2026-03-07 07:25:42

Owner of a residential school sexually abused children | ವಸತಿ ಶಾಲೆ ಮಾಲೀಕನಿಂದ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಗಂಡನ ಕೃತ್ಯ ಮುಚ್ಚಿಡಲು ಪಪ್ಪಾಯ ತಿನ್ನಿಸುತ್ತಿದ್ದ ಹೆಂಡ್ತಿ | Speed News Kannada

Owner of a residential school sexually abused children | ವಸತಿ ಶಾಲೆ ಮಾಲೀಕನಿಂದ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಗಂಡನ ಕೃತ್ಯ ಮುಚ್ಚಿಡಲು ಪಪ್ಪಾಯ ತಿನ್ನಿಸುತ್ತಿದ್ದ ಹೆಂಡ್ತಿ | Speed News Kannada

ಬೆಂಗಳೂರು, (ಮಾರ್ಚ್ 01): ವಸತಿ ಶಾಲೆ ಮಾಲೀಕ ವಿದ್ಯಾರ್ಥಿಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಇದೀಗ ಜೈಲುಪಾಲಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ಪಟ್ಟಣದಲ್ಲಿ ನಡೆದಿದೆ. ಖಾಸಗಿ ವಸತಿ ಶಾಲೆ ಸಂಸ್ಥೆ ಮಾಲೀಕ ಧನಂಜಯ್ ಎನ್ನುವಾತ, ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಬೆದರಿಕೆ ಹಾಕಿರುವ ಆರೋಪ ಕೇಳಿಬಂದಿದೆ. ಅಲ್ಲದೇ ಪೋಷಕರನ್ನು ಭೇಟಿ ಮಾಡದಂತೆ ಮಕ್ಕಳನ್ನು 15 ದಿನಗಳ ಕಾಲ ವಸತಿ ಶಾಲೆಯಲ್ಲಿ ಕೂಡಿ ಹಾಕಿದ್ದಾನೆ. ಇನ್ನು ಗಂಡನ ನೀಚ ಕೃತ್ಯವನ್ನು ಮುಚ್ಚಿ ಹಾಕಲು ಪತ್ನಿ ಶೈಲಜಾ ಸಹ ಬಾಲಕಿಗೆ ನಿತ್ಯ ಪರಂಗಿ ಹಣನ್ನು ತಿನ್ನಿಸಿ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಲಾಗಿದೆ.
ಮಕ್ಕಳಿಗೆ ಪರೀಕ್ಷೆ ನೆಪದಲ್ಲಿ ಪೋಷಕರನ್ನ ಬೇಟಿ ಮಾಡಲು ಫೋನ್ನಲ್ಲಿ ಮಾತನಾಡಲು ಬಿಡದೆ ಕೂಡಿ ಹಾಕಿದ್ದಾರೆ. ಜೊತೆಗೆ ನಡೆದ ವಿಚಾರ ಯಾರಿಗೂ ಹೇಳದಂತೆ ಆರೋಫಿಗಳಾದ ಧನಂಜಯ್ ಹಾಗೂ ಅವನ ಪತ್ನಿ ಶೈಲಜಾ ಬಾಲಕಿಗೆ ಪರಂಗಿ ಹಣನ್ನ ನಿತ್ಯ ತಿನ್ನಿಸಿ ಕಿರುಕುಳ ನೀಡಿದ್ದಾರೆ. ಇನ್ನೂ 15 ದಿನಗಳ ಕಾಲ ಕಿರಕುಳವನ್ನೆಲ್ಲ ಸಹಿಸಿಕೊಂಡಿದ್ದ ಮಕ್ಕಳು ನಿನ್ನೆ (ಫೆಬ್ರವರಿ 28) ಶಿಕ್ಷಕಿಯೊಬ್ಬರ ಫೋನ್ ನಿಂದ ಪೋಷಕರಿಗೆ ಕರೆ ಮಾಡಿ ಅಳುತ್ತಾ ತಮ್ಮ ಮೇಲಾದ ದೌರ್ಜನ್ಯವನ್ನು ಹೇಳಿದ್ದಾರೆ. ಕೂಡಲೇ ಪೋಷಕರು ಸಹ ಶಾಲೆಗೆ ದೌಡಾಯಿಸಿ ವಿಚಾರಿಸಿದಾಗ ಮಕ್ಕಳು ಹೇಳಿದ ಮಾತನ್ನು ಕೇಳಿ ಶಾಕ್ ಆಗಿದ್ದಾರೆ. ಬಳಿಕ ಪೋಷಕರು, ಲೈಂಗಿಕ ದೌರ್ಜನ್ಯವೆಸಗಿದ ಆರೋಪಿ ಧನಂಜಯ್ ಹಾಗೂ ಆತನ ಪತ್ನಿ ವಿರುದ್ಧ ದೇವನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಈ ದೂರಿನ ಅನ್ವಯ ಪೊಲೀಸರು ಪೋಕೋ ಪ್ರಕರಣ ದಾಖಲಿಸಿಕೊಂಡು ಧನಂಜಯ್ ಹಾಗೂ ಪತ್ನಿ ಶೈಲಾಜಾಳನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.
ವಸತಿ ಶಾಲೆಯ ಬಾಲಕಿಯರಿಗೆ ಲೈಂಗಿಕ ಕಿರುಕುಳ, ಶಾಲೆ ನಡೆಸುತ್ತಿದ್ದ ದಂಪತಿ ಮೇಲೆ ಪೋಕ್ಸ್ ಕೇಸ್! 

ವಾರ್ಡನ್ ರೂಮನಲ್ಲೇ ಕೃತ್ಯ
ಇನ್ನು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆದ ವಿಚಾರ ಗೊತ್ತಾಗ್ತಿದ್ದಂತೆ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವಸತಿ ಶಾಲೆಯಲ್ಲೇ ಮಾಲೀಕ ಧನಂಜಯ್ ವಾರ್ಡನ್ ರೂಮ್‌ನಲ್ಲೇ ಮಂಚ ಎಲ್ಲಾ ಹಾಕಿ ಹೈಫೈ ಮಾಡಿಕೊಂಡಿಕೊಂಡಿರುವುದು ಬೆಳಕಿಗೆ ಬಂದಿದ್ದು, ಅದೇ ಕೊಠಡಿಯಲ್ಲಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ತಿಳಿದುಬಂದಿದೆ.
ಅನಧಿಕೃತ ಹಾಸ್ಟೆಲ್‌ ನಡೆಸುತ್ತಿದ್ದ
ಶಾಲೆಯಲ್ಲಿ ಬಾಲಕಿಯರ ವಸತಿ ಶಾಲೆ ನಡೆಸಲು ಯಾವುದೇ ಅನುಮತಿ ಪಡೆಯದ ಆರೋಪ ಕೇಳಿ ಬಂದಿದ್ದು ಅಕ್ರಮವಾಗಿ ಹಾಸ್ಟೆಲ್ ನಡೆಸುತ್ತಿರುವುದು ಸಹ ತನಿಖೆಯಲ್ಲಿ ಬಯಲಾಗಿದೆ. ಇನ್ನೂ ಇಷ್ಟೆಲ್ಲ ನಡೆಯುತ್ತಿದ್ದರೂ ಬಿಇಒ ಮತ್ತು ಶಿಕ್ಷಣ ಇಲಾಖೆಯ ಅಧಿಕಾರಿಗಳು ಸೈಲೆಂಟ್ ಇದ್ದಿದ್ದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಇನ್ನು ಈ ಬಗ್ಗೆ ಡಿಡಿಪಿಐ ಅವರನ್ನ ಕೇಳಿದರೆ ಇದು ನಮ್ಮ ವ್ಯಾಪ್ತಿಗೆ ಬರಲ್ಲ ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಗೆ ಬರುತ್ತೆ ಎಂದು ಜಾರಿಕೊಂಡಿದ್ದಾರೆ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.