2026-03-07 07:33:57

Over 1000 killed in 6day Gulf War | 6 ದಿನದ ಕೊಲ್ಲಿ ಯುದ್ಧದಲ್ಲಿ 1000ಕ್ಕೂ ಹೆಚ್ಚು ಮಂದಿ ಸಾವು ಟ್ರಂಪ್‌ ಗೆ ಸೆನೆಟ್‌ ಬೆಂಬಲ | Speed News Kannada

Over 1000 killed in 6day Gulf War | 6 ದಿನದ ಕೊಲ್ಲಿ ಯುದ್ಧದಲ್ಲಿ 1000ಕ್ಕೂ ಹೆಚ್ಚು ಮಂದಿ ಸಾವು ಟ್ರಂಪ್‌ ಗೆ ಸೆನೆಟ್‌ ಬೆಂಬಲ | Speed News Kannada

ವಾಷಿಂಗ್ಟನ್: ಕೊಲ್ಲಿ ಸಂಘರ್ಷದಿಂದಾಗಿ ಈಗಾಗಲೇ ಇರಾನ್‌ನಲ್ಲಿ 1,000ಕ್ಕೂ, ಲೆಬನಾನ್‌ನಲ್ಲಿ 70ಕ್ಕೂ ಅಧಿಕ ಮಂದಿ ಹಾಗೂ ಇಸ್ರೇಲ್‌ನಲ್ಲಿ ಸುಮಾರು 12 ಮಂದಿ ಸಾವಿಗೀಡಾಗಿದ್ದಾರೆ ಎಂದು ತಿಳಿದು ಬಂದಿದೆ. ಈ ಯುದ್ಧದಿಂದ ವಿಶ್ವದ ತೈಲ ಹಾಗೂ ಅನಿಲ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದ್ದು, ಅಂತರರಾಷ್ಟ್ರೀಯ ಹಡಗು ಸಾರಿಗೆ ಅಸ್ತವ್ಯಸ್ತಗೊಂಡಿದೆ. ಲಕ್ಷಾಂತರ ಪ್ರವಾಸಿಗರು ಅತಂತ್ರರಾಗಿದ್ದಾರೆ.
ಮತ್ತೊಂದು ಕಡೆ ಇರಾನ್ ಮೇಲೆ ಮಿಲಿಟರಿ ಕಾರ್ಯಾಚರಣೆ ನಡೆಸುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನಿರ್ಧಾರಕ್ಕೆ ಅಮೆರಿಕ ಸೆನೆಟ್ ಬೆಂಬಲ  ಸೂಚಿಸಿದೆ.
ವೈಮಾನಿಕ ಯುದ್ಧವನ್ನು ತಡೆಯಬೇಕು, ಇರಾನ್ ವಿರುದ್ಧದ ಯಾವುದೇ ಕ್ರಮಗಳಿಗೆ ಸಂಸತ್ತಿನ ಅನುಮೋದನೆಯನ್ನು ಕಡ್ಡಾಯಗೊಳಿಸಬೇಕು ಎಂದು ಮಂಡಿಸಲಾಗಿದ್ದ ದ್ವಿಪಕ್ಷೀಯ ನಿರ್ಣಯಕ್ಕೆ ಸೆನೆಟ್‌ನಲ್ಲಿ ಸೋಲು ಉಂಟಾಗಿದೆ. 100 ಮಂದಿ ಸದಸ್ಯರ ಸೆನೆಟ್‌ನಲ್ಲಿ ನಿರ್ಣಯಕ್ಕೆ 52–47 ಮತಗಳ ಅಂತರಿಂದ ಸೋಲಾಯಿತು. ಬಹುತೇಕ ಎಲ್ಲಾ ರಿಪಬ್ಲಿಕನ್ನರು ನಿರ್ಣಯದ ವಿರುದ್ಧ ಹಾಗೂ ಡೆಮಾಕ್ರಟ್ ಸಂಸದರು ಪರವಾಗಿ ಮತದಾನ ಮಾಡಿದರು.
ಟ್ರಂಪ್ ಅವರ ನಿರ್ಧಾರ ಕಾನೂನು ಬದ್ಧವಾಗಿದ್ದು, ಅಮೆರಿಕದ ರಕ್ಷಣೆಗಾಗಿ ಸೀಮಿತ ದಾಳಿಗಳಿಗೆ ಆದೇಶಿಸುವುದು ಸೈನ್ಯದ ಸರ್ವೋಚ್ಚ ಕಮಾಂಡರ್ ಆಗಿ ಟ್ರಂಪ್ ಅವರ ಹಕ್ಕು ಎಂದು ಹೇಳಿ ನಿರ್ಣಯವನ್ನು ತಿರಸ್ಕರಿಸಿದ್ದಾರೆ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.