2026-03-07 12:44:25

Lunar eclipse in the sky | ನಬೋಮಂಡಲದಲ್ಲಿ ಚಂದ್ರಗ್ರಹಣದ ಲೀಲೆ ಎಲ್ಲೆಲ್ಲಿ ಹೇಗಿತ್ತು | Speed News Kannada

Lunar eclipse in the sky | ನಬೋಮಂಡಲದಲ್ಲಿ ಚಂದ್ರಗ್ರಹಣದ ಲೀಲೆ ಎಲ್ಲೆಲ್ಲಿ ಹೇಗಿತ್ತು | Speed News Kannada

ಬೆಂಗಳೂರು: ಈ ವರ್ಷದ ಮೊದಲ ಚಂದ್ರಗ್ರಹಣ ಆರಂಭವಾಗಿದೆ. ಸಿಂಹ ರಾಶಿಚಕ್ರ ಚಿಹ್ನೆ, ಪೂರ್ವ ಫಾಲ್ಗುಣಿ ನಕ್ಷತ್ರ ಮತ್ತು ಧೃತಿ ಯೋಗದಲ್ಲಿ ಫಾಲ್ಗುಣದ ಹುಣ್ಣಿಮೆಯ ದಿನ ಚಂದ್ರಗ್ರಹಣ ಸಂಭವಿಸುತ್ತಿದ್ದು, ಮಧ್ಯಾಹ್ನ 3:20ಕ್ಕೆ ಪ್ರಾರಂಭವಾಗಿದೆ. ಸತತ 3 ಗಂಟೆ 27 ನಿಮಿಷಗಳ ಕಾಲ ಇತ್ತು. ಈ ಸಮಯದಲ್ಲಿ ಅದ್ಭುತವಾದ ರಕ್ತ ವರ್ಣದ ಚಂದ್ರ ಆಕಾಶದಲ್ಲಿ ಗೋಚರಿಸುತ್ತಾನೆ. ಸಂಜೆ 6:33ರಿಂದ ಸಂಜೆ 6:48ರ ನಡುವೆ ಚಂದ್ರ ಗೋಚರಿಸಿದ್ದಾನೆ.
ಚಂದ್ರಗ್ರಹಣದ ಸೂತಕ ಅವಧಿ ಗ್ರಹಣಕ್ಕೆ ಒಂಬತ್ತು ಗಂಟೆಗಳ ಮೊದಲು ಆರಂಭವಾಗಿತ್ತು. ಹಾಗಾಗಿ ಸೂತಕ ಅವಧಿ ಬೆಳಗ್ಗೆ 6:23ಕ್ಕೆ ಆರಂಭವಾಗಿ ಮತ್ತು ಗ್ರಹಣದ ಕೊನೆಯಲ್ಲಿ ಕೊನೆಗೊಂಡಿತ್ತು. ಸೂತಕ ಅವಧಿಯಲ್ಲಿ ಯಾವುದೇ ಶುಭ ಕಾರ್ಯಗಳನ್ನು ಮಾಡಲಿಲ್ಲ. ಬಹುತೇಕ ದೇವಾಲಯದ ಬಾಗಿಲುಗಳನ್ನು ಮುಚ್ಚಲಾಗಿತ್ತು. ಇಂದು ಗ್ರಹಣ ಭಾರತ ಸೇರಿದಂತೆ ವಿಶ್ವದಾದ್ಯಂತ ಅನೇಕ ದೇಶಗಳಲ್ಲಿ ಗೋಚರಿಸಿತ್ತು.
ಭಾರತದಾದ್ಯಂತ ಗ್ರಹಣ ಸಂಭವಿಸುತ್ತದೆಯಾದರೂ ಎಲ್ಲಿಯೂ ಗೋಚರಿಸಲಿಲ್ಲ. ಆದರೆ ಪೂರ್ವ ಭಾರತದ ಕೆಲವು ಪ್ರದೇಶಗಳಲ್ಲಿ ಪೂರ್ಣ ಚಂದ್ರಗ್ರಹಣದ ಅಂತ್ಯವು ಗೋಚರಿಸಿದೆ ಎಂದು ತಿಳಿದು ಬಂದಿದೆ. ಆದರೆ ಇತರ ಪ್ರದೇಶಗಳಲ್ಲಿ ಭಾಗಶಃ ಚಂದ್ರಗ್ರಹಣದ ಅಂತ್ಯ ಮಾತ್ರ ಕಂಡುಬಂದಿತ್ತು. ಭಾರತೀಯ ಕಾಲಮಾನ ಸಂಜೆ 5:58ಕ್ಕೆ ಗ್ರಹಣ ಸ್ಪರ್ಶಿಸಿ ಸಂಜೆ 6:48ಕ್ಕೆ ಕೊನೆಗೊಂಡಿತ್ತು.
ಚಂದ್ರ ಗ್ರಹಣದ ಆರಂಭ, ಅಂತ್ಯದ ಸಮಯ:
ಚಂದ್ರ ಗ್ರಹಣವು ಮಧ್ಯಾಹ್ನ 3:20 ಕ್ಕೆ ಆರಂಭವಾಗಿ ಸಂಜೆ 6:48ಕ್ಕೆ ಅಂತ್ಯಗೊಂಡಿತು. ಭಾರತದಲ್ಲಿ ಚಂದ್ರ ಗ್ರಹಣದ ಒಟ್ಟು ಸಮಯ 14-20 ನಿಮಿಷಗಳಾಗಿದ್ದವು.
ವರ್ಷದ ಮೊದಲ ಚಂದ್ರಗ್ರಹಣ ಪೂರ್ವ ಭಾರತದಲ್ಲಿ ಗೋಚರಿಸಲಿದೆ. ದೆಹಲಿ-ಎನ್‌ಸಿಆರ್, ಚೆನ್ನೈ, ಕೋಲ್ಕತ್ತಾ, ಹೈದರಾಬಾದ್, ಮುಂಬೈ, ಅಹಮದಾಬಾದ್, ಬೆಂಗಳೂರು, ಭುವನೇಶ್ವರ, ಪಾಟ್ನಾ, ಇಂಫಾಲ್, ಗುವಾಹಟಿ, ಶಿಲ್ಲಾಂಗ್, ಕೊಹಿಮಾ ಮತ್ತು ಇಟಾನಗರಗಳಲ್ಲಿಯೂ ಗೋಚರಿಸಿತು. ಇನ್ನು ಕೆಲವು ಪ್ರದೇಶಗಳಲ್ಲಿ ಭಾಗಶಃ ಗೋಚರಿಸಿತು.
ಭಾರತ ಹೊರತುಪಡಿಸಿ ಆಸ್ಟ್ರೇಲಿಯಾ, ಪೂರ್ವ ಏಷ್ಯಾ, ಉತ್ತರ ಮತ್ತು ಮಧ್ಯ ಅಮೆರಿಕ, ಪೆಸಿಫಿಕ್ ಮಹಾಸಾಗರ ಮತ್ತು ಪಶ್ಚಿಮ ದಕ್ಷಿಣ ಅಮೆರಿಕದಲ್ಲಿ ಗ್ರಹಣ ಗೋಚರಿಸಲಿದೆ. ಮಧ್ಯ ಏಷ್ಯಾ ಮತ್ತು ದಕ್ಷಿಣ ಅಮೆರಿಕದ ದೊಡ್ಡ ಭಾಗಗಳಲ್ಲಿಯೂ ಕಂಡುಬಂತು. ಆಫ್ರಿಕಾ ಮತ್ತು ಯುರೋಪಿನಲ್ಲಿ ಗೋಚರಿಸಲಿಲ್ಲ.
ರಕ್ತಚಂದನ: ಇಂದು ಸಂಜೆ ಚಂದ್ರಗ್ರಹಣದ ಸಮಯದಲ್ಲಿ ಚಂದ್ರನು ಬಿಳಿ ಬಣ್ಣಕ್ಕೆ ಬದಲಾಗಿ ಕಡು ಕೆಂಪು ಮತ್ತು ನೀಲಿ ಬಣ್ಣದಲ್ಲಿ ಕಾಣಿಸಿಕಂಡಿದ್ದು ವಿಶೇಷ. ಇದು ಆಕಾಶದಲ್ಲಿ ರಕ್ತಸಿಕ್ತ ಚಂದ್ರನ ಅದ್ಭುತ ದೃಶ್ಯ ಸೃಷ್ಟಿಸಿತ್ತು. ಈ ಅಪರೂಪದ ಸಂಪೂರ್ಣ ಚಂದ್ರಗ್ರಹಣವು ದೇಶ ಮತ್ತು ಪ್ರಪಂಚದ ಅನೇಕ ಭಾಗಗಳಲ್ಲಿ ಗೋಚರಿಸಿತು. ಖಗೋಳಶಾಸ್ತ್ರಜ್ಞರ ಪ್ರಕಾರ, ಚಂದ್ರನು ಭೂಮಿಯ ನೆರಳಿನ ಮೇಲಿನ ಭಾಗದ ಮೂಲಕ ಹಾದುಹೋದಾಗ ಮತ್ತು ಓಝೋನ್ ಪದರದಿಂದ ಬರುವ ಬೆಳಕಿನಿಂದ ಪ್ರಭಾವಿತವಾದಾಗ ಕಡು ಕೆಂಪು ಮತ್ತು ನೀಲಿ ಬಣ್ಣದಲ್ಲಿ ಕಾಣಿಸಿಕೊಂಡ ಎಂದು ಅಭಿಪ್ರಾಯಪಟ್ಟಿದ್ದಾರೆ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.