2026-03-07 01:34:11

Kuldeep Yadav had an argument with Hardik Pandya on the field | ಗೆದ್ದ ಖುಷಿ ಬಿಟ್ಟು ಮೈದಾನದಲ್ಲಿ ಹಾರ್ದಿಕ್ ಪಾಂಡ್ಯ ಜೊತೆ ಕುಲದೀಪ್ ಯಾದವ್‌ ವಾಗ್ವಾದ ಕಾರಣ ಇದೇ | Speed News Kannada

Kuldeep Yadav had an argument with Hardik Pandya on the field | ಗೆದ್ದ ಖುಷಿ ಬಿಟ್ಟು ಮೈದಾನದಲ್ಲಿ ಹಾರ್ದಿಕ್ ಪಾಂಡ್ಯ ಜೊತೆ ಕುಲದೀಪ್ ಯಾದವ್‌ ವಾಗ್ವಾದ ಕಾರಣ ಇದೇ | Speed News Kannada

ನಿನ್ನೆ ಕೊಲಂಬೊದ ಮೈದಾನದಲ್ಲಿ ಟೀ ಇಂಡಿಯಾ ಪಾಕಿಸ್ತಾನದ ವಿರುದ್ಧ ಗೆದ್ದ ಅಬ್ಬರಿಸಿದ್ದರು. ಮೊದಲಿಗೆ ಬ್ಲೂ ಬಾಯ್ಸ್ ರಣಬೇಟೆಗಾರನ ರೀತಿ ಆಟವಾಡಿ ಪಾಕಿಸ್ತಾನವನ್ನು ಸೋಲಿನ ಮೈದಾನದಲ್ಲಿ ಮುಗ್ಗರಿಸಿ ಬೀಳುವಂತೆ ಮಾಡಿದ್ದಾರೆ.. ಈ ವೇಳೆ ಭಾರತೀಯ ಆಟಗಾರರಾದ ಹಾರ್ದಿಕ್ ಪಾಂಡ್ಯ ಹಾಗೂ ಕುಲದೀಪ್ ಯಾದವ್ ಹಾಗೂ ತಂಡದ ನಾಯಕ ಸೂರ್ಯ ಕುಮಾರ್ ನಡುವೆ ವಾಗ್ವಾದ ನಡೆದಿದೆ.. ಈ ಮೂವರ ನಡುವಿನ ವಾಗ್ವಾದ ಕಂಡು ನಮ್ಮ ಟೀ ಇಂಡಿಯಾದ ನಡುವೆ ಎಲ್ಲವೂ ಸರಿ ಇದ್ದೇಯಾ ಅನ್ನೂ ಪ್ರಶ್ನೆ ಮೂಡಿದೆ.. ಅಷ್ಟಕ್ಕೂ ನಮ್ಮ ಶತ್ರು ದೇಶವಾದ ಪಾಕಿಸ್ತಾನ ಎದುರು ಆಟವಾಡುವಾಗಲೇ ತೀವ್ರವಾದ ವಾಗ್ವಾದ ನಡೆದಿದೆ. ಸದ್ಯ ಅಷ್ಟಕ್ಕೂ ಮೈದಾನಲ್ಲಿ ನಡೆದಿದ್ದಾದರೂ ಏನು?ಹಾರ್ದಿಕ್ ಕುಲದೀಪ್ ನಡುವೆ ಮಾತಿನ ಚಕಮಕಿಗೆ ಕಾರಣ ಏನು ಅಂತಾ ನೋಡೋದಾದ್ರೆ ಇಲ್ಲಿದೆ ಸಂಪೂರ್ಣ ಮಾಹಿತಿ.
ಟೀಮ್ ಇಂಡಿಯಾ ಪಾಕಿಸ್ತಾನದ ವಿರುದ್ದ ಉತ್ತಮ ಪ್ರದರ್ಶನ ನೀಡಿದೆ ಭರ್ಜರಿ ಜಯಭೇರಿ ಸಾಧಿಸಿದೆ..ಹಾಗಿರುವಾಗ ಪಂದ್ಯದ ವೇಳೆಯೇ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಮತ್ತು ಕಲದೀಪ್ ಯಾದವ್ ನಡುವೆ ತೀವ್ರವಾದ ವಾಗ್ವಾದ ನಡೆದಿದೆ.. ಪಂದ್ಯ ಮುಗಿದ ಬಳಿಕವೂ ಕುಲದೀಪ್ ಯಾದವ್ ಸೂರ್ಯ ಕುಮಾರ್ ಜೊತೆಗೆ ಕೂಡ ಸಿಟ್ಟಿನಿಂದ ಮಾತನಾಡಿರೊದು ಕಂಡು ಬಂದಿದೆ..ಸಾಂಪ್ರದಾಯಿಕ ಹ್ಯಾಂಡ್‌ ಶೇಕ್ ವೇಳೆ ಕೂಡ ಈ ಮೂವರು ಆಟಗಾರರ ನಡುವೆ ಬಿಸಿಬಿಸಿ ಚರ್ಚೆ ನಡೆದಿದೆ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ.
ಮಾತ್ರವಲ್ಲದೇ ಹಾರ್ದಿಕ್ ಪಾಂಡ್ಯ ಕುಲದೀಪ್ ಯಾದವ್ ಬಳಿ ವೇಗವಾಗಿ ಮುನ್ನುಗ್ಗಿ ಬರುತ್ತಿದ್ದಂತೇ, ತಿಲಕ್ ವರ್ಮಾ ಅವರು ಆತಂಕದಿಂದ ಓಡಿಬಂದರು. ಅಷ್ಟರಲ್ಲಿ ರಿಂಕ್ ಸಿಂಗ್ ಮಧ್ಯಪ್ರವೇಶಿ ಸಮಾಧಾನಪಡಿಸಿದ್ದರು. ಈ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ ಇದ್ರಿಂದಾಗಿ ಕ್ರೀಡಾಭಿಮಾನಿಗಳಲ್ಲಿ ಭಾರೀ ಆತಂಕ ಮೂಡಿದೆ. IND vs PAK: ದುರಹಂಕಾರಿ ಪಾಕ್ ಮಂಡಿಯೂರುವಂತೆ ಮಾಡಿದ್ದು ಟೀಂ ಇಂಡಿಯಾದ ಈ ಆಟಗಾರರು! ಗೆಲುವಿನ ಸಿಂಹಪಾಲು ಇವರದ್ದೇ..

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.