2026-03-07 06:46:44

R Ashoka warns government of violent protest | ಭಿಕ್ಷುಕರ ಕಲ್ಯಾಣಕ್ಕೆ ಸೆಸ್‌ ಹಣ ಬಳಸದಿದ್ದರೆ ಉಗ್ರ ಹೋರಾಟ ಸರ್ಕಾರಕ್ಕೆ ಆರ್ ಅಶೋಕ ಎಚ್ಚರಿಕೆ | Speed News Kannada

R Ashoka warns government of violent protest | ಭಿಕ್ಷುಕರ ಕಲ್ಯಾಣಕ್ಕೆ ಸೆಸ್‌ ಹಣ ಬಳಸದಿದ್ದರೆ ಉಗ್ರ ಹೋರಾಟ ಸರ್ಕಾರಕ್ಕೆ ಆರ್ ಅಶೋಕ ಎಚ್ಚರಿಕೆ | Speed News Kannada

ಬೆಂಗಳೂರು: ಸಮಾಜದ ಅತ್ಯಂತ ಕಟ್ಟಕಡೆಯ ವ್ಯಕ್ತಿಗಳಾದ ಭಿಕ್ಷುಕರ ಪುನರ್ವಸತಿಗಾಗಿ ಜನರಿಂದ ಸಂಗ್ರಹಿಸಿದ 'ಭಿಕ್ಷುಕರ ಉಪಕರ'ವನ್ನೂ ನುಂಗಿ ನೀರು ಕುಡಿಯುತ್ತಿರುವ ಈ ನಡೆ ಅತ್ಯಂತ ಅಮಾನವೀಯ ಮತ್ತು ನಾಚಿಕೆಗೇಡು ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ವಿಧಾನಸಭೆ ವಿಪಕ್ಷ ನಾಯಕ ಆರ್.‌ ಅಶೋಕ ವಾಗ್ದಾಳಿ ನಡೆಸಿದ್ದಾರೆ. .
ಬಡವರ ಹೆಸರಲ್ಲಿ ಅಧಿಕಾರಕ್ಕೆ ಬಂದು, ಈಗ ದೀನ-ದಲಿತರ ಹಸಿವು ನೀಗಿಸಬೇಕಾದ ಹಣವನ್ನೂ ಬಿಡದೆ ಲೂಟಿ ಮಾಡುತ್ತಿರುವುದು ಈ @INCKarnataka ಸರ್ಕಾರದ ಭ್ರಷ್ಟಾಚಾರಕ್ಕೆ ಹಿಡಿದ ಕೈಗನ್ನಡಿಯಾಗಿದೆ.
ಬಿಬಿಎಂಪಿಯಿಂದ ಸಂಗ್ರಹವಾದ ಆರೋಗ್ಯ ಸೆಸ್ (₹256 ಕೋಟಿ), ಗ್ರಂಥಾಲಯ ಸೆಸ್ (₹218 ಕೋಟಿ) ಸೇರಿದಂತೆ ಸಾವಿರಾರು ಕೋಟಿ ರೂಪಾಯಿಗಳನ್ನು ಸಂಬಂಧಪಟ್ಟ ಇಲಾಖೆಗಳಿಗೆ ಪಾವತಿಸದೆ ರಾಜ್ಯ ಸರ್ಕಾರ ದುರ್ಬಳಕೆ ಮಾಡಿಕೊಳ್ಳುತ್ತಿದೆ.
ಗ್ರಾಮ ಪಂಚಾಯತ್ ಹಣಕ್ಕೂ ಕನ್ನ: 
2024-25ನೇ ಸಾಲಿನಲ್ಲಿ ಪಂಚಾಯತ್‌ಗಳು ಸಂಗ್ರಹಿಸಿದ ₹72.82 ಕೋಟಿಯಲ್ಲಿ ಕೇವಲ ₹21.55 ಕೋಟಿ ಮಾತ್ರ ಜಮೆಯಾಗಿದೆ. ಉಳಿದ ₹51 ಕೋಟಿ ಹಣ ಎಲ್ಲಿ ಹೋಯಿತು?
ರಾಜ್ಯದಲ್ಲಿ ಭಿಕ್ಷಾಟನೆಯಲ್ಲಿ ತೊಡಗಿರುವ 720 ಮಕ್ಕಳನ್ನು ಗುರುತಿಸಲಾಗಿದ್ದರೂ ಅವರ ಪುನರ್ವಸತಿಗೆ ಈ ಸರ್ಕಾರಕ್ಕೆ ಪುರುಸೊತ್ತಿಲ್ಲ. ಹೈಕೋರ್ಟ್ ಚಾಟಿ ಬೀಸಿದ ಮೇಲೂ ಎಚ್ಚೆತ್ತುಕೊಂಡಿಲ್ಲ ಈ ಲಜ್ಜೆಗೆಟ್ಟ ಸರ್ಕಾರ, ಭಿಕ್ಷುಕರ ಕಲ್ಯಾಣಕ್ಕೆ ಮೀಸಲಿಟ್ಟ ಶೇ.50 ರಷ್ಟು ಹಣವನ್ನು ಬೇರೆ ಯೋಜನೆಗಳಿಗೆ ಬಳಸಿಕೊಳ್ಳಲು ಹೊಂಚು ಹಾಕುತ್ತಿರುವ ಇವರ ನೀಚ ಮನಸ್ಥಿತಿಗೆ ಕೊನೆಯೇ ಇಲ್ಲದಂತಾಗಿದೆ.
ಸಿಎಂ @siddaramaiah ನವರೇ, "ಅಹಿಂದ" ಮತ್ತು "ಬಡವರ ಪರ" ಎಂದು ಬೊಬ್ಬೆ ಹೊಡೆಯುವ ನೀವು, ಭಿಕ್ಷುಕರ ಹೊಟ್ಟೆ ಮೇಲೆ ಹೊಡೆಯುವ ಈ ಪಾಪದ ಹಣದಲ್ಲಿ ಸರ್ಕಾರ ನಡೆಸುತ್ತಿದ್ದೀರಾ? ಜನರಿಂದ ಸಂಗ್ರಹಿಸಿದ ಪ್ರತಿಯೊಂದು ಪೈಸೆಗೂ ನೀವು ಲೆಕ್ಕ ನೀಡಲೇಬೇಕು.
ಈ ಕೂಡಲೇ ಬಾಕಿ ಇರುವ ಎಲ್ಲಾ ಸೆಸ್ ಹಣವನ್ನು ಕೇಂದ್ರ ಪರಿಹಾರ ಸಮಿತಿಗೆ ಬಿಡುಗಡೆ ಮಾಡಬೇಕು ಮತ್ತು ಮಕ್ಕಳ ಪುನರ್ವಸತಿಗೆ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಬೀದಿಗಿಳಿದು ಹೋರಾಟ ಮಾಡುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.