ಪಾಕಿಸ್ತಾನ : ಬಲೂಚಿಸ್ತಾನ್ ಬಂಡುಕೋರ ಗುಂಪು ಬಲೂಚಿಸ್ತಾನ್ ಲಿಬರೇಶನ್ ಆರ್ಮಿ ತನ್ನ ನಿರಂತರ ದಾಳಿಯನ್ನು ‘ಆಪರೇಷನ್ ಹೆರೋಫ್ ಫೇಸ್ I’ ಎಂದು ಕರೆದಿದೆ. ಕ್ವೆಟ್ಟಾ ಮತ್ತು ನೋಶ್ಕಿಯ ಕೆಲವು ಭಾಗಗಳಲ್ಲಿ ಪಾಕಿಸ್ತಾನದ ಮಿಲಿಟರಿ ಉಪಸ್ಥಿತಿಯನ್ನು ಹಿಂದಿಕ್ಕಲಾಗಿದೆ ಎಂದು ಬಲೂಚಿಸ್ತಾನ್ ಲಿಬರೇಶನ್ ಆರ್ಮಿ (ಬಿಎಲ್‌ಎ) ಗುಂಪು ಹೇಳಿಕೊಂಡಿದೆ. ಇಸ್ಲಾಮಾಬಾದ್‌ನ ಮಿಲಿಟರಿ ನಿಯಂತ್ರಣ ಕಡಿಮೆಯಾಗಿದೆ ಎಂದು ಪ್ರತಿಪಾದಿಸಿದೆ. ಇದರಿಂದ ಪಾಕಿಸ್ತಾನ ಸೈನಿಕರು ಇದೀಗ ಬಲೂಚಿಸ್ತಾನ ಹೊಡೆತಕ್ಕೆ ನಿದ್ದೆಯಲ್ಲೂ ಕನವರಿಸುವಂತೆ ಆಗಿದೆ. ಈ ದಾಳಿ ಕಳೆದ 40 ಗಂಟೆಗಳಿಗೂ ಹೆಚ್ಚು ಕಾಲ ಮುಂದುವರೆದಿದ್ದು, ಇದರಿಂದ ಪಾಕಿಸ್ತಾನ ಸೇನೆ ಛಿದ್ರಛಿದ್ರವಾಗಿದೆ. ಪಾಕಿಸ್ತಾನಿ ಭದ್ರತಾ ಪಡೆಗಳಲ್ಲಿ ಭಾರೀ ಸಾವುನೋವುಗಳು ಸಂಭವಿಸಿವೆ ಮತ್ತು ಹಲವು ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ನಿಯಂತ್ರಣ ಸಾಧಿಸಿರುವುದಾಗಿ ಬಿಎಲ್‌ಎ ಪ್ರತಿಪಾದಿಸಿದೆ.