ಬೆಂಗಳೂರು : ಮಸೀದಿಯ ಮೌಲ್ವಿಯೊಬ್ಬ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ಎಸೆಗಿದ್ದಲ್ಲದೇ, ಅದರ ವಿಡಿಯೋ ಮಾಡಿ ಬ್ಲಾಕ್ ಮೇಲ್ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಗೋವಿಂದಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವ ಘಟನೆಯಲ್ಲಿ ಮೊಹಮ್ಮದ್ ಜಹಾಂಗೀರ್ ಎಂಬ ಮೌಲ್ವಿಯ ಹೇಯಕೃತ್ಯ ಬಯಲಾಗಿದೆ. ಬಿಹಾರದಿಂದ ಬಂದು ಟೈಲರಿಂಗ್ ಕೆಲಸ ಮಾಡಿಕೊಂಡಿದ್ದ ಸಂತ್ರಸ್ತೆಯ ಗಂಡನಿಗೆ ಮೌಲ್ವಿ ಜಹಾಂಗೀರ್ ಪರಿಚಯವಾಗಿದ್ದ. ಮೌಲ್ವಿಯ ದೇವಭಕ್ತಿ, ಆಸ್ತಿಕತೆಗೆ ಮಾರು ಹೋಗಿದ್ದ ದಂಪತಿ ಆತನ ಮೇಲೆ ವಿಶ್ವಾಸವಿರಿಸಿದ್ದರು. ಮೌಲ್ವಿ ಜಹಾಂಗೀರನನ್ನು ಸ್ವಂತ ಸಹೋದರನಂತೆ ಕಾಣುತ್ತಿದ್ದ ಸಂತ್ರಸ್ಥೆಯ ಗಂಡ ಆತನನ್ನು ಅಣ್ಣಾ ಎಂದೇ ಕರೆಯುತ್ತಿದ್ದ. ತನ್ನ ಹೆಂಡತಿಗೆ ಮೌಲ್ವಿ ಸೇವೆ ಮಾಡುವಂತೆ ಟೈಲರ್ ಹೇಳಿದ್ದ. ಇದನ್ನೇ ದುರುಪಯೋಗಪಡಿಸಿಕೊಂಡು ಮೌಲ್ವಿ ಸಂತ್ರಸ್ತೆ ಮೇಲೆ ಅತ್ಯಾಚಾರ ಎಸೆಗಿದ್ದ. 2023 ರಲ್ಲಿ ಅತ್ಯಾಚಾರವೆಸಗಿ ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದ ಮೌಲ್ವಿ ಜಹಾಂಗೀರ್, ವಿಷಯ ಯಾರಿಗಾದರೂ ತಿಳಿಸಿದ್ರೆ ವಿಡಿಯೋ ವೈರಲ್ ಮಾಡೋದಾಗಿ ಬೆದರಿಸಿದ್ದ. ಇದರಿಂದ ಹೆದರಿ ಬೆಂಗಳೂರಿನ ಸಹವಾಸವೇ ಬೇಡ ಎಂದು ಬಿಹಾರಕ್ಕೆ ವಾಪಸ್ ಆಗಿದ್ದ ದಂಪತಿ. ಇತ್ತಿಚೇಗೆ ಮತ್ತೆ ಬೆಂಗಳೂರಿಗೆ ವಾಪಸ್ ಆಗಿದ್ದ ದಂಪತಿ ತಮ್ಮ ಪಾಡಿಗೆ ಕೆಲಸ ಮಾಡಿಕೊಂಡಿದ್ದರು. ಮೌಲ್ವಿ ಜಹಾಂಗೀರ್ ಮತ್ತೆ ಮನೆಗೆ ಬಂದು ಮಹಿಳೆಗೆ ಲೈಂಗಿಕ ಕ್ರಿಯೆಗೆ ಸಹಕರಿಸು, 5 ಲಕ್ಷ ಹಣ ಕೊಡು ಎಂದು ಬೆದರಿಕೆ ಹಾಕಿದ್ದ. ಈತನ ಕಿರುಕುಳದಿಂದ ಬೇಸತ್ತ ಮಹಿಳೆ ಗೋವಿಂದಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಳು. ಸದ್ಯ ಪೊಲೀಸರಿಂದ ಮೌಲ್ವಿ ಜಹಾಂಗೀರ್ ಬಂಧನವಾಗಿದ್ದು, ತನಿಖೆ ಮುಂದುವರಿದಿದೆ.
ಪತ್ನಿಯ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಪತಿಯಿಂದಲೇ ಬರ್ಬರ ಹತ್ಯೆ!
ರಾಮನಗರ: ಪತ್ನಿಯ ಶೀಲ ಶಂಕಿಸಿ ಪತಿಯೇ ಪತ್ನಿಯ ತಲೆ ಮೇಲೆ ಕಲ್ಲು ಎತ್ತಿ ಬರ್ಬರವಾಗಿ ಹತ್ಯೆ ನಡೆಸಿರುವ ಘಟನೆ ಬೆಂಗಳೂರು ದಕ್ಷಿಣ ತಾಲೂಕಿನ ಕಗ್ಗಲೀಪುರ ಪೊಲೀಸ್ ಠಾಣಾ ವ್ಯಾಪ್ತಿಯ ಕುಳ್ಳಗೌಡನಪಾಳ್ಯದಲ್ಲಿ ನಡೆದಿದೆ.ಸಿಂಚನ (21) ಕೊಲೆಯಾದ ಮಹಿಳೆಯಾದರೆ ಪತಿ ರೇಣುಕಯ್ಯ ಪತ್ನಿಯ ತಲೆಯ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿರುವ ಆರೋಪಿ. ಪತ್ನಿಯ ಶೀಲ ಶಂಕಿಸಿ ರೇಣುಕಯ್ಯ ಮನೆಯಲ್ಲಿ ಯಾವಾಗಲೂ ಗಲಾಟೆ ಮಾಡುತ್ತಿದ್ದ. ಅದರಂತೆ ಶುಕ್ರವಾರವೂ ಕೂಡ (ಫೆ.20) ಕೂಡ ಕುಡಿದು ಗಲಾಟೆ ನಡೆಸಿದ್ದ. ಗಲಾಟೆಯ ಭರದಲ್ಲಿ ಮನೆಯ ಮುಂದಿದ್ದ ಕಲ್ಲು ತಂದು ಅದನ್ನು ಪತ್ನಿಯ ತಲೆ ಮೇಲೆ ಎತ್ತಿಹಾಕಿ ಕೊಲೆ ಮಾಡಿದ್ದಾನೆ. ಬಳಿಕ ಆತ ಸ್ಥಳದಿಂದ ಎಸ್ಕೆಪ್ ಆಗಿದ್ದಾನೆ. ವಿಷಯ ತಿಳಿದು ಸ್ಥಳಕ್ಕೆ ಕಗ್ಗಲೀಪುರ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಮರಣೋತ್ತರ ಪರೀಕ್ಷೆಗೆ ಮೃತದೇಹವನ್ನು ರವಾನೆ ಮಾಡಲಾಗಿದ್ದು, ಆರೋಪಿಯ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.