ಮಂಡ್ಯ: ಊರು-ಕೇರಿ ಅಂದ್ಮೇಲೆ ಪಕ್ಕದ ಮನೆಯವರ ಜೊತೆ ಸಾಮಾನ್ಯವಾಗಿ ಜಗಳ ಇದ್ದೆ ಇರುತ್ತೆ. ಆದ್ರೆ ಈ ಜಗಳ ಸಾವಿನಲ್ಲಿ ಅಂತ್ಯ ಕಾಣೋದು ದುರಂತ ಆಗಿ ಹೋಗಿದೆ. ಪಕ್ಕದ ಮನೆಯವರ ಕಿರುಕುಳಕ್ಕೆ ಬೆದರಿ ಬೇಸತ್ತು ತಾಯಿ-ಮಗಳು ಇಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ದಳವಾಯಿ ಕೋಡಿಹಳ್ಳಿಯಲ್ಲಿ ಈ ಘಟನೆ ನಡೆದಿದೆ, ತಾಯಿ-ಮಗಳ ಸಾವು ಕಂಡು ಕುಟುಂಬಸ್ಥರು ಆಘಾತಗೊಂಡಿದ್ದಾರೆ.
ಶಕುಂತಲಾದೇವಿ ತನ್ನ ಮಗಳ ಮದುವೆಗೆ ಸಿದ್ಧತೆ ಮಾಡಿಕೊಳ್ತಿದ್ರು.ಮಗಳು ಪ್ರಿಯಾಂಕಾ ಕೂಡ ಗಂಡನ ಮನೆ ಸೇರುವ ತವಕದಲ್ಲಿದ್ದಳು. ಆದ್ರೆ ಈ ಒಂದು ದುಡುಕಿನ ನಿರ್ಧಾರ ಇಬ್ಬರನ್ನ ಸಾವಿನ ಮನೆ ಸೇರಿಸಿದೆ. ಅಷ್ಟಕ್ಕೂ ನಿಜ್ವಾಗ್ಲೂ ನಡೆದಿರೋದು ಏನು ಪಕ್ಕದ ಮನೆಯವರು ನಿಜಕ್ಕೂ ಬೆದರಿಕೆ ಹಾಕಿದ್ರಾ? ಯಾವ ಕಾರಣಕ್ಕೆ ಕಿರುಕುಳ ಕೊಡ್ತಿದ್ರು ಎನ್ನುವ ವಿಚಾರ ಪೊಲೀಸ್ ತನಿಖೆಯಿಂದಲೇ ತಿಳಿಯಬೇಕಿದೆ.