ನವದೆಹಲಿ: ಒಂದು ರಾಷ್ಟ್ರ, ಒಂದು ಚುನಾವಣೆ ಪ್ರಸ್ತಾವನೆ ಕುರಿತು ದೇಶಾದ್ಯಂತ ಸಮಾಲೋಚನೆ ನಡೆಸುತ್ತಿರುವ ಸಂಸತ್ತಿನ ಜಂಟಿ ಸಂಸದೀಯ ಸಮಿತಿಯ (ಜೆಪಿಸಿ) ಅಧ್ಯಕ್ಷ ಪಿಪಿ ಚೌಧರಿ ಅವರು, ಲೋಕಸಭೆ ಮತ್ತು ರಾಜ್ಯ ವಿಧಾನಸಭಾ ಚುನಾವಣೆಗಳನ್ನು ಏಕಕಾಲದಲ್ಲಿ ನಡೆಸುವುದರಿಂದ ದೇಶಕ್ಕೆ ರೂ.7 ಲಕ್ಷ ಕೋಟಿ ಉಳಿತಾಯವಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರ. ಈ ಹಣವನ್ನು ಅಭಿವೃದ್ಧಿ ಯೋಜನೆಗಳಿಗೆ ಬಳಸಬಹುದು ಎಂದೂ ಅವರು ತಿಳಿಸಿದ್ದಾರೆ.
ಗುಜರಾತ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತದಲ್ಲಿ ಪ್ರತಿ ವರ್ಷ ಐದಾರು ಚುನಾವಣೆಗಳು ನಡೆಯುತ್ತವೆ. ಇದರಿಂದ ಸರರಕಾರದ ಕಾರ್ಯಕ್ರಮಗಳು ಜನತೆಯನು ತಲುಪುವುದಿಲ್ಲ. ಶಿಕ್ಷಕರಿಗೆ ಚುನಾವಣೆಯ ಹೆಚ್ಚುವರಿ ಜವಬ್ದಾರಿ ಬೀಳುತ್ತದೆ. ಜಗತ್ತಿನ ಬೇರೆ ಯಾವುದೇ ದೇಶದಲ್ಲೂ ಈ ರೀತಿ ಚುನಾವಣೆಗಳು ನಡೆಯುವುದಿಲ್ಲ ಎಂದು ಹೇಳಿದರು.
ಏಕಕಾಲದಲ್ಲಿ ಚುನಾವಣೆಗಳನ್ನು ನಡೆಸುವುದರಿಂದ ದೇಶಕ್ಕೆರೂ. 7 ಲಕ್ಷ ಕೋಟಿ ಉಳಿತಾಯವಾಗುತ್ತದೆ ಮತ್ತು ಇದು ದೇಶದ (ಜಿಡಿಪಿ) ಶೇ.1.6 ರಷ್ಟಿದೆ ಎಂದು ಚೌಧರಿ ಹೇಳಿದ್ದಾರೆ.