2026-03-07 06:29:03

Panneerselvam join DMK | ಓ. ಪನ್ನೀರಸೆಲ್ವಂ ಡಿಎಂಕೆ ಸೇರಲಿದ್ದಾರೆಯೇ ಹೌದು ಎನ್ನುತ್ತವೆ ಬೆಳವಣಿಗೆಗಳು | Speed News Kannada

Panneerselvam join DMK | ಓ. ಪನ್ನೀರಸೆಲ್ವಂ ಡಿಎಂಕೆ ಸೇರಲಿದ್ದಾರೆಯೇ ಹೌದು ಎನ್ನುತ್ತವೆ ಬೆಳವಣಿಗೆಗಳು | Speed News Kannada

ಚೆನ್ನೈ: ಎಐಎಡಿಎಂಕೆ ಪಕ್ಷದಿಂದ ಉಚ್ಚಾಟನೆಗೊಂಡಿರುವ ಓ. ಪನ್ನೀರಸೆಲ್ವಂ ಡಿಎಂಕೆ ಸೇರಲಿದ್ದಾರೆಯೇ? ಹೀಗೊಂದು ಸುದ್ದಿ ಹರಿದಾಡುತ್ತಿದೆ. ಸುದ್ದಿಗೆ ಪುಷ್ಠಿ ನೀಡುವಂತೆ ಪನ್ನೀರಸೆಲ್ವಂ ಇಂದು ಸಚಿವಾಲಯದಲ್ಲಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ. 
ನಂತರ ಮಾತನಾಡಿದ ಅವರು ಡಿಎಂಕೆ ಪಕ್ಷವೇ 2026 ರ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಎಂ.ಕೆ. ಸ್ಟಾಲಿನ್  ಅವರು ಮುಖ್ಯಮಂತ್ರಿಯಾಗಿ 5 ವರ್ಷ ಪೂರ್ಣಗೊಳಿಸಿದ್ದು, ಅವರನ್ನು ಭೇಟಿಯಾಗಿ ಅಭಿನಂದನೆ ತಿಳಿಸಿದ್ದೇನೆ ಎಂದರು.
ಎಐಎಡಿಎಂಕೆ ಪಕ್ಷದ ಇನ್ನೂ ಕೆಲವು ಶಾಸಕರು ಸಿಎಂ  ಸ್ಟಾಲಿನ್ ಅವರನ್ನು ಬೆಂಬಲಿಸಿದ್ದಾರೆ. ಸತತ ಎರಡನೇ ಭಾರಿಗೆ ಡಿಎಂಕೆ ಸರ್ಕಾರ ರಚಿಸುವುದು ಖಚಿತ. ಜನರೂ ಅದನ್ನೇ ಹೇಳುತ್ತಿದ್ದಾರೆ. ಏಕೆಂದರೆ ಸ್ಟಾಲಿನ್ ಅವರ ಕೆಲಸಗಳು ಆ ರೀತಿ ಇವೆ ಎಂದರು.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.