2026-03-07 05:00:23

PM Modis Speech in Rajya Sabha | ರಾಜ್ಯಸಭೆಯಲ್ಲಿ ಪ್ರಧಾನಿ ಮೋದಿ ಭಾಷಣ ವಿಪಕ್ಷ ನಾಯಕ ಖರ್ಗೆ ಆರೋಗ್ಯ ವಿಚಾರಣೆ ಮೆಚ್ಚುಗೆಗೆ ಪಾತ್ರವಾದ ವಿಡಿಯೋ ವೈರಲ್ | Speed News Kannada

PM Modis Speech in Rajya Sabha | ರಾಜ್ಯಸಭೆಯಲ್ಲಿ ಪ್ರಧಾನಿ ಮೋದಿ ಭಾಷಣ ವಿಪಕ್ಷ ನಾಯಕ ಖರ್ಗೆ ಆರೋಗ್ಯ ವಿಚಾರಣೆ ಮೆಚ್ಚುಗೆಗೆ ಪಾತ್ರವಾದ ವಿಡಿಯೋ ವೈರಲ್ | Speed News Kannada

ನವದೆಹಲಿ: ರಾಷ್ಟ್ರಪತಿಗಳ ಭಾಷಣದ ಮೇಲೆ ವಂದನಾ ನಿರ್ಣಯ ಕುರಿತು ರಾಜ್ಯಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಷಣ ಆರಂಭಿಸಿದ್ದಾರೆ. ಮೋದಿ ಅವರು ಭಾಷಣ ಆರಂಭಿಸುತ್ತಿದ್ದಂತೆ ವಿಪಕ್ಷಗಳ ಗದ್ದಲ ಆರಂಭಿಸಿದವು. ಆದರೂ  ಗದ್ದಲದ ಮಧ್ಯೆಯೇ ಅವರು  ಭಾಷಣ ಮಾಡಿದರು.
ಖರ್ಗೆ ಆರೋಗ್ಯ ವಿಚಾರಿಸಿದ ಮೋದಿ:
ಮೋದಿ ಅವರು ಭಾಷಣ ಆರಂಭಿಸುತ್ತಿದ್ದಂತೆ ವಿಪಕ್ಷಗಳು ಗದ್ದಲ ಆರಂಭಿಸಿದವು. ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರೂ ನಿಂತುಕೊಂಡೇ ಪ್ರತಿಭಟಿಸುತ್ತಿದ್ದರು ಆಗ ಪ್ರಧಾನಿ ಮೋದಿ ಅವರು, ರಾಜಕೀಯವನ್ನು ಬದಿಗಿಟ್ಟು, ಖರ್ಗೆ ಅವರ ಆರೋಗ್ಯ ಕುರಿತು ಕಾಳಜಿ ವಹಿಸಿದರು.
ನಂತರ ಅವರು ಮಾತನಾಡುತ್ತಾ  ಮಾತುವಿಕಸಿತ ಭಾರತದಲ್ಲಿ ದೇಶ ವೇಗವಾಗಿ ಅಭಿವೃದ್ಧಿಯಾಗ್ತಿದೆ. ಸರಿಯಾದ ದಿಕ್ಕಿನಲ್ಲಿ ದೇಶ ವೇಗವಾಗಿ ಮುಂದೆ ಸಾಗ್ತಿದೆ. ಮಾನ್ಯ ರಾಷ್ಟ್ರಪತಿಗಳು ತುಂಬಾ ಉತ್ತಮವಾಗಿ ಸಂವೇಧನಾಶೀಲತೆಯಿಂದ ನಮ್ಮ ಮುಂದೆ ಪ್ರಸ್ತುತಪಡಿಸಿದ್ದಾರೆ. ಈ ದೇಶದ ಮಧ್ಯಮವರ್ಗ, ಬಡವರು, ದೇಶದ ಹಳ್ಳಿಗಳು, ರೈತರು, ಮಹಿಳೆಯರು, ವಿಜ್ಞಾನ ಸೇರಿದಂತೆ ಎಲ್ಲಾ ವಿಚಾರಗಳ ಬಗ್ಗೆ ಮಾತಾಡಿದ್ದಾರೆ. ಭಾರತದ ಅಭಿವೃದ್ಧಿಯ ಧ್ವನಿ ಸಂಸತ್ ನಲ್ಲಿ ಪ್ರತಿಧ್ವನಿಸಿದೆ. 
21ನೇ ಶತಮಾನದ ಮೊದಲ ಕಾಲುಭಾಗ ಮುಗಿದು ಹೋಗಿದೆ. ಇನ್ನೊಂದು ಕಾಲುಭಾಗ ಆರಂಭವಾಗಿದೆ. ಸ್ವಾತಂತ್ರ್ಯದ ಶತಮಾನೋತ್ಸವದಲ್ಲಿ ಮತ್ತೊಂದು ಕಾಲುಭಾಗ ಬರಲಿದೆ. 21ನೇ ಶತಮಾನದ ಮತ್ತೊಂದು ಕಾಲುಭಾಗ ಭಾರತದ ಅಭಿವೃದ್ಧಿಗೆ ಮೀಸಲು. 
ನಾವು ನಿಲ್ಲುವುದಿಲ್ಲ, ಹಿಂದೆ ತಿರುಗಿ ನೋಡುವುದೂ ಇಲ್ಲ. ವಿಕಸಿತ ಭಾರತ ಅಭಿವೃಧ್ಧಿ ಪಥದಲ್ಲಿ ಮುನ್ನುಗ್ಗುತ್ತಿದೆ ಎಂದರು.
ನಿನ್ನೆ ಮಾಡಬೇಕಿದ್ದ ಭಾಷಣ ಇಂದು ಏಕೆ ಗೊತ್ತೇ?;
ಪ್ರಧಾನಿ ಮೋದಿ ಅವರ ಮೇಲೆ ದಾಳಿ ನಡೆಸಲು ಕಾಂಗ್ರೆಸ್ ಸಂಸದರು ಯೋಜನೆ ರೂಪಿಸಿದ್ದಾರೆ ಎಂಬ ಮಾಹಿತಿ ತಿಳಿದುಬಂದಿತ್ತು. ವಿರೋಧ ಪಕ್ಷಗಳ ಸಂಸದರು ಅನಿರೀಕ್ಷಿತ ರೀತಿಯಲ್ಲಿ ನಡೆದುಕೊಳ್ಳಬಹುದು ಎಂಬ ಖಚಿತ ಮಾಹಿತಿ ಇತ್ತು. ಪ್ರಜಾಪ್ರಭುತ್ವದ ದೇವಾಲಯದಲ್ಲಿ ಅಹಿತಕರ ಘಟನೆಯನ್ನ ತಡೆಯಲು ಸದನವನ್ನು ಮುಂದೂಡಲಾಯಿತು ಸ್ಪೀಕರ್ ಓಂ ಬಿರ್ಲಾ ಸ್ಪಷ್ಟಪಡಿಸಿದ್ದಾರೆ.
ಖರ್ಗೆ ಆರೋಗ್ಯ ವಿಚಾರಿಸಿದ ಮೋದಿ:
ಮೋದಿ ಅವರು ಭಾಷಣ ಆರಂಭಿಸುತ್ತಿದ್ದಂತೆ ವಿಪಕ್ಷಗಳು ಗದ್ದಲ ಆರಂಭಿಸಿದವು. ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರೂ ನಿಂತುಕೊಂಡೇ ಪ್ರತಿಭಟಿಸುತ್ತಿದ್ದರು ಆಗ ಪ್ರಧಾನಿ ಮೋದಿ ಅವರು, ರಾಜಕೀಯವನ್ನು ಬದಿಗಿಟ್ಟು, ಖರ್ಗೆ ಅವರ ಆರೋಗ್ಯ ಕುರಿತು ಕಾಳಜಿ ವಹಿಸಿದರು.
ಸಭಾಪತಿಗಳೇ, ಖರ್ಗೆ ಅವರು ಎದ್ದು ನಿಂತು ವಿರೋಧ ಮಾಡುತ್ತಿದ್ದಾರೆ. ದಯವಿಟ್ಟು ಅವರನ್ನು ಕೂರಲು ಹೇಳಿ. ಅವರಿಗೆ ವಯಸ್ಸಾಗಿದೆ, ಅವರ ಆರೋಗ್ಯ ಮುಖ್ಯ. ಅವರು ಕುಳಿತುಕೊಂಡೇ ವಿರೋಧ ಮಾಡಲಿ, ನನ್ನದೇನೂ ತಕರಾರಿಲ್ಲ ಎಂದರು. ಈ ವಿಡಿಯೋ ಸಾಕಷ್ಟು ವೈರಲ್‌ ಆಗಿದ್ದು ಮೆಚ್ಚುಗೆಗೆ ಪಾತ್ರವಾಗಿದೆ.‌
ಮೋದಿ ಭಾಷಣ ಆರಂಭಿಸಿದ ಕೆಲ ಹೊತ್ತಿನಲ್ಲೇ ವಿಪಕ್ಷಗಳು ಸಭಾತ್ಯಾಗ ಮಾಡಿದವು. ಆಗ ಮೋದಿ "ಸತ್ಯ ಕೇಳಲು ಶಕ್ತಿ ಬೇಕು, ವಿಪಕ್ಷಗಳಿಗೆ ಆ ಶಕ್ತಿ ಇಲ್ಲ. ಸುಳ್ಳು ಹೇಳುವವರಿಗೆ ಸತ್ಯದ ಎದುರು ಕೂರುವ ಧೈರ್ಯ ಇಲ್ಲ ಎಂದು ಕಿಚಾಯಿಸಿದರು.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.