2026-03-07 08:43:31

Man stabs ex wife to death | ಗರ್ಭಿಣಿ ಟೆಕ್ಕಿಯ ಬರ್ಬರ ಹತ್ಯೆ ಕೌಟುಂಬಿಕ ದೌರ್ಜನ್ಯದ ದೂರು ದಾಖಲಿಸಿದ್ದ ಮಾಜಿ ಪತ್ನಿಯನ್ನು ಇರಿದು ಕೊಂದ ವ್ಯಕ್ತಿ | Speed News Kannada

Man stabs ex wife to death | ಗರ್ಭಿಣಿ ಟೆಕ್ಕಿಯ ಬರ್ಬರ ಹತ್ಯೆ ಕೌಟುಂಬಿಕ ದೌರ್ಜನ್ಯದ ದೂರು ದಾಖಲಿಸಿದ್ದ ಮಾಜಿ ಪತ್ನಿಯನ್ನು ಇರಿದು ಕೊಂದ ವ್ಯಕ್ತಿ | Speed News Kannada

ಹೈದರಾಬಾದ್: ಟೆಕ್ಕಿಯೊಬ್ಬ ಮಾಜಿ ಪತ್ನಿಯ ಮನೆಗೆ ನುಗ್ಗಿ ಆಕೆಯನ್ನು ಇರಿದು ಕೊಂದಿರುವ ಘಟನೆ ಹೈದರಾಬಾದಿನಲ್ಲಿ ನಡೆದಿದೆ. 2022 ರಲ್ಲಿ ಇಬ್ಬರಿಗೂ ವಿವಾಹವಾಗಿತ್ತು, ಅದಾದ ನಂತರ ಪತಿ ಮೇಲೆ ಆಕೆ ಕೌಟುಂಬಿಕ ಹಿಂಸಾಚಾರದ ದೂರು ದಾಖಲಿಸಿದ್ದಳು. ಸುನಿತಾ ಕೊಲೆಯಾದ ಮಹಿಳೆ, ಆರೋಪಿ ಮಹೇಶ್ ಕೆನಡಾದಲ್ಲಿ ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಈ ದೂರಿನಿಂದಾಗಿ ಆತ ಕೆನಡಾಗೆ ಹಿಂದಿರುಗಲು ಸಾಧ್ಯವಾಗಿಲ್ಲ, ಅದಕ್ಕೆ ಹತಾಶಗೊಂಡ ವ್ಯಕ್ತಿ ಮಾಜಿ ಪತ್ನಿಯ ಮನೆಗೆ ನುಗ್ಗಿ ಆಕೆಯ ತಲೆಗೆ ಚಾಕುವಿನಿಂದ ಪದೇ ಪದೇ ಇರಿದು ಹತ್ಯೆ ಮಾಡಿದ್ದಾನೆ. ತನ್ನ ತಾಯಿಯ ಸಾವಿಗೂ ಮಾಜಿ ಪತ್ನಿಯೇ ಕಾರಣ ಎಂದು ಆರೋಪಿಸಿದ್ದಾನೆ.
ಮಹಿಳೆಯ ಎರಡನೇ ಪತಿ ತನ್ನ ದೂರಿನಲ್ಲಿ ಆಕೆ ಮೂರು ತಿಂಗಳ ಗರ್ಭಿಣಿಯಾಗಿದ್ದಳು ಎಂದು ಹೇಳಿದ್ದಾರೆ. ಪೊಲೀಸರು ಇದನ್ನು ಇಲ್ಲಿಯವರೆಗೆ ದೃಢಪಡಿಸಲಾಗಿಲ್ಲ ಮತ್ತು ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದೇವೆ ಎಂದು ಹೇಳಿದ್ದಾರೆ.ಮಹೇಶ್ 2022 ರಲ್ಲಿ ಸುನೀತಾರನ್ನು ವಿವಾಹವಾಗಿದ್ದ ಮದುವೆ ಭಾರತದಲ್ಲಿ ನಡೆಯಿತು. ನಂತರ ಕೆನಡಾಕ್ಕೆ ತೆರಳಿದ್ದರು, ಅಲ್ಲಿಗೆ ಪತ್ನಿಯನ್ನು ಕೂಡ ಕರೆದುಕೊಂಡು ಹೋಗಿದ್ದ. ಇಬ್ಬರ ನಡುವೆ ಭಿನ್ನಾಭಿಪ್ರಾಯಗಳು ಶುರುವಾಗಿದ್ದವು ಈ ಕಾರಣದಿಂದ ಆಕೆ ಭಾರತಕ್ಕೆ ವಾಪಸಾಗಿದ್ದಳು, ಬಳಿಕ ಮಹಾರಾಷ್ಟ್ರದಲ್ಲಿ ಕೌಟುಂಬಿಕ ದೌರ್ಜನ್ಯ ಪ್ರಕರಣವನ್ನು ಆಕೆ ದಾಖಲಿಸಿದ್ದಳು. ದಂಪತಿ 2024ರಲ್ಲಿ ವಿಚ್ಛೇದನ ಪಡೆದಿದ್ದಾರೆ. ಮತ್ತು ಆ ಮಹಿಳೆ ಏಪ್ರಿಲ್ 2025 ರಲ್ಲಿ ಮತ್ತೆ ವಿವಾಹವಾಗಿದ್ದರು..
ತನ್ನ ತಾಯಿಯ ಮರಣದ ನಂತರ ಮಹೇಶ್ ಮಾರ್ಚ್ 2025 ರಲ್ಲಿ ಭಾರತಕ್ಕೆ ಮರಳಿದ್ದ. ಕೌಟುಂಬಿಕ ಹಿಂಸಾಚಾರ ಪ್ರಕರಣದ ಕಾರಣ ಆತನ ವಿರುದ್ಧ ಲುಕ್-ಔಟ್ ಸುತ್ತೋಲೆ ಹೊರಡಿಸಲಾಗಿತ್ತು. ಆತನ ಪಾಸ್‌ಪೋರ್ಟ್ ಅನ್ನು ಅಮಾನತುಗೊಳಿಸಲಾತ್ತು ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಈ ಕಾರಣದಿಂದಾಗಿ, ಆತ ಕೆನಡಾಕ್ಕೆ ಹಿಂತಿರುಗಲು ಸಾಧ್ಯವಾಗಲಿಲ್ಲ. ಆತ ನಿರುದ್ಯೋಗಿಯಾಗಿದ್ದ ಮತ್ತು ತೆಲಂಗಾಣದ ಪೆದ್ದಪಲ್ಲಿ ಜಿಲ್ಲೆಯ ತನ್ನ ಹೆತ್ತವರ ಮನೆಯಲ್ಲಿ ವಾಸಿಸುತ್ತಿದ್ದ ತನ್ನ ತಾಯಿಯ ಸಾವು ಈ ಮಾನಸಿಕ ಯಾತನೆಯಿಂದಾಗಿ ಆಗಿದೆ ಎಂದು ಆತ ನಂಬಿದ್ದ. ಹಾಗಾಗಿ ಆಕೆಯನ್ನು ಕೊಲ್ಲುವುದೇ ಲೇಸು ಎನ್ನುವ ನಿರ್ಧಾರಕ್ಕೆ ಬಂದಿದ್ದ. ಆಕೆಯ ಸಾಮಾಜಿಕ ಮಾಧ್ಯಮ ಖಾತೆಗಳ ಮೂಲಕ ಆಕೆಯ ವಿಳಾಸವನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.