2026-03-07 05:00:26

KSDL Records | 2026ರ ಜನವರಿಯಲ್ಲಿ 4,894 ಮೆಟ್ರಿಕ್ ಟನ್ ಸಾಬೂನು ಉತ್ಪಾದನೆ: KSDL ದಾಖಲೆ | Speed News Kannada

KSDL Records | 2026ರ ಜನವರಿಯಲ್ಲಿ 4,894 ಮೆಟ್ರಿಕ್ ಟನ್ ಸಾಬೂನು ಉತ್ಪಾದನೆ: KSDL ದಾಖಲೆ | Speed News Kannada

ಬೆಂಗಳೂರು: ರಾಜ್ಯ ಸರ್ಕಾರಿ ಸ್ವಾಮ್ಯದ ಕರ್ನಾಟಕ ಸೋಪ್ಸ್ ಅಂಡ್ ಡಿಟರ್ಜೆಂಟ್ಸ್ ಲಿಮಿಟೆಡ್ (KSDL) ಜನವರಿಯಲ್ಲಿ 4,894.777 ಮೆಟ್ರಿಕ್ ಟನ್ ಉತ್ಪಾದನೆ ಸಾಧಿಸಿ ತನ್ನ ಇತಿಹಾಸದಲ್ಲೇ ಅತ್ಯಧಿಕ ಮಾಸಿಕ ದಾಖಲೆಯನ್ನು ನಿರ್ಮಿಸಿದೆ.
 3,798 ಟನ್ ಸಾಬೂನು; 941 ಟನ್ ಡಿಟರ್ಜೆಂಟ್ ಮತ್ತು 155 ಟನ್ ಕಾಸ್ಮೆಟಿಕ್ಸ್ ಮಾರಾಟ ಮಾಡಲಾಗಿದೆ ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್‌ ತಿಳಿಸಿದ್ದಾರೆ.
2020ರಿಂದ 2025ರವರೆಗೆ ಹಂತ ಹಂತವಾಗಿ ದಾಖಲೆ ಮುರಿದು, ಈಗ ಹೊಸ ಶಿಖರ ತಲುಪಿದೆ.  ನಮ್ಮ ಸರ್ಕಾರದ ಸುಧಾರಿತ ಕ್ರಮಗಳು, ಉತ್ತಮ ನಿರ್ವಹಣೆ, ಮಾರುಕಟ್ಟೆ ವಿಸ್ತರಣೆ, ಬ್ರ್ಯಾಂಡ್ ಬಲಪಡಿಕೆ ಮತ್ತು 3 ಶಿಫ್ಟ್ ಗಳಲ್ಲಿ ನಿರಂತರ ಕಾಯಕ, ಗುಣಮಟ್ಟ ಆಧಾರಿತ ಉತ್ಪಾದನೆ ಈ ಎಲ್ಲವುಗಳ ಪ್ರತಿಫಲ ಇದಾಗಿದೆ ಎಂದಿದ್ದಾರೆ.
ಮಹತ್ವದ ಅಂಶವೇನೆಂದರೆ -ಯಾವುದೇ ಹೊಸ ಯಂತ್ರೋಪಕರಣ, ಹೆಚ್ಚುವರಿ ಸಿಬ್ಬಂದಿ ಇಲ್ಲದೆ, ಈಗಿರುವ ಮೂಲಸೌಕರ್ಯದಲ್ಲೇ ಈ ಸಾಧನೆ ಮಾಡಿದೆ.  2030ರೊಳಗೆ ವಾರ್ಷಿಕ ರೂ. 5,000 ಕೋಟಿ ಟರ್ನ್ ಓವರ್ ಗುರಿ ಹೊಂದಿದ್ದು ಈ ಗುರಿ ಸಾಧನೆಯತ್ತ ಭರವಸೆಯ ಹೆಜ್ಜೆಗಳನ್ನು ಇರಿಸುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.