2026-03-07 06:10:39

M B Patil | ಮುಂದಿನ ತಲೆಮಾರಿನ ಮೊಬಿಲಿಟಿ ಕ್ರಾಂತಿಗೆ ಬಾಷ್ಕ ಕರ್ನಾಟಕ ಬಲಿಷ್ಠ ಪಾಲುದಾರಿಕೆ ಎಂ ಬಿ ಪಾಟೀಲ್‌ | Speed News Kannada

M B Patil | ಮುಂದಿನ ತಲೆಮಾರಿನ ಮೊಬಿಲಿಟಿ ಕ್ರಾಂತಿಗೆ ಬಾಷ್ಕ ಕರ್ನಾಟಕ ಬಲಿಷ್ಠ ಪಾಲುದಾರಿಕೆ ಎಂ ಬಿ ಪಾಟೀಲ್‌  | Speed News Kannada

ಬೆಂಗಳೂರು: ಬಾಷ್ ಸಂಸ್ಥೆಯ ಗ್ಲೋಬಲ್ ಬೋರ್ಡ್ ಆಫ್ ಮ್ಯಾನೇಜ್ಮೆಂಟ್ ಸದಸ್ಯ ಸ್ಟೆಫಾನ್ ಗ್ರೋಶ್ ಅವರೊಂದಿಗೆ ಕರ್ನಾಟಕದಲ್ಲಿ ಬಾಷ್ ನ ತಯಾರಿಕಾ ಹಾಗೂ ಸಂಶೋಧನೆ-ಅಭಿವೃದ್ಧಿ (R&D) ಕೇಂದ್ರ ವಿಸ್ತರಣೆಯ ಕುರಿತು  ಸುದೀರ್ಘವಾದ ಚರ್ಚೆ ನಡೆಸಲಾಗಿದೆ ಎಂದು ಬೃಹತ್‌ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್‌ ತಿಳಿಸಿದ್ದಾರೆ. 
ಈ ಸಂಬಂಧ ಮಾಹಿತಿ ನೀಡಿರುವ ಅವರು, ಕಳೆದ ವರ್ಷ ಜರುಗಿದ #GIM2025 MoU ನಂತರ ಹೂಡಿಕೆಗಳನ್ನು ಇನ್ನಷ್ಟು ವಿಸ್ತರಿಸುವುದು, ಪೂರೈಕೆದಾರರ ಪರಿಸರ ವ್ಯವಸ್ಥೆಯನ್ನು ಬಲಪಡಿಸುವುದು, ಬೆಂಗಳೂರು ಮತ್ತು ರಾಮನಗರದಲ್ಲಿರುವ ಬಾಷ್ ನ ವಿಶ್ವದರ್ಜೆಯ ಸೌಲಭ್ಯಗಳನ್ನು ಆಧಾರವಾಗಿರಿಸಿಕೊಂಡು, EV ಘಟಕಗಳು, ಪವರ್ ಎಲೆಕ್ಟ್ರಾನಿಕ್ಸ್, ಇ–ಡ್ರೈವ್ ವ್ಯವಸ್ಥೆಗಳು ಮತ್ತು ಹೈಡ್ರೋಜನ್ ಎಂಜಿನಿಯರಿಂಗ್ ಕ್ಷೇತ್ರಗಳಲ್ಲಿ ಕರ್ನಾಟಕವನ್ನು ಬಾಷ್ ನ ಪ್ರಮುಖ ‘ಸ್ಕೇಲ್ ಬೇಸ್’ ಆಗಿ ರೂಪಿಸುವ ಕುರಿತು ವಿವರವಾಗಿ ಚರ್ಚಿಸಲಾಗಿದೆ ಎಂದು ಹೇಳಿದ್ದಾರೆ.
ನವೀನ ತಂತ್ರಜ್ಞಾನ ಹಾಗೂ ಸುಸ್ಥಿರ ಮೊಬಿಲಿಟಿ ಕ್ಷೇತ್ರದಲ್ಲಿ ಕರ್ನಾಟಕವನ್ನು ಜಾಗತಿಕ ಭೂಪಟದಲ್ಲಿ ಅಗ್ರಸ್ಥಾನದಲ್ಲಿರಿಸಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದೂ ಅವರು ತಿಳಿಸಿದ್ದಾರೆ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.