2026-06-08 01:31:13

Modi speech in Lok Sabha on Womens Reservation Bill | ಮಹಿಳಾ ಮೀಸಲಾತಿ ಬಿಲ್‌ ಸಂಚಲನ ಲೋಕಸಭೆಯಲ್ಲಿ ಮೋದಿ ಮಾತು | Speed news kannada

Modi speech in Lok Sabha on Womens Reservation Bill | ಮಹಿಳಾ ಮೀಸಲಾತಿ ಬಿಲ್‌ ಸಂಚಲನ ಲೋಕಸಭೆಯಲ್ಲಿ ಮೋದಿ ಮಾತು | Speed news kannada

ಭಾರತೀಯ ಸಂಸದೀಯ ಇತಿಹಾಸದ ಮಹತ್ವದ ಘಟ್ಟಕ್ಕೆ ಇಂದು ಸಾಕ್ಷಿಯಾಗುತ್ತಿದೆ ಲೋಕಾಸಭೆ ಮಹಿಳಾ ಮೀಸಲಾತಿ ಮಸೂದೆ ಕುರಿತು ಚರ್ಚೆಗಾಗಿ ಏರ್ಪಡಿಸಲಾದ ವಿಶೇಷ ಅಧಿವೇಶನದಲ್ಲಿ, ಏಪ್ರಿಲ್ 16ರಿಂದ 18ರವರೆಗೆ ಸಂಸತ್ತು ರಾಜಕೀಯ ಚಟುವಟಿಕೆಗಳ ಕೇಂದ್ರವಾಗಿದ್ದು, ಇಡೀ ದೇಶದ ಗಮನ ಈಗ ದೆಹಲಿಯತ್ತ ನೆಟ್ಟಿದೆ.ಈ ಮಸೂದೆಯನ್ನು “ಐತಿಹಾಸಿಕ ಹೆಜ್ಜೆ” ಎಂದು ವರ್ಣಿಸಿರುವ ಪ್ರಧಾನಿ ನರೇಂದ್ರ ಮೋದಿ , ಇಂದು ಲೋಕಸಭೆಯಲ್ಲಿ ಭಾಷಣ ಮಾಡುತ್ತಿದ್ದಾರೆ.

ಮಹಿಳಾ ಸಬಲೀಕರಣಕ್ಕೆ ದಾರಿ ತೆರೆದಿಡುವ ಈ ಮಸೂದೆ, ಅಂಗೀಕಾರವಾಗಲು ವಿಶೇಷ ಬಹುಮತ ಅಗತ್ಯವಿದೆ. ಅಂದರೆ, ಕೇವಲ ಸರಳ ಬಹುಮತವಲ್ಲ, ಹಾಜರಿರುವ ಸದಸ್ಯರ ಎರಡು ಮೂರನೇ (2/3) ಭಾಗದ ಬೆಂಬಲ ಅವಶ್ಯಕವಾಗಿದೆ.ಈ ಹಿನ್ನೆಲೆ, ಸರ್ಕಾರ ಮತ್ತು ಪ್ರತಿಪಕ್ಷಗಳ ನಡುವೆ ತೀವ್ರ ಚರ್ಚೆ ಮತ್ತು ರಾಜಕೀಯ ಪೈಪೋಟಿ ನಡೆಯುವ ಸಾಧ್ಯತೆ ಹೆಚ್ಚಿದೆ. ಒಟ್ಟಿನಲ್ಲಿ, ಈ ಅಧಿವೇಶನ ದೇಶದ ರಾಜಕೀಯ ಭವಿಷ್ಯವನ್ನು ಮರುರೂಪಿಸಬಹುದಾದ ನಿರ್ಣಾಯಕ ಘಟ್ಟವಾಗಿ ಪರಿಣಮಿಸಿದೆ.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.