2026-06-08 01:28:43

Pregnant wife enters mantapa, groom 2nd wedding blocked|ಗರ್ಭಿಣಿ ಪತ್ನಿ ಮಂಟಪಕ್ಕೆ ಎಂಟ್ರಿ, ವರನ 2ನೇ ಮದುವೆ ತಡೆ|Speed News Kannada

Pregnant wife enters mantapa, groom 2nd wedding blocked|ಗರ್ಭಿಣಿ ಪತ್ನಿ ಮಂಟಪಕ್ಕೆ ಎಂಟ್ರಿ, ವರನ 2ನೇ ಮದುವೆ ತಡೆ|Speed News Kannada

ದೊಡ್ಡಬಳ್ಳಾಪುರ ನಗರದ ಬಸವ ಭವನದಲ್ಲಿ ಭಾನುವಾರ ನಡೆದ ಮದುವೆ ಕಾರ್ಯಕ್ರಮದಲ್ಲಿ ಹೈಡ್ರಾಮಾ ನಡೆದಿದೆ. ಮೊದಲ ಪತ್ನಿ ಇದ್ದರೂ ಎರಡನೇ ಮದುವೆಗೆ ಮುಂದಾಗಿದ್ದ ವರನ ಯೋಜನೆಯನ್ನು, ಏಳು ತಿಂಗಳ ಗರ್ಭಿಣಿ ಪತ್ನಿ ಮಂಟಪಕ್ಕೇ ಬಂದು ತಡೆದಿದ್ದಾರೆ.ಕೇರಳ ಮೂಲದ ಮಹಿಳೆಯನ್ನು ವರ್ಷ ಹಿಂದೆಯೇ ವಿವಾಹವಾಗಿದ್ದ ವರ ಕುಮಾರ್, ಮೊದಲ ಮದುವೆಯನ್ನು ಮರೆಮಾಚಿ ಮತ್ತೊಂದು ಮದುವೆಗೆ ಸಿದ್ಧತೆ ನಡೆಸಿದ್ದ ಎನ್ನಲಾಗಿದೆ.

ವಿಷಯ ತಿಳಿದ ಪತ್ನಿ ತಕ್ಷಣವೇ ಸ್ಥಳಕ್ಕೆ ಆಗಮಿಸಿ, ಮದುವೆಯ ದಾಖಲೆಗಳನ್ನು ತೋರಿಸಿ ನ್ಯಾಯಕ್ಕಾಗಿ ಆಗ್ರಹಿಸಿದರು. ಘಟನೆ ತಿಳಿಯುತ್ತಿದ್ದಂತೆಯೇ ದೊಡ್ಡಬಳ್ಳಾಪುರ ಟೌನ್‌ ಪೊಲೀಸ್‌  ಸ್ಥಳಕ್ಕೆ ಆಗಮಿಸಿ ವರನನ್ನು ವಶಕ್ಕೆ ಪಡೆದು ತನಿಖೆ ಆರಂಭಿಸಿದ್ದಾರೆ.ಒಟ್ಟಿನಲ್ಲಿ, ಮಂಟಪಕ್ಕೇ ಬಂದ ಗರ್ಭಿಣಿ ಪತ್ನಿಯ ಧೈರ್ಯದಿಂದ ಅನ್ಯಾಯ ಮದುವೆ ತಡೆಯಲ್ಪಟ್ಟಿದೆ

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.