ಪಾಕಿಸ್ತಾನ್ ಸ್ಪಿನ್ನರ್ ಉಸ್ಮಾನ್ ತಾರಿಖ್ ಸಖತ್ ಸುದ್ದಿಯಲ್ಲಿದ್ದಾರೆ. ಈ ಬಾರಿ ಅವರು ಸುದ್ದಿಯಾಗಿರುವುದು ಮೊಣಕೈ ವಿಚಾರದಿಂದ. ಅಂದರೆ ನನ್ನ ಬಲಗೈನಲ್ಲಿ ಎರಡು ಮೊಣಕೈಗಳಿವೆ ಎಂಬ ವಿಚಾರವನ್ನು ಉಸ್ಮಾನ್ ತಾರಿಖ್ ಬಹಿರಂಗಪಡಿಸಿದ್ದಾರೆ. ಇದೇ ಕಾರಣದಿಂದಾಗಿ ನನ್ನ ಬೌಲಿಂಗ್ ಶೈಲಿ ವಿಭಿನ್ನವಾಗಿ ಎಂದಿದ್ದಾರೆ.
'ಡಬಲ್ ಎಲ್ಲೋ' (double elbow) ಅಥವಾ ಎರಡು ಮೊಣಕೈಗಳ ವಿಶಿಷ್ಟ ಜೈವಿಕ ರಚನೆಯಿಂದಾಗಿ ಬೌಲಿಂಗ್ ಮಾಡುವಾಗ ನನ್ನ ಕೈ ಬಗ್ಗಿದಂತೆ ಕಾಣುತ್ತದೆ. ಇದೇ ಕಾರಣದಿಂದಾಗಿ ನನ್ನ ಬೌಲಿಂಗ್ ಶೈಲಿ ನಿಮಗೆ ವಿಭಿನ್ನವಾಗಿ ಕಾಣಿಸುತ್ತಿದೆ ಎಂದು ಉಸ್ಮಾನ್ ತಾರಿಖ್ ಹೇಳಿದ್ದಾರೆ. ಒಂದೇ ಕೈನಲ್ಲಿ ಎರಡು ಮೊಣಕೈ ಇರುವುದನ್ನು ವೈದ್ಯಕೀಯವಾಗಿ ಹೈಪರ್-ಮೊಬಿಲಿಟಿ ಅಥವಾ ಡಬಲ್ ಜಾಯಿಂಟ್ ಎನ್ನಲಾಗುತ್ತದೆ. ಇದರಿಂದಾಗಿ ತಮ್ಮ ಕೈಯನ್ನು ಸಂಪೂರ್ಣವಾಗಿ ನೇರಗೊಳಿಸಲು ಸಾಧ್ಯವಿಲ್ಲ ಎಂದು ಉಸ್ಮಾನ್ ಹೇಳಿದ್ದಾರೆ.