ತ್ರಿವಿಕ್ರಮ್ ಅಂದ್ರೆ ಯಾರಿಗೆ ಗೊತ್ತಿಲ್ಲಾ ಹೇಳಿ ಬಿಗ್‌ಬಾಸ್ ಕನ್ನಡ ಸೀಸನ್11ರ ರನ್ನರ್ ಅಪ್ ಆಗಿದ್ದಾರೆ..ಬಿಗ್‌ಬಾಸ್ ಮನೆಯಲ್ಲಿ ತಮ್ಮದೇ ರೀತಿಯಲ್ಲಿ ಆಟವಾಡಿ ಅತಿ ಹೆಚ್ಚು ಅಭಿಮಾನಿಗಳನ್ನ ಪಡೆದಿದ್ದಾರೆ.. ಇವರು ಟಾಸ್ಕ್ ಮಾಸ್ಟರ್ ಆಗಿ ಎಲ್ಲರ ಗಮನ ಸೆಳೆದರು ಇವರು ಸ್ನೇಹ ಜೀವಿಯಾಗಿದ್ದು, ಕೆಲವು ಉತ್ತಮ ಸ್ನೇಹಿತರನ್ನು ಹೊಂದಿದ್ದಾರೆ ಮಾತ್ರವಲ್ಲದೇ ತ್ರಿವಿಕ್ರಮ್ ಅವರನ್ನ ಪರ್ಸನಾಲಿಟಿಗೆ ಜನಮೆಚ್ಚಿ ವೋಟ್ ಹಾಕಿದಕ್ಕೆ ಬಿಗ್ಯಾಸ್ ರನ್ನರ್ ಅಪ್ ಮಾಡಿದ್ದರು. ತ್ರಿವಿಕ್ರಮ್ ಪ್ರಸ್ತುತ ಕಲರ್ಸ್ ಕನ್ನಡ ವಾಹಿನಿಯ 'ಮುದ್ದು ಸೊಸೆ' ಧಾರಾವಾಹಿಯಲ್ಲಿ ನಾಯಕನ ಪಾತ್ರದಲ್ಲಿ ಮಿಂಚುತ್ತಿದ್ದಾರೆ. ಇಂತಿಪ್ಪ ತ್ರಿವಿಕ್ರಮ್ ತಮ್ಮ ಹಳೆಯ ಲವ್‌ಸ್ಟೋರಿ ಮತ್ತು ಬ್ರೇಕಪ್ ಬಗ್ಗೆ ಭಾವುಕವಾಗಿ ಮಾತನಾಡಿದ್ದಾರೆ.ರಿಯಾಲಿಟಿ ಶೋ ಬಳಿಕ ತ್ರಿವಿಕ್ರಮ್ ಹೊಸ ಧಾರಾವಾಹಿಗೆ ನಾಯಕನಾಗಿ ಬಣ್ಣ ಹಚ್ಚಿ ಮಿಂಚುತ್ತಿದ್ದಾರೆ. ಇವರು ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗ್ತಿರುವ ಮುದ್ದು ಸೊಸೆ ಧಾರವಾಹಿಯಲ್ಲಿ ಭದ್ರೆಗೌಡ ಎಂಬ ಪಾತ್ರದ ಮೂಲಕ ಪ್ರೇಕ್ಷಕರ ಮನಸ್ಸು ಗೆಲ್ಲಿದ್ದಾರೆ.
ಇದೀಗ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಅವರು ತಮ್ಮ ಲವ್ ಬ್ರೇಕಪ್ ಬಗ್ಗೆ ಓಪನ್ ಆಗಿ ಮಾತನಾಡಿ ಭಾವುಕನಾಗಿದ್ದಾನೆ. ನನ್ನ ಫ್ರೆಂಡ್ಸ್ ಗ್ಯಾಂಗ್‌ನಲ್ಲಿ ಇದ್ದವರನ್ನೇ ನಾವು ಲವ್ ಮಾಡಿದ್ದೆ..ಅವರು ಸಾಫ್ಟ್‌ವೇರ್ ಎಂಜಿನಿಯರ್. ನಮ್ಮ ಫ್ರೆಂಡ್ಸ್ ಗ್ಯಾಂಗ್‌ನಲ್ಲಿದ್ದು ಕಾಮನ್ ಫ್ರೆಂಡ್ಸ್ ಆಗಿದ್ದೆವು ಫೀಮೇಲ್ ವರ್ಷನ್ ಆಫ್ ತ್ರಿವಿಕ್ರಮ್ ಅನ್ನೋ ರೀತಿ ಆಗಿ ಲವ್ ಆಯ್ತು. ಆಕೆ ನಿಮಗೂ ಓಕೆ ಅಂದರೆ ನನಗೂ ಓಕೆ. ನನಗೇನು ಇಲ್ಲ. ಮನೆಯಲ್ಲಿ ಹೇಳ್ತಿನಿ,ಯಾವಾಗ ಸಮಯ ಕೂಡಿ ಬರುತ್ತದೋ ಅವಾಗ ಮದುವೆ ಆಗೋಣ ಅಂತಾ ಹೇಳಿದ್ದರು.. ಇದಾದ ನಂತರ ತ್ರಿವಿಕ್ರಮ್ ನಾಲ್ಕು ಸಿನಿಮಾಗಳು ಸೈನ್ ಆಗಿದೆ. ಆದರೆ ಟೇಕಾಫ್ ಆಗ್ತಿಲ್ಲ ಅಂದ್ರೆ ಏನ್ ಮಾಡೋದು. ಈ ರೀತಿ ವಿಷಯಗಳು ಚರ್ಚೆ ಆಗ್ತಿತ್ತು ಕೋವಿಡ್ ಸಮಯದಲ್ಲಿ ಲಾಕ್‌ಡೌನ್ ಆಯ್ತು ಏನು ಮಾಡೋಕಾಗ್ತಿಲ್ಲ ಆರ್ಥಿಕ ಬಿಕ್ಕಟ್ಟು ಏನಿರಲಿಲ್ಲ ಮನೆಯಲ್ಲಿ ಅಪ್ಪ ಇದ್ರು, ಜೀವನ ನಾರ್ಮಲ್ ಆಗಿ ನಡೀತಿತ್ತು. ನಮ್ಮ ಜೀವನದಿಂದ ಯಾವಾಗ ಅಪ್ಪ ಹೋದ್ರು, ಅವಾಗ ಕಷ್ಟ ಎದುರಾಯಿತ್ತು ಅಂತಾ ಬೇಸರ ವ್ಯಕ್ತಪಡಿಸಿದರು. ಅಂದು ಅಪ್ಪನ ಅಂತ್ಯ ಸಂಸ್ಕಾರ ಮುಗಿಸಿ ಮನೆಗೆ ಬಂದಿದೆ ಸಂಜೆ ನನಗೆ ಒಂದು ಫೋನ್ ಒಂತು ಆಗ ಕಾಲ್‌ನಲ್ಲಿ ಇನ್ನೊಬ್ಬರಿದ್ದಾರೆ ಅವರಿಗೆ ನನ್ನ ನಿನ್ನ ಮಧ್ಯೆ ಏನು ಇಲ್ಲ ನೀನು ನನ್ನ ಫಸ್ಟ್ ಬಾಯ್‌ಫ್ರೆಂಡ್ ಅಂತ ಅವರಿಗೆ ಹೇಳಿದ್ದೀನಿ ಅಂತಾ ಹೇಳಿದ್ದರು.
ಆ ಸಮಯದಲ್ಲಿ ಒಂದು ಕ್ಷಣ ಏನು ಅರ್ಥವಾಗಲಿಲ್ಲ ನಾನು ಕಾಲ್‌ನಲ್ಲಿ ಇರುವಾಗಲೇ ಒಂದು ಮೆಸೇಜ್ ಬಂತು ಮನೆಯಲ್ಲಿ ನೋಡಿದ ಹುಡುಗ ಲೈನ್‌ನಲ್ಲಿದ್ದಾನೆ. ನೀನು ನಾನು ಜಸ್ಟ್ ಫ್ರೆಂಡ್ಸ್ ಅಂತ ಹೇಳು ಸಾಕು ಅಂತಾ ರಿಕ್ವೆಸ್ಟ್ ಮಾಡದ್ದರು.. ಬೆಳ್ಳಗ್ಗೆ ತಂದೆ ಮೃತಪಟ್ಟ ಸುದ್ದಿ ತಿಳಿದು ನನ್ನನ್ನ ನೋಡಿ, ಬೆಳಗ್ಗೆ ಬಂದು ನೀನು ಮಾತಾಡಿದ್ದು ನೋಡಿ ನೀನು ಸಮಾಧಾನ ಮಾಡಿದ್ದರು..ಆದ್ರೆ ಸಂಜೆ ನಾನು ತಂದೆ ಕಳೆದುಕೊಂಡು ನೋವಿನಲ್ಲಿ ಇರುವಾಗಲ್ಲೇ ಫೋನ್ ಮಾಡಿ ಈ ರೀತಿ ಶಾಕಿಂಗ್ ಸುದ್ದಿ ಹೇಳಿ ನಾನು ಡ್ರಾಮಾ ಮಾಡಿದೆ ಅಂತಾ ಪ್ರೋವ್ ಮಾಡಿದ್ದರು.. ಅಂದೇ ಅವರ ಜೊತೆಗಿದ್ದ ಫ್ರೆಂಡ್‌ಶಿಪ್ ಎಲ್ಲವೂ ಕಟ್‌ಆಫ್ ಮಾಡಿದೆ ಅಂತಾ ತ್ರಿವಿಕ್ರಮ ಭಾವುಕರಾಗಿದ್ದಾರೆ.