2026-03-07 05:51:18

MOTHER LOVE STORY | ಹೆತ್ತ ತಾಯಿ, ಲವರ್‌ ಜತೆ ಪರಾರಿ.ಮಗನೆ ಕಟ್ಟಿದ ಚಟ್ಟ.! SNK

MOTHER LOVE STORY | ಹೆತ್ತ ತಾಯಿ, ಲವರ್‌ ಜತೆ ಪರಾರಿ.ಮಗನೆ ಕಟ್ಟಿದ ಚಟ್ಟ.! SNK

ಕೋಲಾರ: ಈಗೀಗ ಸಂಬಂಧ ಅನ್ನೋದು ಪ್ರಾಣಿ ಪಕ್ಷಿಗಳ ಸಂಬಂಧಕ್ಕಿಂತಲೂ ಕಡೆಯಾಗಿ ಹೋಗಿದೆ. ಯಾವಗ ಯಾರು ಯಾರ ಜೊತೆಗೆ ಯಾವಾಗ ಇರ್ತಾರೋ. ಯಾರನ್ನ ಯಾವಾಗ ಗಂಡ ಅಂತಾರೋ, ಯಾರು ಹೆಂಡ್ತಿ ಅಂತಾ ಸಂಬಂಧ ಬೆಳೆಸಿಕೊಳ್ತಾರೋ ಒಂದೂ ಗೊತ್ತಾಗಲ್ಲ. ಇವತ್ತು ಗಂಡ ಆಗಿದ್ದವ ನಾಳೆ ದುಷ್ಮನ್‌ ಆಗ್ಬೋದು. ಎರಡ್ಮೂರು ಮಕ್ಕಳು ಆದ್ಮೇಲೂ ಹೆಂಡ್ತಿ ಅನಿಸಿಕೊಂಡವ್ಳು ಕೈಕೊಟ್ಟು ಹೋಗ್ಬೋದು. ಕೋಲಾರದಲ್ಲಿ ಮೂರು ದಿನದ ಹಿಂದೆ ಇಂತದ್ದೇ ಒಂದು ಘಟನೆ ನಡೆದಿದೆ.
ಹೆಗಲೆತ್ತರಕ್ಕೆ ಬೆಳೆದಿದ್ದ ಇಬ್ಬರು ಮಕ್ಕಳಿದ್ರೂ ಮತ್ತೊಬ್ಬನ ಸ್ನೇಹಕ್ಕೆ ಬಿದ್ದು ಗಂಡ-ಮಕ್ಕಳನ್ನೇ ಬಿಟ್ಟು ಹೋಗಿದ್ಲು. ಎಂಟು ವರ್ಷದಿಂದ ಗಂಡನ ಜೊತೆ ಖುಷಿ ಖುಷಿಯ ಜೀವನ ನಡೆಸ್ತಿದ್ದಳು. ಆದರೆ ಈಗ ಮಗನೇ ತಾಯಿಯ ಪ್ರಿಯಕರನ ಚಟ್ಟ ಕಟ್ಟಿದ್ದಾನೆ. ನನ್ನ ತಂಗಿಗೆ ಧಮ್ಕಿ ಹಾಕ್ತಿದ್ದಾನೆ ಅಂತಾ ಹೆತ್ತವಳ ಲವರ್‌ಗೆ ಗುಂಡಿ ತೋಡಿದ್ದಾನೆ.
ನರಸಾಪುರ ಗ್ರಾಮದ ಯಲ್ಲೇಶ್‌ನನ್ನ ಇಷ್ಟ ಪಟ್ಟಿದ್ದ ರೇಣುಕಾ, ಗಂಡ ಮಕ್ಕಳನ್ನ ಬಿಟ್ಟು ಹೋಗಿದ್ಲು. ಇದು ಮೊದಲ ಗಂಡ ಸಂತೋಷ್‌ನ ಪಿತ್ತ ನೆತ್ತಿಗೇರಿಸಿತ್ತು. ಯಲ್ಲೇಶ್‌ನಿಗೊಂದು ಗತಿ ಕಾಣಿಸ್ತೀನಿ ಅಂತಾ ಊರಲ್ಲೆಲ್ಲಾ ಹೇಳ್ಕೊಂಡು ಓಡಾಡ್ತಿದ್ದ. ಇದೇ  ಹೊತ್ತಲ್ಲೇ ಯಲ್ಲೇಶ್‌ನ ಕೊಲೆಯೂ ಆಗಿತ್ತು. ಹೀಗಾಗಿ ಸಂತೋಷನೇ ಕೊಲೆ ಮಾಡಿರ್ಬೋದು ಅಂತಾ ಎಲ್ಲಾ ಅಂದ್ಕೊಂಡಿದ್ದರು. ಪೊಲೀಸರು ಕೂಡಾ ಇದೇ ಆ್ಯಂಗಲ್‌ನಲ್ಲಿ ತನಿಖೆ ಶುರು ಮಾಡಿದ್ದರು. ಆದರೆ, ನಿನ್ನೆ ಸಂಜೆ ಫೇಸ್‌ಬುಕ್ ಲೈವ್ ಬಂದಿದ್ದ ಸಂತೋಷ, ಈ ಕೊಲೆಗೂ ನನಗೂ ಸಂಬಂಧವಿಲ್ಲ. ಕೊಲೆ ಮಾಡೋದೇ ಆಗಿದ್ರೆ ಇಷ್ಟು ವರ್ಷ ಕಾಯ್ತಿರಲಿಲ್ಲ ಅಂತಾ ಕಣ್ಣೀರಿಟ್ಟಿದ್ದಾನೆ.
ಯಾವಾಗ ಸಂತೋಷ್‌‌ ವಿಡಿಯೋ ವೈರಲ್‌ ಆಯ್ತೋ, ಈತನ ಮಗ ಕೂಡಾ ಒಂದು ವಿಡಿಯೋ ಮಾಡಿ ಹರಿಬಿಟ್ಟಿದ್ದಾನೆ. ಹೆತ್ತವ್ಳು ಬಿಟ್ಟು ಹೋಗಿದ್ಲು ಅನ್ನೋ ಸಿಟ್ಟಿತ್ತೋ ಏನೋ ಗೊತ್ತಿಲ್ಲ. ಆದರೆ, ತಾಯಿ ಜೊತೆ ಸಂಬಂಧದಲ್ಲಿದ್ದವ್ನಿಗೆ ಚಟ್ಟ ಕಟ್ಟಿದ್ದಾನೆ. ಬಿಂದು ಕುಮಾರ್ ಹೇಳ್ಕೊಂಡಿರೋ ಪ್ರಕಾರ, ನನ್ನ ತಂಗಿಗೆ ಯಲ್ಲೇಶ್‌ ಕೆಟ್ಟದಾಗಿ ಮಾತನಾಡಿದ್ದ. ಈ ಸಂಬಂಧ ಪೊಲೀಸರಿಗೆ ದೂರು ಕೊಟ್ರೂ ಕ್ಯಾರೆ ಅಂದಿರ್ಲಿಲ್ಲ. ನನ್ನ ಮೇಲೂ ಯಲ್ಲೇಶ್‌ ದಾಳಿ ಮಾಡಿಸಿದ್ದ. ಅಷ್ಟೇ ಅಲ್ಲ ನನ್ನನ್ನ ಮುಗಿಸ್ಬೇಕು ಅಂದ್ಕೊಂಡಿದ್ದ. ಹೀಗಾಗಿ ನನ್ನನ್ನ ಮುಗಿಸೋ ಮೊದಲೇ ಅವನನ್ನ ಮುಗಿಸಿದ್ದೇನೆ. ನಾವೇ ಕೋರ್ಟ್‌ ಮುಂದೆ ಶರಣಾಗ್ತೀವಿ ಅಂತಾ ವಿಡಿಯೋವೊಂದನ್ನ ಹರಿಬಿಟ್ಟಿದ್ದಾನೆ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.