕಿಸಿದ್ದಾರೆ.
ಪ್ರಧಾನಿ ಮೋದಿ ಅವರು ಸಂಸತ್ತಿಗೆ ಬರಲು ಹೆದರಿಕೊಂಡಿದ್ದಾರೆ. ಬಿಜೆಪಿ ಮತ್ತು ಆರ್‌ಎಸ್‌ಎಸ್ ಕಾರ್ಯಕರ್ತರೇ, ನಿಮ್ಮ ಪ್ರಧಾನಿಯ ಕಣ್ಣಲ್ಲಿ ಕಣ್ಣಿಟ್ಟು ನೋಡಿ, ನಿಮಗೆ ಅವರ ಕಣ್ಣುಗಳಲ್ಲಿ ಭಯ ಕಾಣಿಸುತ್ತದೆ ಎಂದೂ ವ್ಯಂಗ್ಯವಾಡಿದ್ದಾರೆ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.