2026-06-08 01:21:32

ಕೇಂದ್ರ ಬೆಲೆ ಏರಿಸಿದರೆ ರಾಜ್ಯ ಸರ್ಕಾರ ಕಡಿಮೆ ಮಾಡಬೇಕೆ?:ಸಿಎಂ ಸಿದ್ದರಾಮಯ್ಯ ಗರಂ|Speed News Kannada

ಕೇಂದ್ರ ಬೆಲೆ ಏರಿಸಿದರೆ ರಾಜ್ಯ ಸರ್ಕಾರ ಕಡಿಮೆ ಮಾಡಬೇಕೆ?:ಸಿಎಂ ಸಿದ್ದರಾಮಯ್ಯ ಗರಂ|Speed News Kannada

ಬೆಂಗಳೂರು: ಪೆಟ್ರೋಲ್, ಡೀಸೆಲ್ ಮೇಲೆ ರಾಜ್ಯ ವಿಧಿಸಿರುವ ತೆರಿಗೆಯನ್ನು ಕಡಿತ ಮಾಡುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.

ಬೆಂಗಳೂರಿನಲ್ಲಿ ವಿಧಾನಸೌಧದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ಬೆಲೆ ಏರಿಸಿದರೆ ರಾಜ್ಯ ಸರ್ಕಾರ ಕಡಿಮೆ ಮಾಡಬೇಕೇ ಎಂದು ಪ್ರಶ್ನಿಸಿದರು.

ಕೇಂದ್ರ ಬಿಜೆಪಿ ಸರ್ಕಾರ ಬೆಲೆ ಏರಿಕೆ ಮಾಡಿದರೆ ನೀವು(ಮಾಧ್ಯಮಗಳು) ಕೇಳುವುದೇ ಇಲ್ಲ.  ನಮ್ಮನ್ನು ಕಡಿಮೆ ಮಾಡ್ತೀರಾ ಎಂದು ಪ್ರಶ್ನೆ ಕೇಳುತ್ತೀರಿ. ಏಕೆ ಹೆಚ್ಚಳ ಮಾಡಿದ್ದೀರಿ ಎಂದು ಅವರನ್ನು ಕೇಳೀ ಎಂದರು.

ಡಾ.ಮನಮೋಹನ್ ಸಿಂಗ್ ಅವಧಿಯಲ್ಲಿ ಲೀಟರ್‌ ಪೆಟ್ರೋಲ್ 70 ರೂ. ಡಿಸೇಲ್ 48 ರೂ. ಇತ್ತು. ಅಡುಗೆ ಅನಿಲದ ಬೆಲೆ 414 ರೂ. ಇತ್ತು. ಪ್ರಧಾನಿ ಮೋದಿ ಅಧಿಕಾರಕ್ಕೆ ಬಂದಾಗ ಪೆಟ್ರೋಲ್, ಡೀಸೆಲ್. ಎಲ್‌ ಪಿಜಿ  ಬೆಲೆ ಎಷ್ಟು ಹೆಚ್ಚಳವಾಗಿದೆ? ಏರಿಕೆ ಮಾಡಿದ್ದು ಯಾರು ಎಂದು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. 

ರಾಜ್ಯ ಸರ್ಕಾರ ರಾಜ್ಯದ ಜನತಯ ನೆರವಿಗೆ ಧಾವಿಸಲಿದೆಯೇ ಎಂಬ ಮತ್ತೊಂದು ಪ್ರಶ್ನೆಗೆ ಅವರು ಬೆಲೆ ಜಾಸ್ತಿ ಮಾಡಿದ್ದಾರೆ ಅಂದರೆ ನಮಗೆ ತೆರಿಗೆ ಕಡಿಮೆ ಮಾಡಿ ಎಂದು ಏಕೆ ಪ್ರಶ್ನೆ ಕೇಳ್ತೀರಾ? ನೀವೆಲ್ಲ ಕೇಂದ್ರ ಸರ್ಕಾರದ ಪರ. ನೀವು ಪ್ರಶ್ನೆ ಕೇಳೋದ್ರಲ್ಲೇ ಗೊತ್ತಾಗುತ್ತದೆ ಎಂದು ಮಾಧ್ಯಮಗಳ ಮೇಲೆ ಕಿಡಿ ಕಾರಿದರು.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.