ಬೆಂಗಳೂರು: ಬಾಷ್ ಸಂಸ್ಥೆಯ ಗ್ಲೋಬಲ್ ಬೋರ್ಡ್ ಆಫ್ ಮ್ಯಾನೇಜ್ಮೆಂಟ್ ಸದಸ್ಯ ಸ್ಟೆಫಾನ್ ಗ್ರೋಶ್ ಅವರೊಂದಿಗೆ ಕರ್ನಾಟಕದಲ್ಲಿ ಬಾಷ್ ನ ತಯಾರಿಕಾ ಹಾಗೂ ಸಂಶೋಧನೆ-ಅಭಿವೃದ್ಧಿ (R&D) ಕೇಂದ್ರ ವಿಸ್ತರಣೆಯ ಕುರಿತು ಸುದೀರ್ಘವಾದ ಚರ್ಚೆ ನಡೆಸಲಾಗಿದೆ ಎಂದು ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.
ಈ ಸಂಬಂಧ ಮಾಹಿತಿ ನೀಡಿರುವ ಅವರು, ಕಳೆದ ವರ್ಷ ಜರುಗಿದ #GIM2025 MoU ನಂತರ ಹೂಡಿಕೆಗಳನ್ನು ಇನ್ನಷ್ಟು ವಿಸ್ತರಿಸುವುದು, ಪೂರೈಕೆದಾರರ ಪರಿಸರ ವ್ಯವಸ್ಥೆಯನ್ನು ಬಲಪಡಿಸುವುದು, ಬೆಂಗಳೂರು ಮತ್ತು ರಾಮನಗರದಲ್ಲಿರುವ ಬಾಷ್ ನ ವಿಶ್ವದರ್ಜೆಯ ಸೌಲಭ್ಯಗಳನ್ನು ಆಧಾರವಾಗಿರಿಸಿಕೊಂಡು, EV ಘಟಕಗಳು, ಪವರ್ ಎಲೆಕ್ಟ್ರಾನಿಕ್ಸ್, ಇ–ಡ್ರೈವ್ ವ್ಯವಸ್ಥೆಗಳು ಮತ್ತು ಹೈಡ್ರೋಜನ್ ಎಂಜಿನಿಯರಿಂಗ್ ಕ್ಷೇತ್ರಗಳಲ್ಲಿ ಕರ್ನಾಟಕವನ್ನು ಬಾಷ್ ನ ಪ್ರಮುಖ ‘ಸ್ಕೇಲ್ ಬೇಸ್’ ಆಗಿ ರೂಪಿಸುವ ಕುರಿತು ವಿವರವಾಗಿ ಚರ್ಚಿಸಲಾಗಿದೆ ಎಂದು ಹೇಳಿದ್ದಾರೆ.
ನವೀನ ತಂತ್ರಜ್ಞಾನ ಹಾಗೂ ಸುಸ್ಥಿರ ಮೊಬಿಲಿಟಿ ಕ್ಷೇತ್ರದಲ್ಲಿ ಕರ್ನಾಟಕವನ್ನು ಜಾಗತಿಕ ಭೂಪಟದಲ್ಲಿ ಅಗ್ರಸ್ಥಾನದಲ್ಲಿರಿಸಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದೂ ಅವರು ತಿಳಿಸಿದ್ದಾರೆ.