2026-03-07 06:41:43

Rafah Crossing| ಗಾಜಾ ಜನರಿಗೆ ರಫಾ ಬಾಗಿಲು ರೀ ಓಪನ್ ಶಾಂತಿ ಸ್ಥಾಪನೆಗೆ ಮೊದಲು ಲಕ್ಷಾಂತರ ಜನರಿಗೆ ರಿಲೀಫ್ | Speed News Kannada

Rafah Crossing| ಗಾಜಾ ಜನರಿಗೆ ರಫಾ ಬಾಗಿಲು ರೀ ಓಪನ್ ಶಾಂತಿ ಸ್ಥಾಪನೆಗೆ ಮೊದಲು ಲಕ್ಷಾಂತರ ಜನರಿಗೆ ರಿಲೀಫ್ | Speed News Kannada

ಗಾಜಾ ಪಟ್ಟಿಯಲ್ಲಿ ಶಾಂತಿ ಸ್ಥಾಪನೆ ಮಾಡಲು ಈಗಾಗಲೇ ಅಮೆರಿಕ ಹಾಗೂ ಇಸ್ರೇಲ್ ಮಹತ್ವದ ಪ್ಲಾನ್ ಮಾಡಿವೆ. ಅರಬ್ ದೇಶಗಳು ಸೇರಿದಂತೆ ಮಧ್ಯಪ್ರಾಚ್ಯದ ಬಹುತೇಕ ದೇಶಗಳು ಗಾಜಾ ಪಟ್ಟಿ ಶಾಂತಿಯ ವಿಚಾರದಲ್ಲಿ ಅಮೆರಿಕ ಹಾಗೂ ಇಸ್ರೇಲ್ ಬೆನ್ನಿಗೆ ನಿಂತಿವೆ. ಈ ಮೂಲಕ ಗಾಜಾ ಜನರು ನೆಮ್ಮದಿಯ ನಿಟ್ಟುಸಿರು ಬಿಡುವ ಸಮಯ ಕೂಡ ಬಂದಿದ್ದು, ಮತ್ತೊಂದು ಕಡೆ ತಮ್ಮ ಕುಟುಂಬದವರ ಜೊತೆಗೆ ಮೊದಲಿನ ರೀತಿ ನೆಮ್ಮದಿಯಾಗಿ ಬದುಕುವ ಕನಸು ಕಾಣಿದ್ದಾರೆ.ಈ ಸಮಯಕ್ಕೆ ಸರಿಯಾಗಿ ಇನ್ನೊಂದು ಬಂಪರ್ ಸುದ್ದಿ ಕೂಡ ಸಿಕ್ಕಿದ್ದು, ಗಾಜಾ ಜನರಿಗೆ ರಫಾ ಬಾಗಿಲು ರೀ ಓಪನ್ ಆಗಿದೆ.
ಸುಮಾರು 2 ವರ್ಷಗಳ ಹಿಂದೆ ಗಾಜಾ ಪಟ್ಟಿ ನೆಮ್ಮದಿಯಾಗಿಯೇ ಇತ್ತು, ಅಲ್ಲಿನ ಜನರು ಸಾಮಾನ್ಯರ ರೀತಿ ಅತ್ಯಂತ ಖುಷಿ ಖುಷಿಯಾಗಿ ತಮ್ಮ ಜೀವನದ ಬಂಡಿಯನ್ನು ಸಾಗಿಸುತ್ತಾ ಇದ್ದರು ಕೂಡ. ಆದರೆ ಅಕ್ಟೋಬರ್ 7, 2023 ಶನಿವಾರ ಗಾಜಾ ಮತ್ತು ಇಸ್ರೇಲ್ ನಡುವೆ ಯುದ್ಧವು ಶುರುವಾಗಿತ್ತು, ಹಮಾಸ್ ಉಗ್ರರು ದಕ್ಷಿಣ ಇಸ್ರೇಲ್ ಮೇಲೆ ದಾಳಿ ಮಾಡಿದ ನಂತರ ಯುದ್ಧ ಆರಂಭ ಆಗಿತ್ತು. ತಕ್ಷಣ ಇಸ್ರೇಲ್ ಇಡೀ ಗಾಜಾ ಪಟ್ಟಿಯ ಮೇಲೆ ದಾಳಿ ಮಾಡಿ ಹಮಾಸ್ ಬಂಡುಕೋರರ ಹತ್ಯೆಗೆ ಇಳಿದಿತ್ತು. ಈ ಮೂಲಕ, ತನ್ನ ನೆಲದ ಮೇಲೆ ದಾಳಿ ಮಾಡಿದ್ದ ಹಮಾಸ್ ವಿರುದ್ಧ ರಿವೇಂಜ್ ತೆಗೆದುಕೊಂಡಿತ್ತು. ಆದರೆ ಇದೇ ತಿಕ್ಕಾಟದಲ್ಲಿ ರಫಾ ಗಡಿ ಕೂಡ ಬಂದ್ ಆಗಿ ಜನರು ಒದ್ದಾಡಿದ್ದರು. ರಫಾ ಗಡಿ ತೆರೆದಿದ್ದರೂ ನಿಯಮ ಹೇರಿಕೆ ಗಾಜಾ ಪಟ್ಟಿ ಜನರಿಗೆ ತಮ್ಮ ಪ್ರದೇಶದಿಂದ ಹೊರ ಹೋಗಲು ಇರುವುದು ಒಂದೇ ಒಂದು ಸ್ಥಳವಾಗಿದೆ. ಗಾಜಾ ಪಟ್ಟಿ & ಈಜಿಪ್ಟ್ ನಡುವಿನ ರಫಾ ಗಡಿ ಮಾತ್ರ ಗಾಜಾ ಪಟ್ಟಿ ಜನರಿಗೆ ಇರುವ ಏಕೈಕ ಮಾರ್ಗ. ಆದರೆ ಹಮಾಸ್ ವಿರುದ್ಧ ಇಸ್ರೇಲ್ ಸೇನೆ ಕಾರ್ಯಾಚರಣೆ ಆರಂಭ ಮಾಡಿ, ಯುದ್ಧ ಘೋಷಿಸಿ ಭಾರಿ ದೊಡ್ಡ ಕಾಳಗಕ್ಕೆ ಇಳಿದ ನಂತರ ರಫಾ ಗಡಿ ಬಂದ್ ಮಾಡಲಾಗಿತ್ತು. ಇದಕ್ಕೆ ಕಾರಣ ಕೂಡ ಇದ್ದು ಈ ಪ್ರದೇಶದಿಂದ ಶತ್ರುಗಳು ಎಸ್ಕೆಪ್ ಆಗಬಾರದು ಎಂದು ಬಂದ್‌ ಮಾಡಲಾಗಿತ್ತು. ಆದರೆ ಇದೀಗ ರಫಾ ಗಡಿಯನ್ನು ಮತ್ತೆ ತೆರೆಯಲಾಗಿದ್ದರೂ, ಕೆಲವು ಪ್ಯಾಲೆಸ್ಟೀನಿಯರು ಮಾತ್ರ ಇಲ್ಲಿಂದ ಹೊರಗಡೆ ಹೋಗಲು ಅವಕಾಶ ನೀಡಲಾಗಿದ್ದು ಹಲವಾರು ನಿಯಮಗಳನ್ನು ಹೇರಿಕೆ ಮಾಡಲಾಗಿದೆ.ಇಸ್ರೇಲ್ ಸೇನೆಯ ಹದ್ದಿನ ಕಣ್ಣು ಗಾಜಾದ ಆರೋಗ್ಯ ಇಲಾಖೆ ಮಾಹಿತಿ ಪ್ರಕಾರ ಸುಮಾರು 20 ಸಾವಿರ ಮಕ್ಕಳು ಮತ್ತು ವಯಸ್ಕರು ಗಾಜಾ ಪಟ್ಟಿ ಬಿಟ್ಟು ತಮ್ಮ ಚಿಕಿತ್ಸೆಗಾಗಿ ಹೊರಗೆ ಹೋಗಲು ಬಯಸುತ್ತಿದ್ದಾರಂತೆ. ಇದಕ್ಕೆ ಅವಕಾಶ ಬೇಕು ಎಂದು ಕಾಯುತ್ತಿದ್ದು, ಇನ್ನೊಂದು ಕಡೆ ಸಾಮಾನ್ಯ ಜನರ ಜತೆ ಶತ್ರುಗಳು ಕೂಡ ಎಸ್ಕೆಪ್ ಆಗಬಾರದು ಎಂದು ಇಸ್ರೇಲ್ ಕಾಯುತ್ತಿದೆ. ರಫಾ ಗಡಿ ಮೇಲೆ ಹದ್ದಿನಕಣ್ಣಿಟ್ಟು ಕಾಯುತ್ತಿರುವ ಇಸ್ರೇಲ್ ಸೇನೆಯು, ಯಾವುದೇ ಕಾರಣಕ್ಕೆ ಅನುಮತಿ ಇಲ್ಲದೆ ಬೇರೆಯವರು ಹೊರಗೆ ಹೋಗದಂತೆ ನೋಡುತ್ತಿದೆ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.