2026-03-07 06:24:50

PM Modi Used Cowardly Language | ಪ್ರಧಾನಿ ಮೋದಿಗೆ ಹೇಡಿ ಪದಬಳಕೆ ಸಿಎಂ ಸಿದ್ದರಾಮಯ್ಯ ಆತ್ಮಾವಲೋಕನ ಮಾಡಿಕೊಳ್ಳಲಿ ಬಿಜೆಪಿ ಮುಖಂಡ ಎನ್ ವಿಕುಮಾರ್ | Speed News Kannada

PM Modi Used Cowardly Language | ಪ್ರಧಾನಿ ಮೋದಿಗೆ ಹೇಡಿ ಪದಬಳಕೆ ಸಿಎಂ ಸಿದ್ದರಾಮಯ್ಯ ಆತ್ಮಾವಲೋಕನ ಮಾಡಿಕೊಳ್ಳಲಿ ಬಿಜೆಪಿ ಮುಖಂಡ ಎನ್ ವಿಕುಮಾರ್ | Speed News Kannada

ಬೆಂಗಳೂರು: ದೇಶದ ಪ್ರಧಾನಿ ಮೋದಿ ಅವರನ್ನು ಹೇಡಿ ಎಂದು ಕರೆದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆತ್ಮಾವಲೋಕನ ಮಾಡಿಕೊಳ್ಳುವುದು ಒಳ್ಳೆಯದು ಎಂದು ವಿಧಾನಪರಿಷತ್ ವಿಪಕ್ಷದ ಮುಖ್ಯ ಸಚೇತಕ ಎನ್.ರವಿಕುಮಾರ್ ಹೇಳಿದ್ದಾರೆ. ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಹೇಡಿಎಂಬ  ಶಬ್ದ ನರೇಂದ್ರ ಮೋದಿ ಅವರಿಗೆ ಅನ್ವಯಿಸುವುದಿಲ್ಲ. ಯುಪಿಎ ಸರಕಾರ ಇದ್ದ ಸಂದರ್ಭದಲ್ಲಿ ಇಡೀ ದೇಶಕ್ಕೆ ದೇಶವೇ ಭ್ರಷ್ಟಾಚಾರದಲ್ಲಿ ಮುಳುಗಿತ್ತು. ಹೆಲಿಕಾಪ್ಟರ್ ಹಗರಣ, ಕಲ್ಲಿದ್ದಲು ಹಗರಣ, ಕ್ರೀಡಾ ಕ್ಷೇತ್ರದ ಕಾಮನ್‍ವೆಲ್ತ್ ಗೇಮ್ಸ್ ಹಗರಣ ಸೇರಿ ಸರಣಿ ಹಗರಣಗಳು ನಡೆದಿದ್ದವು; ಲಕ್ಷ ಲಕ್ಷ ಕೋಟಿಗಳ ಭ್ರಷ್ಟಾಚಾರ ದೇಶದಲ್ಲಿ ಮನೆಮಾತಾಗಿತ್ತು ಎಂದು ಹೇಳಿದರು.
ಇವತ್ತು ಭ್ರಷ್ಟಾಚಾರದ ಶಬ್ದವೇ ಇಲ್ಲ; ಇಂಥ ಸಾಹಸದ ಕೆಲಸವನ್ನು ಮಾಡಿದ್ಯಾರು? ಸಿದ್ದರಾಮಯ್ಯನವರು ಒಂದು ಗಂಟೆ ಶಾಂತವಾಗಿ ಕುಳಿತು ತಮ್ಮ ಸರಕಾರವನ್ನು ಏನೆಂದು ಕರೆಯುತ್ತಾರೆ? ಮೋದಿಜೀ ಸರಕಾರವನ್ನು ಏನೆಂದು ಕರೆಯುತ್ತಿದ್ದಾರೆಂದು ಆತ್ಮಾವಲೋಕನ ಮಾಡಿಕೊಳ್ಳುವುದು ಒಳ್ಳೆಯದೆಂದು ಸಲಹೆ ನೀಡಿದರು. ಮನಮೋಹನ್ ಸಿಂಗ್ ಅವರ ಯುಪಿಎ ಸರಕಾರ ಇಂದು ಕರ್ನಾಟಕದಲ್ಲಿ ಪುನರಾವರ್ತನೆ ಆಗಿದೆ. ವಿಧಾನಸೌಧದಲ್ಲಿ ಚಿನ್ನದ ಬಿಸ್ಕೆಟ್ ಸಿಕ್ಕಿದೆ. ಲಕ್ಷಾಂತರ ರೂ. ಹಣ ಸಿಕ್ಕಿದೆ. ಇದನ್ನು ಯಾರು ಮಾಡಿದ್ದಾರೆ? ಇದು ಹೇಡಿಗಳ ಕೆಲಸ ಎಂದು ಆರೋಪಿಸಿದರು.
ಮೋದಿ ಅವರ ವ್ಯಕ್ತಿತ್ವ ಎಂಥದ್ದು? ರಾಹುಲ್ ಗಾಂಧಿಯವರ ವ್ಯಕ್ತಿತ್ವ ಎಂಥದ್ದು? ಎಂದು ಕೇಳಿದ ಅವರು, ರಾಜ್ಯದಲ್ಲಿ ಭ್ರಷ್ಟಾಚಾರ ಮಿತಿ ಮೀರಿದೆ. ಈ ಎಲ್ಲ ವಿಷಯಗಳನ್ನು ಕುರಿತು  ಸಿದ್ದರಾಮಯ್ಯರದು ಎಂಥ ನೇತೃತ್ವ? ಇದೆಲ್ಲವನ್ನೂ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದರು.
ವೈನ್ ಮರ್ಚೆಂಟ್ಸ್ ಅಸೋಸಿಯೇಷನ್‍ನ, ಗುತ್ತಿಗೆದಾರರ ಸಂಘ ದೂರು ಕೊಟ್ಟಿವೆ. ಕಾರ್ಮಿಕರ ಇಲಾಖೆ ಮತ್ತಿತರ ಇಲಾಖೆಗೆ ಸಂಬಂಧಿಸಿ ಸಿಎಜಿ ವರದಿಯೂ ಬಂದಿದೆ. ಇದೀಗ ವಿಧಾನಸೌಧದಲ್ಲಿ  ಚಿನ್ನ, ನಗದು ಸಿಗುತ್ತಿದೆ. ಲೈಸನ್ಸ್‍ಗ ಮಾರಾಟ ಆಗುತ್ತಿವೆ. ಇದೆಲ್ಲ ಹೇಡಿಗಳ ಸರಕಾರದಲ್ಲಿ ನಡೆಯಲು ಮಾತ್ರ ಸಾಧ್ಯ ಎಂದು ವಾಗ್ದಾಳಿ ನಡೆಸಿದರು.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.