ನವದೆಹಲಿ: ಕೆಲವು ದಿನಗಳ ಹಿಂದೆ ಉತ್ತರಾಖಂಡದಲ್ಲಿ ಅಂಗಡಿಯ ಹೆಸರು ಬದಲಿಸುವಂತೆ ಭಜರಂಗದಳ ಕಾರ್ಯಕರ್ತರು ವೃದ್ಧ ಮುಸ್ಲಿಂ ವ್ಯಾಪಾರಿಯ ಅಂಗಡಿ ಮೇಲೆ ದಾಳಿ ಮಾಡಿದಾಗ, ಮುಸ್ಲಿಂ ವ್ಯಾಪಾರಿಯ ಬೆಂಬಲಕ್ಕೆ ನಿಂತ ದೀಪಕ್ ಕುಮಾರ್ ಇಂದು ಲೋಕಸಭೆ ಪ್ರತಿಪಕ್ಷದ ನಾಯಕ ನಾಯಕ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿದರು.
ನವದೆಹಲಿಯ 10 ಜನಪತ್ ನ ಕಾಂಗ್ರೆಸ್ ವರಿಷ್ಠರೂ ಆಗಿರುವ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ನಿವಾಸಕ್ಕೆ ದೀಪಕ್ ಕುಮಾರ್ ತಮ್ಮ ಸ್ನೇಹಿತರ ಜೊತೆ ಭೇಟಿ ಆಗಮಿಸಿ ಚರ್ಚೆ ನಡೆಸಿದರು.
ದೀಪಕ್ ಕುಮಾರ್ ಅವರನ್ನು ಸ್ವಾಗತಿಸಿ ಅಭಿನಂದಿಸಿದ ರಾಹುಲ್ ಗಾಂಧಿ, ದೀಪಕ್ ಅವರನ್ನು ದೇಶದ "ಏಕತೆಯ ಸಂಕೇತ" ಎಂದು ಕರೆದಿದ್ದಾರೆ.
ಈ ಕುರಿತು ಎಕ್ಸ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿರುವ ರಾಹುಲ್ ಗಾಂಧಿ, ಪ್ರತಿಯೊಬ್ಬ ಮನುಷ್ಯನೂ ಸಮಾನ. ಇದು ಭಾರತೀಯತೆ, ಇದು ಪ್ರೀತಿಯ ಅಂಗಡಿ. ಇದೇ ಏಕತೆ ಮತ್ತು ಧೈರ್ಯದ ಜ್ವಾಲೆ ಪ್ರತಿಯೊಬ್ಬ ಭಾರತೀಯ ಯುವಕರಲ್ಲೂ ಉರಿಯಬೇಕು ಎಂದು ಕರೆ ನೀಡಿದ್ದಾರೆ.
ಮುಸ್ಲಿಂ ವ್ಯಾಪಾರಿಯ ಅಂಗಡಿ ಮೇಲೆ ದಾಳಿ ನಡೆದಾಗ ಅವರ ಪರವಾಗಿ ನಿಂತು ನನ್ನ ಹೆಸರು ಮೊಹಮ್ಮದ್ ದೀಪಕ್ ಎಂದು ಬಜರಂಗದಳವನ್ನು ಎದುರಿಸಿದ್ದರು. ಈ ಬೆಳವಣಿಗೆ ದೇಶಾದ್ಯಂತ ಸಂಚಲನ ಮೂಡಿಸಿತ್ತು. ದೀಪಕ್ ಕುಮಾರ್ @ ಮೊಹಮ್ಮದ್ ದೀಪಕ್ ನನ್ನ ಹೆಸರು ಎಂದು ಹೇಳಿ ಬೆಚ್ಚಿಬೀಳಿಸಿದ್ದರು.