2026-05-12 04:42:21

No curbs on energy efficiency; PM Modi tells self-reliance;bsavaraja bommai| ಇಂಧನ ಮಿತವ್ಯಯಕ್ಕೆ ಕಡಿವಾಣ ಹಾಕಿಲ್ಲ; ಪ್ರಧಾನಿ ಮೋದಿ ಸ್ವಯಂ ಪಾಲನೆಗೆ ಹೇಳಿದ್ದಾರೆ:ಬಸವರಾಜ ಬೊಮ್ಮಾಯಿ|Speed News Kannada

No curbs on energy efficiency; PM Modi tells self-reliance;bsavaraja bommai| ಇಂಧನ ಮಿತವ್ಯಯಕ್ಕೆ ಕಡಿವಾಣ ಹಾಕಿಲ್ಲ; ಪ್ರಧಾನಿ ಮೋದಿ ಸ್ವಯಂ ಪಾಲನೆಗೆ ಹೇಳಿದ್ದಾರೆ:ಬಸವರಾಜ ಬೊಮ್ಮಾಯಿ|Speed News Kannada

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಇಂಧನ ಮಿತವ್ಯಯದ ವಿಚಾರದಲ್ಲಿ  ಯಾವುದಕ್ಕೂ ಕಡಿವಾಣ ಹಾಕಿಲ್ಲ, ಬದಲಾಗಿ ಸ್ವಯಂ ಪ್ರೇರಿತವಾಗಿ ಪಾಲಿಸಲು ಹೇಳಿದ್ದಾರೆ. ಒಬ್ಬ ನಾಯಕನಾಗಿ ನೈತಿಕತೆ ಇರುವುದರಿಂದ ಕರೆ ಕೊಟ್ಟಿದ್ದಾರೆ‌. ಒಂದು ರೀತಿಯಲ್ಲಿ ಭಾರತ ದೇಶದ ಹಿತಾಸಕ್ತಿಗೆ ವಿರುದ್ದವಾಗಿ ಕಾಂಗ್ರೆಸ್ ನಾಯಕರು ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಸಂಸದ ಬಸವರಾಜ ಬೊಮ್ಮಾಯಿ ವಾಗ್ದಾಳಿ ನಡೆಸಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಪೆಟ್ರೊಲ್, ಡಿಸೆಲ್ , ಅಡುಗೆ ಎಣ್ಣೆ ಮಿತವ್ಯಯದಿಂದ ಬಳಸುವಂತೆ ಮಾಡಿರುವ ಮನವಿಯ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಇಂಧನ ಮಿತವ್ಯಯದ ಬಗ್ಗೆ ನಾನು ಭಾರತೀಯ ನಾಗರಿಕನಾಗಿ ಅಷ್ಟಾದರೂ ಮಾಡಬೇಕು. ಲಾಲ್ ಬಹದ್ದೂರು ಶಾಸ್ತ್ರಿ ಪ್ರಧಾನಿಯಾಗಿದ್ದಾಗ ದೇಶದಲ್ಲಿ ಆಹಾರದ ಕೊರತೆ ಉಂಟಾಗಿದ್ದರಿಂದ ಒಂದು ದಿನ ಉಪವಾಸ ಮಾಡಲು ಹೇಳಿದ್ದರು. ಮೋದಿಯವರು ಶ್ರೀಮಂತರಿಗೆ  ಗ್ಯಾಸ್ ಸಬ್ಸಿಡಿ ಬಿಡಲು ಹೇಳಿದ್ದರು. 6 ಕೋಟಿ ಜನರು ಬಿಟ್ಟಿದ್ದಾರೆ. ಕೊವಿಡ್ ಸಂದರ್ಭದಲ್ಲಿ ಸಾಕಷ್ಡು ಸಲಹೆಗಳನ್ನು ಕೊಟ್ಟಿದ್ದರು. ದೇಶದ ಜನರು ಅದನ್ನು ಪಾಲಿಸಿದ್ದರಿಂದ  ದೇಶದಲ್ಲಿ ಕೊವಿಡ್ ಎದುರಿಸಲು ಸಾಧ್ಯವಾಯಿತು ಎಂದು ಹೇಳಿದರು.

ಪಿ. ಚಿದಂಬರಂ ಅವರು ಹಣಕಾಸು ಸಚಿವರಾಗಿದ್ದಾಗ ಬಂಗಾರದ ಬಗ್ಗೆ ವ್ಯಾಮೊಹ ಬೇಡ ಅಂತ ಹೇಳಿದ್ದರು. ಹಿಂದೆ ಇರಾನ್ ಇರಾಕ್ ಯುದ್ದ ಆದಾಗ ಎರಡೇ ದಿನದಲ್ಲಿ ಪೆಟ್ರೊಲ್ ಬಂಕ್ ಗಳ ಮುಂದೆ ಕಿಲೋ ಮೀಟರ್ ಗಟ್ಟಲೆ ಸಾಲು ಇತ್ತು. ಯುದ್ದ ಶುರುವಾಗಿ ಎರಡು ತಿಂಗಳು ಕಳೆದರೂ ಅಂತಹ ಪರಿಸ್ಥಿತಿ ಇಲ್ಲ. ಜವಾಬ್ದಾರಿಯುತ ಪಕ್ಷವಾಗಿ ಕಾಂಗ್ರೆಸ್‌ ಇಂತಹ ಹೇಳಿಕೆ ನೀಡಬಾರದು ಎಂದರು.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.