2026-03-07 06:15:30

Pakistan spinner | ಪಾಕಿಸ್ತಾನ್ ಸ್ಪಿನ್ನರ್ ನನ್ನ ಕೈಯಲ್ಲಿ ಎರಡು ಮೊಣಕೈಗಳಿವೆ ಅದಕ್ಕೆ ಹಿಂಗೆ ಬೌಲಿಂಗ್ ಮಾಡ್ತೀನಿ | Speed News Kannada

Pakistan spinner | ಪಾಕಿಸ್ತಾನ್ ಸ್ಪಿನ್ನರ್ ನನ್ನ ಕೈಯಲ್ಲಿ ಎರಡು ಮೊಣಕೈಗಳಿವೆ ಅದಕ್ಕೆ ಹಿಂಗೆ ಬೌಲಿಂಗ್ ಮಾಡ್ತೀನಿ | Speed News Kannada

ಪಾಕಿಸ್ತಾನ್ ಸ್ಪಿನ್ನರ್ ಉಸ್ಮಾನ್ ತಾರಿಖ್ ಸಖತ್ ಸುದ್ದಿಯಲ್ಲಿದ್ದಾರೆ. ಈ ಬಾರಿ ಅವರು ಸುದ್ದಿಯಾಗಿರುವುದು ಮೊಣಕೈ ವಿಚಾರದಿಂದ. ಅಂದರೆ ನನ್ನ ಬಲಗೈನಲ್ಲಿ ಎರಡು ಮೊಣಕೈಗಳಿವೆ ಎಂಬ ವಿಚಾರವನ್ನು ಉಸ್ಮಾನ್ ತಾರಿಖ್ ಬಹಿರಂಗಪಡಿಸಿದ್ದಾರೆ. ಇದೇ ಕಾರಣದಿಂದಾಗಿ ನನ್ನ ಬೌಲಿಂಗ್ ಶೈಲಿ ವಿಭಿನ್ನವಾಗಿ ಎಂದಿದ್ದಾರೆ.
'ಡಬಲ್ ಎಲ್ಲೋ' (double elbow) ಅಥವಾ ಎರಡು ಮೊಣಕೈಗಳ ವಿಶಿಷ್ಟ ಜೈವಿಕ ರಚನೆಯಿಂದಾಗಿ ಬೌಲಿಂಗ್ ಮಾಡುವಾಗ ನನ್ನ ಕೈ ಬಗ್ಗಿದಂತೆ ಕಾಣುತ್ತದೆ. ಇದೇ ಕಾರಣದಿಂದಾಗಿ ನನ್ನ ಬೌಲಿಂಗ್ ಶೈಲಿ ನಿಮಗೆ ವಿಭಿನ್ನವಾಗಿ ಕಾಣಿಸುತ್ತಿದೆ ಎಂದು ಉಸ್ಮಾನ್ ತಾರಿಖ್ ಹೇಳಿದ್ದಾರೆ. ಒಂದೇ ಕೈನಲ್ಲಿ ಎರಡು ಮೊಣಕೈ ಇರುವುದನ್ನು ವೈದ್ಯಕೀಯವಾಗಿ ಹೈಪರ್-ಮೊಬಿಲಿಟಿ ಅಥವಾ ಡಬಲ್ ಜಾಯಿಂಟ್ ಎನ್ನಲಾಗುತ್ತದೆ. ಇದರಿಂದಾಗಿ ತಮ್ಮ ಕೈಯನ್ನು ಸಂಪೂರ್ಣವಾಗಿ ನೇರಗೊಳಿಸಲು ಸಾಧ್ಯವಿಲ್ಲ ಎಂದು ಉಸ್ಮಾನ್ ಹೇಳಿದ್ದಾರೆ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.