2026-06-08 01:29:20

MLA KN Rajanna | ದಲಿತ ಸಮುದಾಯಕ್ಕೆ ಮುಖ್ಯಮಂತ್ರಿ ಸ್ಥಾನ ನೀಡಲು ಶಾಸಕ ಕೆ ಎನ್‌ ರಾಜಣ್ಣ ಆಗ್ರಹ | Speed News Kannada

MLA KN Rajanna | ದಲಿತ ಸಮುದಾಯಕ್ಕೆ ಮುಖ್ಯಮಂತ್ರಿ ಸ್ಥಾನ ನೀಡಲು ಶಾಸಕ ಕೆ ಎನ್‌ ರಾಜಣ್ಣ ಆಗ್ರಹ | Speed News Kannada

ತುಮಕೂರು: ದಲಿತ ಸಮುದಾಯಕ್ಕೆ ಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂದು ಮಾಜಿ ಸಚಿವ ಕೆ.ಎನ್. ರಾಜಣ್ಣ ಒತ್ತಾಯಿಸಿದ್ದಾರೆ. ತುಮಕೂರಿನಲ್ಲಿ ಮಾತನಾಡಿದ ಅವರು, ದಲಿತ ಸಿಎಂ ಕುರಿತು ಸಚಿವ ಡಾ. ಮಹದೇವಪ್ಪ ಅವರು ಈಗಾಗಲೇ ಮಾತನಾಡಿದ್ದು, ಇತರೆ ರಾಜ್ಯಗಳ ಉದಾಹರಣೆಗಳನ್ನು ನೀಡಿದ್ದಾರೆ.
ದಲಿತ, ಅಲ್ಪಸಂಖ್ಯಾತ, ವಾಲ್ಮೀಕಿ ಸಮುದಾಯ ಅಥವಾ ಬಲಿಜ ಸಮುದಾಯದವರು ಮುಖ್ಯಮಂತ್ರಿ ಸ್ಥಾನಕ್ಕೆ ಅರ್ಹರಲ್ಲವೇ ಎಂದು ರಾಜಣ್ಣ ಪ್ರಶ್ನಿಸಿದರು. 
ಕಾಂಗ್ರೆಸ್ ಪಕ್ಷ ಯಾವತ್ತೂ ಯಾವಾಗಲೂ ಎಲ್ಲ ಸಮುದಾಯಗಳೀಗೆ ನ್ಯಾಯ ಒದಗಿಸುತ್ತಾ ಬಂದಿದೆ. 1972ರಲ್ಲಿ ದೇವರಾಜ ಅರಸು ಅವರು ಶಾಸಕರಾಗಿರದಿದ್ದರೂ, ಪಕ್ಷದ ಹೆಚ್ಚಿನ ಶಾಸಕರ ಒಲವನ್ನು ಪರಿಗಣಿಸಿ ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡಲಾಯಿತು. ಅರಸು ಅವರ ಜಾತಿಯ ಮತ್ತೊಬ್ಬ ಶಾಸಕರೂ ಇರಲಿಲ್ಲ ಎಂಬುದು ಗಮನಾರ್ಹ ಎಂದರು. 
ಇದೇ ರೀತಿ ಸಣ್ಣ ಸಣ್ಣ ಸಮುದಾಯಗಳಿಗೆ ಸೇರಿದ ವೀರಪ್ಪ ಮೊಯ್ಲಿ ಮತ್ತು ಧರಂಸಿಂಗ್ ಅವರಿಗೂ ಅವಕಾಶ ಕಲ್ಪಿಸಲಾಗಿದೆ. ಒಕ್ಕಲಿಗ ಮತ್ತು ಲಿಂಗಾಯತ ಸಮುದಾಯದವರಿಗೆ ಮುಖ್ಯಮಂತ್ರಿ ಸ್ಥಾನ ದೊರಕಿದೆ. ಆದರೆ ದಲಿತರು, ಅಲ್ಪಸಂಖ್ಯಾತರು ಮತ್ತು ಬಣಜಿಗರಂತಹ ಸಮುದಾಯಗಳಿಗೆ ಈ ಅವಕಾಶ ಸಿಕ್ಕಿಲ್ಲ ಎಂದರು.
ಹೆಚ್ಚು ಜನಸಂಖ್ಯೆ ಇರುವ ವಾಲ್ಮೀಕಿ ಮತ್ತು ಕುರುಬ ಸಮುದಾಯಕ್ಕೂ ಸಿಕ್ಕ ಅವಕಾಶಗಳು ಕಡಿಮೆ ಎಂದು ಹೇಳಿದರು.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.