2026-03-07 05:03:34

Mayuri gave a sharp slap | ಬಾಯಿಗೆ ಬಂದ ಹಾಗೆ ಮಾತಾಡುವವರಿಗೆ ಖಡಕ್ ಟಾಂಗ್ ಕೊಟ್ಟ ಮಯೂರಿ | Speed News Kannada

Mayuri gave a sharp slap | ಬಾಯಿಗೆ ಬಂದ ಹಾಗೆ ಮಾತಾಡುವವರಿಗೆ ಖಡಕ್ ಟಾಂಗ್ ಕೊಟ್ಟ ಮಯೂರಿ | Speed News Kannada

ಬೆಂಗಳೂರು :  ನಟಿ ಮಯೂರಿ ಅವರು 'ಅಶ್ವಿನಿ ನಕ್ಷತ್ರ'ದ ಧಾರಾವಾಹಿ  ಮೂಲಕ ಜನಪ್ರಿಯತೆ ಗಳಿಸಿ, ನಂತರ ಹಿರಿತೆರೆಗೆ ಕಾಲಿಟ್ಟರು.ಮ ಈಗ ಫ್ಯಾಮಿಲಿ ಕಡೆ ಗಮನ ಹರಿಸುತ್ತಾ ಇದ್ದಾರೆ. ಮಗ ಆರವ್ಗೆ ಐದು ವರ್ಷ. ಅವರು ನಟನಾ ಕ್ಷೇತ್ರದಲ್ಲಿ ಮೊದಲಿನಷ್ಟು ಆ್ಯಕ್ಟೀವ್ ಆಗಿಲ್ಲ, ಆದರೆ, ಅವರಿಗೆ ನಟನೆಗೆ ಮಡಬೇಕು ಎಂಬ ಆಸೆ ಇದೆ. ಈ ಎಲ್ಲಾ ವಿಷಯಗಳ ಬಗ್ಗೆ ಮಾತನಾಡುವಾಗ ತಾವು ನಡೆದು ಬಂದ ಕಷ್ಟದ ಹಾದಿಯನ್ನು ಅವರು ನೆನಪಿಸಿಕೊಂಡರು. ತಮಗೆ ಕೆಟ್ಟದನ್ನು ಮಾಡಿದವರು ಯಾರೂ ಕೆಟ್ಟವರಲ್ಲ ಎಂದಿದ್ದಾರೆ. 
ಗೊತ್ತಿದ್ದು ಗೊತ್ತಿಲ್ಲದೆ ತಪ್ಪು ಮಾಡಿರುತ್ತೇವೆ. ನಾನು ಆಗತಾನೇ ನಟನೆಗೆ ಬಂದಿದ್ದೆ. ಆಗ ಕೆಲವರು ಕೆಟ್ಟ ಕಮೆಂಟ್ ಮಾಡುತ್ತಿದ್ದರು ಹಾಗಂತ ಅವರು ಕೆಟ್ಟವರಲ್ಲ. ನಾನು ಏನೋ ಮಾಡಿ ತೋರ್ತೀಬೇಕು ಎಂಬ ಛಲ ಬಂದಿದೆ ಅವರಿಂದ. ದೇವರೇ ಅವರಿಗೆ ಟಾಸ್ಕ್ ಕೊಟ್ಟಿದ್ದರು ಅನಿಸುತ್ತದೆ. ನನಗೆ ಯಾರಾದರೂ ಏನಾದರೂ ಹೇಳಿದರೆ ಅದು ನನಗೆ ಮ್ಯಾಟರ್ ಆಗುತ್ತೋ ಇಲ್ಲವೋ ಎಂದು ನೋಡುತ್ತಿನಿ ಮ್ಯಾಟರ್ ಆದರೆ ಮಾತ್ರ ಯೋಚಿಸುತ್ತೆನೆ. ಮೂರನೇ ವ್ಯಕ್ತಿಯ ಜೀವನದಲ್ಲಿ ಏನಾಗುತ್ತಿದೆ ಎಂಬುದನ್ನು ನೋಡೋದು ಸಹಜಗುಣ. ಈ ರೀತಿಯ ಗುಣ ಬೆಳೆಸಿಕೊಂಡರೆ ಎಲ್ಲಿಯೂ ಹೋಗೋಕೆ ಆಗಲ್ಲ. ಇದ್ದಲ್ಲಿಯೇ ಇರಬೇಕಾಗುತ್ತದೆ. ಹಾಗೆ ಮಾಡಬಾರದು. ಆಗ ಎಲ್ಲವೂ ಚೆನ್ನಾಗಿರುತ್ತದೆ ಎಲ್ಲರ ಲೈಫ್ಗೂ ಕ್ಲ್ಯಾರಿಟಿ ಬರುತ್ತದೆ’. ನೋಡೋ ದೃಷ್ಟಿ ಚೆನ್ನಾಗಿದ್ದರೆ ಎಲ್ಲವೂ ಚೆನ್ನಾಗಿ ಕಾಣುತ್ತದೆ’ ಎಂದಿದ್ದಾರೆ ಮಯೂರಿ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.