2026-03-07 05:03:28

Mother Loses Baby | ಸ್ನೇಹಿತೆಯ ಬೇಬಿ ಬಂಪ್‌ ಶೂಟ್‌ ನೋಡಲು ಹೋಗಿ ಮಗು ಕಳೆದುಕೊಂಡ ತಾಯಿ | Speed News Kannada

Mother Loses Baby | ಸ್ನೇಹಿತೆಯ ಬೇಬಿ ಬಂಪ್‌ ಶೂಟ್‌ ನೋಡಲು ಹೋಗಿ ಮಗು ಕಳೆದುಕೊಂಡ ತಾಯಿ | Speed News Kannada

ಬೆಂಗಳೂರು: ಸ್ನೇಹಿತೆಯ ಗರ್ಭಿಣಿ ಫೋಟೋ ಶೂಟ್ ಗೆ ತೆರಳಿದ್ದ ಮಹಿಳೆಯೊಬ್ಬರ ಮಗು ಕೃತಕ ಕೊಳದಲ್ಲಿ ಮುಳುಗಿ ಅಸುನೀಗಿರುವ ದುರಂತ ಘಟನೆ ನಗರದ ಮಾಗಡಿ ರಸ್ತೆಯಲ್ಲಿ ನಡೆದಿದೆ. ಭಾನುವಾರ ಮಧ್ಯಾಹ್ನ ಈ ದುರಂತ ಸಂಭವಿಸಿದೆ.
ಮಾಗಡಿ ರಸ್ತೆಯಲ್ಲಿರುವ  ಗಿಡ್ಡೇನಹಳ್ಳಿಯ ಶೈರ್‌ ಸ್ಟುಡಿಯೋದಲ್ಲಿ ಈ ದುರಂತ ಸಂಭವಿಸಿದೆ.
ಮಗುವಿನ ತಾಯಿ ಸ್ವಾತಿ ತನ್ನ ಗರ್ಭಿಣಿ ಸ್ನೇಹಿತೆಯ ಫೋಟೋ ಶೂಟ್ ಗೆ ಸಹಕರಿಸುವಲ್ಲಿ ಮತ್ತು ನೋಡುವಲ್ಲಿ ನಿರತರಾಗಿದ್ದಾರೆ. ಆ ಸಮಯದಲ್ಲಿ ಆಟವಾಡಿಕೊಂಡಿದ್ದ ಮೂರು ವರ್ಷದ ಲಕ್ಷವೀರ್ ಕೊಳಕ್ಕೆ ಇಳಿದಿದ್ದಾನೆ. ಕೊಳ ಕೇವಲ ಎರಡು ಅಡಿ ಇದ್ದರೂ ಎದ್ದು ಬರಲಾಗದೆ ಲಕ್ಷವೀರ್ ಅಸು ನೀಗಿದ್ದಾನೆ. 
ಅರ್ಧ ಗಂಟೆ ನಂತರ ಬಾಲಕನ ತಾಯಿ ಮಗುವಿಗಾಗಿ ಹುಡುಕಾಟ ನಡೆಸಿದ್ದಾರೆ. ಆಗ ಕೊಳದಲ್ಲಿ ಇರುವುದು ಕಂಡು ಬಂದಿದೆ. ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಆ ವೇಳೆಗೆ ಮಗು ಮೃತಪಟ್ಟಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಮಗುವಿನ ತಂದೆ ಸಾಫ್ಟ್‌ ವೇರ್‌ ಇಂಜಿನಿಯರ್‌ ಆಗಿದ್ದು ಇತ್ತೀಚೆಗಷಷ್ಟೇ ಕೆಲಸದ ನಿಮಿತ್ತ ಅಮೆರಿಕಕ್ಕೆ ತೆರಳಿದ್ದರು. ಮಾದನಾಯಕನಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.