2026-03-07 03:34:49

Lakshmi Hebbalkar |ಕೇಂದ್ರದ ಬಿಜೆಪಿ ಸರ್ಕಾರ ರಾಷ್ಟ್ರದ ಅಭಿವೃದ್ಧಿಗೆ ರಿವರ್ಸ್ ಗೇರ್ ಹಾಕಿದೆ : ಲಕ್ಷ್ಮೀ ಹೆಬ್ಬಾಳಕರ್ | Speed News Kannada

Lakshmi Hebbalkar |ಕೇಂದ್ರದ ಬಿಜೆಪಿ ಸರ್ಕಾರ ರಾಷ್ಟ್ರದ ಅಭಿವೃದ್ಧಿಗೆ ರಿವರ್ಸ್ ಗೇರ್ ಹಾಕಿದೆ : ಲಕ್ಷ್ಮೀ ಹೆಬ್ಬಾಳಕರ್ | Speed News Kannada

ಕೇಂದ್ರದ ಬಿಜೆಪಿ ಸರ್ಕಾರಕ್ಕೆ ದೇಶವನ್ನು ಮುನ್ನಡೆಸುವ ಶಕ್ತಿಯೂ ಆಸಕ್ತಿಯೂ ಇಲ್ಲ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ ತಂದ ಜನಪರ ಯೋಜನೆಗಳನ್ನು ದುರ್ಬಲಗೊಳಿಸಿ ದೇಶವನ್ನು ಹಿಂದಕ್ಕೆ ಒಯ್ಯಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

ಮನರೇಗಾ ಯೋಜನೆಯನ್ನು ನಾಶ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ. ಲೋಪಗಳಿದ್ದರೆ ಸರಿಪಡಿಸಬಹುದಿತ್ತು, ಆದರೆ ಸಂಪೂರ್ಣ ಯೋಜನೆಯನ್ನೇ ಮುಚ್ಚುವ ಪ್ರಯತ್ನ ನಡೆಯುತ್ತಿದೆ. ಇದು ಬಡವರು, ಕಾರ್ಮಿಕರು, ಮಹಿಳೆಯರ ಬದುಕಿನ ಮೇಲೆ ನೇರ ದಾಳಿ ಎಂದು ಹೇಳಿದ್ದಾರೆ.
ಮನರೇಗಾ ಉಳಿಸಲು ಕಾಂಗ್ರೆಸ್ ಪಕ್ಷ ರಾಜ್ಯಾದ್ಯಂತ ಹೋರಾಟ ನಡೆಸಲಿದೆ. ಮಂಗಳವಾರ ರಾಜಭವನ ಚಲೋ, ತಾಲ್ಲೂಕು ಮಟ್ಟದಲ್ಲಿ ಪಾದಯಾತ್ರೆ ಹಾಗೂ ಪಂಚಾಯಿತಿ ಮಟ್ಟದಲ್ಲಿ ಹೋರಾಟ ನಡೆಯಲಿದೆ ಎಂದು ಲಕ್ಷ್ಮೀ ಹೆಬ್ಬಾಳಕರ್ ತಿಳಿಸಿದ್ದಾರೆ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.