2026-06-25 03:54:58

Navy employee arrested for killing lover | ಲವರ್ ಕೊಂದು ಮೃತದೇಹವನ್ನು ತುಂಡರಿಸಿ ಫ್ರೀಡ್ ನಲ್ಲಿಟ್ಟಿದ್ದ ನೌಕಪಡೆಯ ಉದ್ಯೋಗಿ ಬಂಧನ | Speed news Kannada

Navy employee arrested for killing lover | ಲವರ್ ಕೊಂದು ಮೃತದೇಹವನ್ನು ತುಂಡರಿಸಿ ಫ್ರೀಡ್ ನಲ್ಲಿಟ್ಟಿದ್ದ ನೌಕಪಡೆಯ ಉದ್ಯೋಗಿ ಬಂಧನ | Speed news Kannada

ವಿಶಾಖಪಟ್ಟಣಂ: ಲವರ್ ಕೊಂದು, ಆಕೆಯ ಮೃತದೇಹವನ್ನು ತುಂಡರಿಸಿ ಫ್ರೀಡ್ಜ್ ನಲ್ಲಿಟ್ಟಿದ್ದ ನೌಕಪಡೆಯ ಉದ್ಯೋಗಿಯನ್ನು ಬಂಧಿಸಲಾಗಿದೆ. ವಿಶಾಖಪಟ್ಟಣಂನ ಗಜುವಾಕ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಭಾನುವಾರ ತಡರಾತ್ರಿ ಆರೋಪಿ ಪೊಲೀಸರ ಮುಂದೆ ಶರಣಾದ ನಂತರ ಈ ಘಟನೆ ಬೆಳಕಿಗೆ ಬಂದಿದೆ. ಆರೋಪಿಯನ್ನು ನೌಕಾಪಡೆಯ ಉದ್ಯೋಗಿ ರವೀಂದ್ರ ಎಂದು ಗುರುತಿಸಲಾಗಿದೆ. ಎಲ್‌ವಿ ನಗರದಲ್ಲಿರುವ ಆರೋಪಿ ಮನೆಯಲ್ಲಿ ತುಂಡರಿಸಿದ  ಮೃತದೇಹವನ್ನು ಸ್ಥಳೀಯ ಪೊಲೀಸರು ಪತ್ತೆ ಮಾಡಿದ್ದಾರೆ. ಆರೋಪಿ ಸಂತ್ರಸ್ತೆಯ ದೇಹವನ್ನು ಎರಡು ಭಾಗಗಳಾಗಿ ತುಂಡರಿಸಿದ್ದಾರೆ ಎಂದು ವರದಿಯಾಗಿರುವುದಾಗಿ ವಿಶಾಖಪಟ್ಟಣಂನ ಗಜುವಾಕದ ಸರ್ಕಲ್ ಇನ್ಸ್‌ಪೆಕ್ಟ‌ರ್ ತಿಳಿಸಿದ್ದಾರೆ.
ಮೃತದೇಹದ ಅರ್ಧ ಭಾಗವನ್ನು ಫ್ರೀಡ್ಜ್ ನಲ್ಲಿ ಇರಿಸಲಾಗಿತ್ತು. ಉಳಿದ ಅರ್ಧವನ್ನು ಗೋಣಿ ಚೀಲದಲ್ಲಿ ಪ್ಯಾಕ್ ಮಾಡಲಾಗಿತ್ತು. ಪತ್ನಿ ತವರು ಮನೆಗೆ ಹೋಗಿದ್ದಾಗ ಆರೋಪಿ ಈ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಸಂತ್ರಸ್ತ ಮಹಿಳೆ ಮೌನಿಕಾಳನ್ನು ಮಧ್ಯಾಹ್ನ ತನ್ನ ಮನೆಗೆ ಬರುವಂತೆ ರವೀಂದ್ರ ಹೇಳಿದ್ದಾನೆ. ತದನಂತರ ಇಬ್ಬರ ನಡುವೆ ವಾಗ್ವಾದ ನಡೆದಿದ್ದು, ಅದು ಭೀಕರ ಹತ್ಯೆಗೆ ಕಾರಣವಾಗಿದೆ ಎನ್ನಲಾಗಿದೆ. ಆರೋಪಿ ರವೀಂದ್ರನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಗಾಜುವಾಕ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.