2026-06-08 01:37:16

Priyanka Gandhi | ಶಾಂತಿ ಪ್ರೀತಿಯನ್ನುಉತ್ತೇಜಿಸುವ ಚಿತ್ರಗಳು ತೆರೆಕಾಣಬೇಕು ಪ್ರಿಯಾಂಕಾ ಗಾಂಧಿ | Speed News Kannada

Priyanka Gandhi | ಶಾಂತಿ ಪ್ರೀತಿಯನ್ನುಉತ್ತೇಜಿಸುವ ಚಿತ್ರಗಳು ತೆರೆಕಾಣಬೇಕು ಪ್ರಿಯಾಂಕಾ ಗಾಂಧಿ | Speed News Kannada

ವಯನಾಡ್:‌ ಶಾಂತಿ ಮತ್ತು ಪ್ರೀತಿಯನ್ನುಉತ್ತೇಜಿಸುವ ಸೃಜನಾತ್ಮಕ ಚಿತ್ರಗಳು ತೆರೆಕಾಣಬೇಕು ಎಂದು ಕಾಂಗ್ರೆಸ್‌ ಸಂಸದೆ ಪ್ರಿಯಾಂಕಾ ಗಾಂಧಿ ತಿಳಿಸಿದ್ದಾರೆ. 
ಕೇರಳ ಪ್ರವಾಸದಲ್ಲಿರುವ ಅವರು, 'ದಿ ಕೇರಳ ಸ್ಟೋರಿ-2' ಸಿನಿಮಾ ಬಿಡುಗಡೆಗೆ ನ್ಯಾಯಾಲಯ ತಡೆ ನೀಡಿರುವ ಸಂಬಂಧ ಕೇಳಿದ ಪ್ರಶ್ನೆಗೆ ಅವರು ಹೀಗೆ ಉತ್ತರಿಸಿದರು.
ನಾಗರೀಕರಿಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಅವಕಾಶ ಇರಬೇಕು ಎನ್ನುವುದು ನನ್ನ ಅಭಿಪ್ರಾಯ. ಆದರೆ ಪರಸ್ಪರ ಕೋಪ, ದ್ವೇಷ ಮತ್ತು ಪ್ರಚೋದನಾತ್ಮಕ ಭಾಷಣಗಳೇ ತುಂಬಿರುವ ಇಂದಿನ ದಿನಗಳಲ್ಲಿ ಸಂತೋಷ, ಶಾಂತಿ, ಪ್ರೀತಿ ಹಾಗೂ ಜನರ ಕಲ್ಯಾಣವನ್ನು ಉತ್ತೇಜಿಸುವ ಸೃಜನಾತ್ಮಕ ಸಿನಿಮಾಗಳು ತೆರೆಕಾಣಬೇಕು ಎನ್ನುವುದು ನನ್ನ ಅಭಿಪ್ರಾಯ ಎಂದು ತಿಳಿಸಿದರು.
ಕೇರಳದಲ್ಲಿ ಸಂಭವಿಸಿದ ಭೂಕುಸಿತ ದುರಂತದಲ್ಲಿ ನೂರಾರು ಜನರು ಪ್ರಾಣ ಕಳೆದುಕೊಂಡ ಸಂದರ್ಭದಲ್ಲಿ ಯಾವುದೇ ಧರ್ಮ, ಜಾತಿ ಭೇದವಿಲ್ಲದೆ ಎಲ್ಲರೂ ಪರಸ್ಪರ ಸಹಾಯಹಸ್ತ ಚಾಚಿದ ಉದಾಹರಣೆಯನ್ನು ಅವರು ಪ್ರಸ್ತಾಪಿಸಿದರು.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.