2026-03-07 06:56:06

People are waiting to remove the state Congress government | ರಾಜ್ಯ ಕಾಂಗ್ರೆಸ್ ಸರ್ಕಾರ ಕಿತ್ತೊಗೆಯಲು ಜನ ಕಾಯುತ್ತಿದ್ದಾರೆ ಬಸವರಾಜ ಬೊಮ್ಮಾಯಿ | Speed News Kannada

People are waiting to remove the state Congress government | ರಾಜ್ಯ ಕಾಂಗ್ರೆಸ್ ಸರ್ಕಾರ ಕಿತ್ತೊಗೆಯಲು ಜನ ಕಾಯುತ್ತಿದ್ದಾರೆ ಬಸವರಾಜ ಬೊಮ್ಮಾಯಿ | Speed News Kannada

ಹಾವೇರಿ: ಕರ್ನಾಟಕ ಕಾಂಗ್ರೆಸ್ ಸರ್ಕಾರದ ಕುರ್ಚಿಯ ಗುದ್ದಾಟ ಬಜೆಟ್ ನಂತರ ಅಂತಿಮ ಘಟಕ್ಕೆ ತಲುಪಲಿದ್ದು ಕಾದಾಟವೇ ನಡೆಯಲಿದೆ. ಸಂಧಾನ ಸಾಧ್ಯವೇ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಲಿದೆ. ಅದು ಯಾವ ರೀತಿ ಸಾಗಲಿದೆ ಎಂದು ಕಾದು ನೋಡಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಹಾವೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಸರ್ಕಾರದ ಮೇಲೆ ಜನರ ವಿಶ್ವಾಸ ಸಂಪೂರ್ಣ ಹೋಗಿದೆ. ಸರ್ಕಾರ ಕಿತ್ತೊಗೆಯಲು ಕಾಯುತ್ತಿದ್ದಾರೆ. ಈಗ ಅದರ ಕಾವು ಶಾಸಕರಿಗೆ ಮುಟ್ಟುತ್ತಿದೆ. ಅನಿಶ್ಚಿತೆಯ ವಾತಾವರಣವಿದ್ದು, ಮತ್ತೊಮ್ಮೆ ಆರಿಸಿ ಬರುವುದಿಲ್ಲ ಎನ್ನುವ ಆತಂಕ ಶಾಸಕರಿಗಿದೆ. ಕೆಲವರು ವಿದೇಶಕ್ಕೆ ಕೆಲವರು ರೆಸಾರ್ಟ್‌ಗೆ ಹೋಗುತ್ತಿದ್ದಾರೆ. ಕಾಂಗ್ರೆಸ್ ಹೈಕಮಾಂಡ್‌ ನಿಯಂತ್ರಿಲು ಯಾವುದೇ ಶಕ್ತಿ ಇಲ್ಲ. ಮುಂಬರುವ ದಿನಗಳಲ್ಲಿ ಮನೆಗೆ ಕಳುಹಿಸುತ್ತಾರೆ ಎಂದು ಹೇಳಿದರು.
ಶಿವಮೊಗ್ಗದಲ್ಲಿ  ನಡೆದ ಅಪ್ರಾಪ್ತ ಬಾಲಕನ ಕೊಲೆಯ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಶಿವಮೊಗ್ಗದ ಘಟನೆ ಅತ್ಯಂತ ಮನಸಿಗೆ ನೋವಾಗುವಂತದ್ದು ಸಣ್ಣ ವಯಸ್ಸಿನಲ್ಲಿ ಗಾಂಜಾ ಸೇದಿದ್ದಾರೆ ಎನ್ನುವ ಸಂಶಯ ಶುರುವಾಗಿದೆ. ಕರ್ನಾಟಕದಲ್ಲಿ ಗಾಂಜಾ ಬಳಕೆ ಶಾಲೆ ಮಟ್ಟಕ್ಕೆ ಹೋಗಿದೆ. ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು. ಸಣ್ಣ ಮಕ್ಕಳಲ್ಲಿ ಈ ರೀತಿಯ ಕೋಮು ಭಾವನೆ ಮೂಡಿದರೆ ಸಮಾಜ ಮುಂದೆ ಹೇಗೆ ಹೋಗುತ್ತದೆ?. ಇವರು ಕೇವಲ ಕುರ್ಚಿ ಸಲುವಾಗಿ ಕಚ್ಚಾಡುತ್ತ ಕುಳಿತರೆ ಸಮಾಜ ಹೇಗೆ ನಡೆಯುತ್ತದೆ. ರಾಜ್ಯ ಸರ್ಕಾರ ಕಾನೂನು ಸುವ್ಯವಸ್ಥೆ ಅಷ್ಟೇ ಅಲ್ಲ, ಸಾಮಾಜಿಕ ಸಾಮರಸ್ಯ ಕಾಯ್ದುಕೊಂಡು ಹೋಗಲು ವಿಫಲವಾಗಿದೆ ಎಂದು ಆರೋಪಿಸಿದರು.
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಬಿಜೆಪಿಯ ಅತ್ಯಂತ ಹಿರಿಯ ನಾಯಕರು. ರಾಜ್ಯದಲ್ಲಿ ಬಿಜೆಪಿ ಕಟ್ಟಿ ಬೆಳೆಸಿದ ಧೀಮಂತ ನಾಯಕರು, ಬಿಜೆಪಿಯನ್ನು ರಾಜ್ಯದ ಮೂಲೆ ಮೂಲೆಯಲ್ಲಿ ಕಟ್ಟಿ ಬೆಳೆಸಿದ್ದಾರೆ. ಅವರು ಯಾತಕ್ಕಾಗಿ ಹೋರಾಟ ಮಾಡಿದ್ದರು ಅದನ್ನು ಅಧಿಕಾರದಲ್ಲಿದ್ದಾಗ ಮಾಡಿದ್ದಾರೆ. ಹೀಗಾಗಿ ಜನ ಮಾನಸದಲ್ಲಿ ಉಳಿಸಿದ್ದಾರೆನಾವೆಲ್ಲರೂ ಸಂತೋಷದಿಂದ ಬಿಜೆಪಿ ಕಟ್ಟಲು ಅವರ ಆಶೀರ್ವಾದ ಮಾರ್ಗದರ್ಶನ ಪಡೆದುಕೊಳ್ಳುತ್ತೇವೆ. ಅವರೊಂದು ಆಸ್ತಿ ಮತ್ತು ಶಕ್ತಿ ಅದನ್ನು ಬಳಕೆ ಮಾಡಿಕೊಳ್ಳುವುದರಲ್ಲಿ ತಪ್ಪಿಲ್ಲ ಎಂದರು.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.