2026-03-07 12:19:44

Land Lord | ಆದಿಚುಂಚನಗಿರಿ ಮಠದ ಜಗದ್ಗುರು ಶ್ರೀಶ್ರೀಶ್ರೀ ಡಾ ನಿರ್ಮಲಾನಂದನಾಥ ಸ್ವಾಮೀಜಿ ಅವರಿಂದ ಲ್ಯಾಂಡ್ ಲಾರ್ಡ್ ಚಿತ್ರ ವೀಕ್ಷಣೆ | Speed News Kannada

Land Lord | ಆದಿಚುಂಚನಗಿರಿ ಮಠದ ಜಗದ್ಗುರು  ಶ್ರೀಶ್ರೀಶ್ರೀ ಡಾ ನಿರ್ಮಲಾನಂದನಾಥ ಸ್ವಾಮೀಜಿ ಅವರಿಂದ ಲ್ಯಾಂಡ್ ಲಾರ್ಡ್ ಚಿತ್ರ ವೀಕ್ಷಣೆ | Speed News Kannada

ಕೆ.ಎಸ್.ಹೇಮಂತ್ ಗೌಡ ಹಾಗೂ ಕೆ.ವಿ.ಸತ್ಯಪ್ರಕಾಶ್ ನಿರ್ಮಾಣದ,  ಜಡೇಶ್ ಕೆ ಹಂಪಿ ನಿರ್ದೇಶನದ ಹಾಗೂ ವಿಜಯ ಕುಮಾರ್(ದುನಿಯಾ ವಿಜಯ್), ರಚಿತರಾಮ್, ರಿತನ್ಯ ವಿಜಯ್ ಮುಂತಾದವರು ನಟಿಸಿರುವ "ಲ್ಯಾಂಡ್‌ ಲಾರ್ಡ್" ಚಿತ್ರವನ್ನು ಇತ್ತೀಚಿಗೆ ಆದಿಚುಂಚನಗಿರಿ ಮಠದ ಜಗದ್ಗುರು ಶ್ರೀಶ್ರೀಶ್ರಿ ಡಾ||ನಿರ್ಮಲಾನಂದನಾಥ ಸ್ವಾಮೀಜಿ ಅವರು ಮಹಾಲಕ್ಷ್ಮಿ ಪುರದ ಬಿ.ಜಿ.ಎಸ್ ಶಾಲೆ ಹಾಗೂ ಕಾಲೇಜು ಆವರಣದಲ್ಲಿರುವ ಥಿಯೇಟರ್ ನಲ್ಲಿ ವೀಕ್ಷಿಸಿದರು. ಶಾಖಾ ಮಠದ ಸ್ವಾಮಿಗಳು, ವಿದ್ಯಾರ್ಥಿಗಳು, ಶಾಸಕ ಗೋಪಾಲಯ್ಯ, ನಿವೃತ್ತ ಐ.ಎ.ಎಸ್ ಅಧಿಕಾರಿ ಡಾ|| ಸಿ.ಸೋಮಶೇಖರ್, ಮಾಜಿ ಸಂಸದ ಮುದ್ದಹನುಮೇಗೌಡ ಹಾಗೂ ನಿರ್ಮಾಪಕರಾದ ಕೆ.ಎಸ್ ಹೇಮಂತ್ ಗೌಡ, ಕೆ.ವಿ.ಸತ್ಯಪ್ರಕಾಶ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

"ಲ್ಯಾಂಡ್ ಲಾರ್ಡ್",  ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಚಿತ್ರ. ದುಡ್ಡಿಗಿಂತ ವಿದ್ಯೆಯೇ ಮುಖ್ಯ ಎಂದು ಸಾರುವ ಹಾಗೂ ರೈತರ ಪರ ಕಾಳಜಿ ಇರುವ ಚಿತ್ರ. ಹೆಣ್ಣುಮಕ್ಕಳಿಗೆ ವಿದ್ಯೆ ಎಷ್ಟು ಮುಖ್ಯ ಎಂಬುದನ್ನು ಸಹ ಈ ಚಿತ್ರದಲ್ಲಿ ತೋರಿಸಲಾಗಿದೆ ಎಂದು ಚಿತ್ರ ವೀಕ್ಷಣೆಯ ನಂತರ ಶ್ರೀಶ್ರೀಶ್ರೀ ಡಾ||ನಿರ್ಮಲಾನಂದನಾಥ ಸ್ವಾಮೀಜಿ ಅವರು ಹೇಳಿದರು ಎಂದು ನಿರ್ಮಾಪಕರು ತಿಳಿಸಿದ್ದಾರೆ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.