2026-03-07 06:23:50

Padmasree Prashasti | ಸುಶೀಲಮ್ಮ, ಡಾ.ಸುರೇಶ್‌, ಅಂಕೇಗೌಡರಿಗೆ ಪದ್ಮ ಪ್ರಶಸ್ತಿ| Speed News Kannada

Padmasree Prashasti | ಸುಶೀಲಮ್ಮ, ಡಾ.ಸುರೇಶ್‌, ಅಂಕೇಗೌಡರಿಗೆ ಪದ್ಮ ಪ್ರಶಸ್ತಿ| Speed News Kannada

ನವದೆಹಲಿ, ಜನವರಿ 25: 2026ನೇ ಸಾಲಿನ ಅತ್ಯುನ್ನತ ನಾಗರಿಕ ಪ್ರಶಸ್ತಿ ಪದ್ಮವಿಭೂಷಣ, ಪದ್ಮಭೂಷಣ, ಪದ್ಮಶ್ರೀ ಪ್ರಶಸ್ತಿಯ ಪಟ್ಟಿ ಪ್ರಕಟವಾಗಿದೆ. ವಿವಿಧ ಕ್ಷೇತ್ರಗಳಲ್ಲಿನ ಸಾಧಕರನ್ನು ಗುರುತಿಸಿ ಈ ಪ್ರಶಸ್ತಿಗಳನ್ನು ನೀಡಲಾಗಿದೆ. ಇದರಲ್ಲಿ 5 ಸಾಧಕರಿಗೆ ಪದ್ಮವಿಭೂಷಣ, 13 ಸಾಧಕರಿಗೆ ಪದ್ಮಭೂಷಣ, 113 ಸಾಧಕರಿಗೆ  ಪದ್ಮಶ್ರೀ ಪ್ರಶಸ್ತಿ ಪ್ರಕಟವಾಗಿದೆ. ಆ ಪೈಕಿ ಕರ್ನಾಟಕದ ಶತಾವಧಾನಿ ಆರ್​​. ಗಣೇಶ್​​ಗೆ ಪದ್ಮಭೂಷಣ ಪ್ರಶಸ್ತಿ ಲಭಿಸಿದೆ. ಉಳಿದಂತೆ 7 ಮಂದಿ ಪದ್ಮಶ್ರೀಗೆ ಭಾಜನರಾಗಿದ್ದಾರೆ.
ಈ ವರ್ಷ ಕರ್ನಾಟಕದ 7 ಸಾಧಕರು ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ. ‘ಪುಸ್ತಕ ಮನೆ’ ಗ್ರಂಥಾಲಯ ನಿರ್ಮಿಸಿರುವ ಮಂಡ್ಯ ಜಿಲ್ಲೆಯ ಅಂಕೇಗೌಡ ಅವರಿಗೆ ಸಾಹಿತ್ಯ & ಶಿಕ್ಷಣದಲ್ಲಿನ ಸಾಧನೆಗಾಗಿ ಪ್ರಶಸ್ತಿ, ಸಮಾಜಸೇವೆಗಾಗಿ ಬೆಂಗಳೂರಿನ ಸುಮಂಗಲಿ ಸೇವಾಶ್ರಮದ ಎಸ್‌.ಜಿ.ಸುಶೀಲಮ್ಮ, ವೈದ್ಯಕೀಯ ಕ್ಷೇತ್ರದಿಂದ ದಾವಣಗೆರೆಯ ವೈದ್ಯ ಡಾ.ಸುರೇಶ್‌ ಹನಗವಾಡಿ ಅವರಿಗೆ ಪದ್ಮಶ್ರೀ ಪ್ರಶಸ್ತಿ ಪ್ರಕಟವಾಗಿದೆ.
ಪದ್ಮ ವಿಭೂಷಣ ಪ್ರಶಸ್ತಿ ಪುರಸ್ಕೃತರು: ಮಹಾರಾಷ್ಟ್ರದ ಧರ್ಮೇಂದ್ರ ಸಿಂಗ್​​(ಕಲೆ), ಕೇರಳದ ಕೆ.ಟಿ.ಧಾಮಸ್(ಸಾರ್ವಜನಿಕ ಆಡಳಿತ), ಉತ್ತರ ಪ್ರದೇಶದ ಎನ್​​, ರಾಜಮ್(ಕಲೆ), ಪಿ.ನಾರಾಯಣನ್(ಸಾಹಿತ್ಯ ಮತ್ತು ಶಿಕ್ಷಣ), ವಿ.ಎಸ್​​. ಅಚ್ಯುತಾನಂದನ್(ಸಾರ್ವಜನಿಕ ಆಡಳಿತ).
ಪದ್ಮ ಭೂಷಣ ಪ್ರಶಸ್ತಿ ಪುರಸ್ಕೃತರು: ಕರ್ನಾಟಕದ ಶತಾವಧಾನಿ ಆರ್‌.ಗಣೇಶ್‌(ಕಲೆ), ಹಿನ್ನೆಲೆ ಗಾಯಕಿ ಅಲ್ಕಾ ಯಾಗ್ನಿಕ್‌(ಕಲೆ), ಜಾರ್ಖಂಡ್‌ ಮಾಜಿ ಸಿಎಂ ಶಿಬು ಸೊರೇನ್‌(ಸಾರ್ವಜನಿಕ ಆಡಳಿತ)   ಸೇರಿದಂತೆ ಹಲವರಿಗೆ ಪದ್ಮಭೂಷಣ ಪ್ರಶಸ್ತಿಗೆ ಭಾಜನರಾಗಿದ್ದಾರೆ.ಪ್ರತಿವರ್ಷ ಗಣರಾಜ್ಯೋತ್ಸವದ ಹಿಂದಿನ ದಿನ ಪ್ರಶಸ್ತಿ ಪಟ್ಟಿ ಪ್ರಕಟಿಸಲಾಗುತ್ತದೆಯಾದರೂ ಅಧಿಕೃತ ಪದ ಪ್ರದಾನ ಸಮಾರಂಭವು ಮಾರ್ಚ್ ಅಥವಾ ಏಪ್ರಿಲ್‌ನಲ್ಲಿ ರಾಷ್ಟ್ರಪತಿ ಭವನದಲ್ಲಿ ನಡೆಯಲಿದೆ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.