ನವದೆಹಲಿ: ರಾಷ್ಟ್ರಪತಿಗಳ ಭಾಷಣದ ಮೇಲೆ ವಂದನಾ ನಿರ್ಣಯ ಕುರಿತು ರಾಜ್ಯಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಷಣ ಆರಂಭಿಸಿದ್ದಾರೆ.
ಅವರು ಮಾತನಾಡುತ್ತಾ ವಿಕಸಿತ ಭಾರತದಲ್ಲಿ ದೇಶ ವೇಗವಾಗಿ ಅಭಿವೃದ್ಧಿಯಾಗುತ್ತಿದೆ. ರಾಷ್ಟ್ರಪತಿಗಳು ಉತ್ತಮವಾಗಿ ಸಂವೇದನಾಶೀಲರಾಗಿ ಸರ್ಕಾರದ ಯೋಜನೆಗಳನ್ನು ವಿವರಿಸಿದ್ದಾರೆ. ಈ ದೇಶದ ಮಧ್ಯಮವರ್ಗ, ಬಡವರು, ದೇಶದ ಹಳ್ಳಿಗಳು, ರೈತರು, ಮಹಿಳೆಯರು, ವಿಜ್ಞಾನ ಸೇರಿದಂತೆ ಎಲ್ಲಾ ವಿಚಾರಗಳ ಬಗ್ಗೆ ಮಾತಾಡಿದ್ದಾರೆ. ಭಾರತದ ಅಭಿವೃದ್ಧಿಯ ಧ್ವನಿ ಸಂಸತ್ ನಲ್ಲಿ ಪ್ರತಿಧ್ವನಿಸಿದೆ ಎಂದರು.
21ನೇ ಶತಮಾನದ ಮೊದಲ ಕಾಲುಭಾಗ ಮುಗಿದು ಹೋಗಿದೆ. ಇನ್ನೊಂದು ಕಾಲುಭಾಗ ಆರಂಭವಾಗಿದೆ. ಸ್ವಾತಂತ್ರ್ಯದ ಶತಮಾನೋತ್ಸವದಲ್ಲಿ ಮತ್ತೊಂದು ಕಾಲುಭಾಗ ಬರಲಿದೆ. 21ನೇ ಶತಮಾನದ ಮತ್ತೊಂದು ಕಾಲುಭಾಗ ಭಾರತದ ಅಭಿವೃದ್ಧಿಗೆ ಮೀಸಲಾಗಿದೆ. ನಾವು ನಿಲ್ಲುವುದಿಲ್ಲ, ಹಿಂದೆ ತಿರುಗಿ ನೋಡುವುದೂ ಇಲ್ಲ. ವಿಕಸಿತ ಭಾರತ ಅಭಿವೃಧ್ಧಿ ಪಥದಲ್ಲಿ ಮುನ್ನುಗ್ಗುತ್ತಿದೆ ಎಂದರು.
ಜಗತ್ತಿನ ಸಮೃದ್ಧ ದೇಶಗಳೂ ವಯಸ್ಸಾಗುತ್ತಾ ಹೋಗುತ್ತಿದೆ. ಅಲ್ಲಿನ ಜನಸಂಖ್ಯೆ ವಯಸ್ಸಿನ ಕಟ್ಟಕಡೆಯ ಹಂತ ತಲುಪಿದೆ. ನಮ್ಮ ದೇಶ ದಿನದಿಂದ ದಿನಕ್ಕೆ ಯೌವನಕ್ಕೆ ಕಾಲಿಡ್ತಾ ಇದೆ. ದೊಡ್ಡ ದೊಡ್ಡ ಆರ್ಥಿಕತೆಗಳಲ್ಲಿ ಭಾರತದ ಬೆಳವಣಿಗೆಯೂ ಹೆಚ್ಚಿದೆ. ಹೆಚ್ಚಿನ ಬೆಳವಣಿಗೆ, ಕಡಿಮೆ ಹಣದುಬ್ಬರ ಇದರ ಲಕ್ಷಣವಾಗಿದೆ.
ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದಾಗ ಆರ್ಥಿಕತೆಯಲ್ಲಿ 6ನೇ ಸ್ಥಾನದಲ್ಲಿತ್ತು. ಇವರೆಲ್ಲಾ ಸೇರಿ 11ನೇ ಸ್ಥಾನಕ್ಕೆ ಇಳಿಸಿಬಿಟ್ಟಿದ್ದರು. ನಾವು ಅಧಿಕಾರಕ್ಕೆ ಬಂದ ಬಳಿಕ 3ನೇ ಸ್ಥಾನಕ್ಕೆ ಬಂದಿದ್ದೇವೆ. ಇಂದು ಭಾರತ ಹಲವು ದೇಶಗಳ ವಿಶ್ವಸನೀಯ ಪಾರ್ಟ್ ನರ್ ಆಗಿದೆ. ಇಂದು ಇಡೀ ಜಗತ್ತು ಗ್ಲೋಬಲ್ ಸೌತ್ ಬಗ್ಗೆ ಮಾತಾಡ್ತಿದೆ. ಇದರಲ್ಲಿ ಭಾರತ ಜಾಗತಿಕ ಮಟ್ಟದಲ್ಲಿ ಗ್ಲೋಬಲ್ ಸೌತ್ ನ ಗಟ್ಟಿ ಧ್ವನಿಯಾಗಿದೆ. ಜಗತ್ತಿನ 9 ದೊಡ್ಡ ದೇಶಗಳ ಜೊತೆಗೆ ನಮ್ಮ ವಾಣಿಜ್ಯ ಒಪ್ಪಂದ ಆಗಿದೆ.
ಏಕಕಾಲಕ್ಕೆ 37 ದೇಶಗಳ ಜೊತೆಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ವಿಶ್ವಮಿತ್ರ, ವಿಶ್ವಬಂಧು ರೀತಿಯಲ್ಲಿ ಭಾರತ ಇದೆ. ವಿಶ್ವದ ಎಲ್ಲಾ ರಾಷ್ಟ್ರಗಳ ಜೊತೆ ಭಾರತಕ್ಕೆ ಉತ್ತಮ ಬಾಂಧವ್ಯ ಇದೆ. ಜಗತ್ತಿನ ಯಾವುದೇ ದೇಶ ನಮ್ಮೊಂದಿಗೆ ಒಪ್ಪಂದಕ್ಕೆ ಎಂದು ಹೇಳಿದರು.
ಇಂದು ಎಲ್ಲಾ ಕ್ಷೇತ್ರಗಳಲ್ಲಿ ಭಾರತ ಮುಂದುವರೆದಿದೆ. ಬಾಹ್ಯಾಕಾಶ, ವಿಜ್ಞಾನ ಸೇರಿ ಎಲ್ಲಾ ಕಡೆ ಆತ್ಮವಿಶ್ವಾಸ ಇದೆ. 9 ದೇಶಗಳ ಜೊತೆ ಭಾರತ ಮಹತ್ವದ ಒಪ್ಪಂದ ಮಾಡಿಕೊಂಡಿದೆ. ಕೊರೊನಾ ಬಳಿಕ ಪ್ರಪಂಚದಲ್ಲಿ ಸಂಕಷ್ಟ ಎದುರಾಗಿತ್ತು ಎಂದು ತಿಳಿಸಿದರು.