2026-03-07 05:00:43

Premada Urali | ಪ್ರೇಮದ ಊರಲಿ ಟೀಸರ್ ರಿಲೀಸ್ ಇಬ್ಬರು ನಾಯಕಿಯರ ಜೊತೆ ಶ್ರೀರಾಮ್ ಯಾನ | Speed News Kannada

Premada Urali | ಪ್ರೇಮದ ಊರಲಿ ಟೀಸರ್ ರಿಲೀಸ್ ಇಬ್ಬರು ನಾಯಕಿಯರ ಜೊತೆ ಶ್ರೀರಾಮ್ ಯಾನ | Speed News Kannada

ರಂಗಾಯಣ ರಘು-ಶ್ರೀರಾಮ್ ನಟನೆಯ ಪ್ರೇಮದ ಊರಲಿ ಟೀಸರ್ ರಿಲೀಸ್

ಈ‌ ಹಿಂದೆ ಅಕ್ಷಿ ಸಿನಿಮಾ ಮಾಡಿ ರಾಷ್ಟ್ರ ಪ್ರಶಸ್ತಿ ಪಡೆದಿರುವ ಮನೋಜ್ ಕುಮಾರ್ ಹೊಸ ಕಥೆಯೊಂದಿಗೆ ಬಂದಿದ್ದಾರೆ.‌ ಈ ಬಾರಿ ಅವರು ಮ್ಯೂಸಿಕ್ ಲವ್ ಸ್ಟೋರಿ ಕಥೆ ಹೇಳೋದಿಕ್ಕೆ ಹೊರಟಿದ್ದಾರೆ. ಈ ಸಿನಿಮಾಗೆ ಪ್ರೇಮದ ಊರಲಿ ಎಂಬ ಟೈಟಲ್ ಇಡಲಾಗಿದ್ದು, ನಿನ್ನೆ ಬೆಂಗಳೂರಿನ ಉತ್ಸವ್ ಲೆಗಸಿಯಲ್ಲಿ ಟೀಸರ್ ಬಿಡುಗಡೆ ಮಾಡಲಾಯಿತು.

ಈ ವೇಳೆ ಮಾತನಾಡಿದ ರಂಗಾಯಣ ರಘು, ತಪ್ಪುಗಳನ್ನು ಮಾಡ್ತಾ ಹೋಗಿ ಜೀವನ ಕಲಿಯುವ ಪಾತ್ರದಲ್ಲಿ ನಾನು ನಟಿಸಿದ್ದೇನೆ. ಶ್ರೀ ಮೊದಲು ಫೋನ್‌‌ ಮಾಡಿ ಹಳ್ಳಿ ಕಥೆ ಇದು ಹೇಳಿದರು. ನನಗೆ ಹಳ್ಳಿ ಕಥೆ ಇಷ್ಟವಾಗುತ್ತದೆ. ಡೈರೆಕ್ಟರ್ ಕಥೆ ಹೇಳಿದರು. ಇಷ್ಟವಾಯ್ತು. ಶೂಟಿಂಗ್ ಜಾಗ ತುಂಬಾನೇ ಸೊಗಸಾಗಿತ್ತು. ನಾನು ಶೂಟಿಂಗ್ ಮುಗಿಸಿದ ಬಳಿಕ‌ ನಾನು ಅಲ್ಲಿನ ಹಳ್ಳಿಯವನು ಅದೇ. ನಿರ್ದೇಶಕರು ಕೆಲಸ ಮಾಡುವ ರೀತಿ ನನಗೆ ಇಷ್ಟವಾಯ್ತು. ಹಳ್ಳಿ ಕಥೆ.‌ಈ‌ ನಿಮ್ಮ ಪ್ರೀತಿ, ಸಹಕಾರ ನಮ್ಮ ಚಿತ್ರದ ಮೇಲೆ ಇರಲಿ ಎಂದರು.

ನಿರ್ದೇಶಕ ಮನೋಜ್ ಕುಮಾರ್ ಮಾತನಾಡಿ, ರಂಗಾಯಣ ರಘು ಸರ್ ಈ ಸಿನಿಮಾಗೆ ಹಾಗೂ ನನಗೆ ಬೆಳಕು. ಅವರ ಅಭಿನಯದ ಬಗ್ಗೆ ಮಾತಾಡುವಷ್ಟು ನಾನು ದೊಡ್ಡವನಲ್ಲ. ಅವರು ಒಂದು ವಿಶಿಷ್ಟವಾದ ಪಾತ್ರದಲ್ಲಿ ನಟಿಸಿದ್ದಾರೆ. ಹಾಸನದ ಸದಾ ಮಳೆ ಬರುವ ಜಾಗದಲ್ಲಿ ಶೂಟಿಂಗ್ ಮಾಡಿದ್ದೇವೆ. ಹೀರೋ ಚಿತ್ರಕ್ಕೆ ಸಾಕಷ್ಟು ಶ್ರಮ ಹಾಕಿದ್ದಾರೆ. ನಾಯಕಿರು ಅದ್ಭುತವಾಗಿ ನಟಿಸಿದ್ದಾರೆ. ನನಗೆ ಈ ಅವಕಾಶ ಕೊಟ್ಟ ನಿರ್ಮಾಪಕರಿಗೆ ಧನ್ಯವಾದಗಳು. ಚಿತ್ರಕ್ಕೆ ಏನು ಬೇಕು ಎಲ್ಲವನ್ನೂ ನೀಡಿದ್ದಾರೆ. ಸಂಪೂರ್ಣ ಬೆಂಬಲ ಕೊಟ್ಟಿದ್ದಾರೆ. ಪ್ರೇಮದ ಊರಲಿ ಸಿನಿಮಾ ಮ್ಯೂಸಿಕಲ್ ಲವ್ ಸ್ಟೋರಿ. ಚಿತ್ರದ ಹಿನ್ನೆಲೆ ಸಂಗೀತ ಅದ್ಭುತವಾಗಿದೆ. ಟೀಸರ್ ನೋಡಿದ್ರೆ ಗೊತ್ತಗುತ್ತದೆ ಇದು‌ ನಾಗಣ್ಣ ಹಾಗೂ ಸಂತುವಿನ ಪುಟ್ಟ ಲೋಕ. ಊರು ಅಂದರೆ ಸಾವಿರ ಮನೆ, ನೂರು ಮನೆ ಇರಬೇಕು ಎಂಬುದು‌ ಇಲ್ಲ. ಒಂದು ಮನೆಯಲ್ಲಿ ಎಲ್ಲರೂ ಲವಲವಿಕೆಯಿಂದ, ಖುಷಿಯಿಂದ, ಪ್ರೀತಿಯಿಂದ ಇದ್ದರೆ ಅದೇ ನಮಗೆ ದೊಡ್ಡ ಊರು. ಅದೇ ಪ್ರೇಮದ‌ ಊರಲಿ ಎಂದು‌ ಹೇಳಿದರು.

ನಟ ಶ್ರೀರಾಮ್ ಚಿತ್ರದ ನಾಯಕನಾಗಿ ನಟಿಸಿದ್ದು, ತಪಸ್ವಿನಿ ಪೂಣಚ್ಚ ಹಾಗೂ ರಮಿಕಾ ಶಿವು ನಾಯಕಿಯರಾಗಿ ಸಾಥ್ ಕೊಟ್ಟಿದ್ದಾರೆ. ಈ ಚಿತ್ರದಲ್ಲಿ ಶ್ರೀರಾಮ್ ತಂದೆ ಪಾತ್ರದಲ್ಲಿ ರಂಗಾಯಣ ರಘು ನಟಿಸಿದ್ದಾರೆ. 

'ಪ್ರೇಮದ ಊರಲಿ’ ಚಿತ್ರವನ್ನು ವೆನಿಲ್ಲಾ ಎಂಟರ್ಟೈನ್ಮೆಂಟ್ಸ್, ಜಾನಕಮ್ಮ ಪ್ರೊಡಕ್ಷನ್ ನಡಿ ಮಮತಾ ದೇವೇಂದ್ರ, ಪ್ರಶಾಂತ್ ಹಾಗೂ ರಮೇಶ್ ಅವರು ನಿರ್ಮಾಣ ಮಾಡಿದ್ದಾರೆ. ಸುನಾದ ಗೌತಮ್ ಸಂಗೀತ ನಿರ್ದೇಶನ,  ರಾಜ್ಕಾಂತ್ ಎಸ್ ಕೆ ಛಾಯಾಗ್ರಹಣ, ಹರ್ಷಿತ್ ಪ್ರಭು ಸಂಕಲನ ಚಿತ್ರಕ್ಕಿದೆ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.