ತವಾಂಗ್: ಕೆಲವು ಎನ್‌ಜಿಒಗಳ ಮಾತು ಕೇಳಿಕೊಂಡು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಸದನದ ಕಲಾಪಕ್ಕೆ ಅಡ್ಡಿಪಡಿಸುತ್ತಿದ್ದಾರೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಆಪಾದಿಸಿದ್ದಾರೆ.
ಇಂದು ಇಲ್ಲಿ ಮಾತನಾಡಿದ ಅವರು, ಸಂಸತ್ತಿನ ಕಲಾಪಗಳು ಸುಗಮವಾಗಿ ನಡೆಸಲು ನಾವು ಸರ್ವ ಪ್ರಯತ್ನಗಳನ್ನು ಮಾಡಿದರೂ ಸಾಧ್ಯವಾಗಿಲ್ಲ. ಆದ್ದರಿಂದ ಕಾಂಗ್ರೆಸ್ ಪಕ್ಷವನ್ನು ಸಮಾಧಾನಪಡಿಸಲು ಸರ್ಕಾರವು ಇನ್ನು ಮುಂದೆ ಯಾವುದೇ ಹೆಚ್ಚುವರಿ ಕ್ರಮಗಳನ್ನು ತೆಗೆದುಕೊಳ್ಳುವುದಿಲ್ಲ ಎಂದು ರಿಜಿಜು ತಿಳಿಸಿದ್ದಾರೆ.
ರಾಹುಲ್ ಗಾಂಧಿಯವರಿಗೆ ಸದನವನ್ನು ನಡೆಯುವುದನ್ನು ಬೇಕಿಲ್ಲ. ಅವರಿಗೆ ಸಮಸ್ಯೆಗಳನ್ನು ಸೃಷ್ಟಿಸುವುದರಲ್ಲೇ ಆಸಕ್ತಿ ನಿಮಗೆ ಮತ್ತುನಿಮ್ಮ ಪಕ್ಷಕ್ಕೆ ಒಳ್ಳೆಯ ದಿನಗಳು ಬರಲಿವೆ ಎಂದು ಕೆಲವು ಎನ್‌ಜಿಒಗಳು ರಾಹುಲ್ ಗಾಂಧಿಯವರಿಗೆ ಬೋಧನೆ ಮಾಡಿವೆ. ಹಾಗಾಗಿ ಕಲಾಪಕ್ಕೆ ಅಡ್ಡಿಪಡಿಸುತ್ತಿದ್ದಾರೆ.. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಅವರ ಸದಸ್ಯರ ಸಂಖ್ಯೆ ಮತ್ತಷ್ಟು ಕುಸಿಯಲಿದೆ ಎಂದು ಅವರು ತಿಳಿಸಿದ್ದಾರೆ.
ಸಣ್ಣ ಸಣ್ಣ ವಿರೋಧ ಪಕ್ಷಗಳು ರಾಹುಲ್ ಗಾಂಧಿ ಬಗ್ಗೆ ಅಸಮಾಧಾನ ಹೊಂದಿವೆ. ಅವರಲ್ಲಿ ಕೆಲವರು ಸ್ಪೀಕರ್ ವಿರುದ್ಧದ ನಿರ್ಣಯಕ್ಕೆ ಸಹಿಯನ್ನೂ ಹಾಕಿಲ್ಲ ಎಂದು ಅವರು ಹೇಳಿದ್ದಾರೆ.