ಡೆಹ್ರಾಡೂನ್, ಫೆ.17-ಬೇಸ್‌ಬಾಲ್ ಬ್ಯಾಟ್‌ನಿಂದ ಹೊಡೆದು ಸ್ನೇಹಿತನನ್ನು ಕೊಂದು ಅರಣ್ಯದಲ್ಲಿ ಗುಂಡಿ ತಗದು ಸಮಾಧಿ ಮಾಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಡೆಹ್ರಾಡೂನ್‌ನಲ್ಲಿ ಧಿಮಾನ್ ಎಂಬಾತನನ್ನು ಕೊಂದು ಪಾರಾರಿಯಾಗಿರುವ ಆರೋಪಿ ಸೆಮ್ಯಾಲ್ (28) ಹಾಗು ಆತನ ಸಹಚರರಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪ ಹೊತ್ತಿರುವ ಧಿಮಾನ್ ಫೆ.9 ರಂದು ತನ್ನ ತಂದೆಯೊಂದಿಗೆ ತನ್ನ ವಿರುದ್ಧದ ಪ್ರಕರಣದ ವಿಚಾರಣೆಗಾಗಿ ನ್ಯಾಯಾಲಯಕ್ಕೆ ಹೋಗಿದ್ದರು.
ವಿಚಾರಣೆ ಮುಂದೂಡಿದ ನಂತರ ತಂದೆಗೆ ಮನೆಗೆ ಹೋಗುವಂತೆ ಹೇಳಿ ಸ್ನೇಹಿರತ ಭೇಟಿ ಗೆ ಹೋಗಿದ್ದ ದರೆ ರಾತ್ರಿ ತಾದರೂ ಆತ ಮನೆಗೆ ಹಿಂತಿರುಗಲಿಲ್ಲ ನಂತರ ಧೀಮನ್‌ನ ತಂದೆ ಫೆಬ್ರವರಿ 11 ರಂದು ನಾಪತ್ತೆ ದೂರು ದಾಖಲಿಸಿದರು ಮತ್ತು ಹುಡುಕಾಟ ಆರಂಭಿಸಲಾಯಿತು. ತನಿಖೆಯ ಸಮಯದಲ್ಲಿ, ಧೀಮನ್ ಜೊತೆ ಆಗಾಗ್ಗೆ ಮಾದಕ ದ್ರವ್ಯ ಸೇವಿಸುತ್ತಿದ್ದ ಅವನ ಸ್ನೇಹಿತರು ಕೂಡ ಮನೆಗಳಿಂದ ಕಾಣೆಯಾಗಿರುವುದು ಪತ್ತೆಯಾಗಿದೆ.
ಅನುಮಾನದ ಆಧಾರದ ಮೇಲೆ, ಪೊಲೀಸ್ ತಂಡಗಳು ಧೀಮನ್ ಮತ್ತು ಅವನ ಕಾಣೆಯಾದ ಸಹಚರರ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಲು ಪೊಲೀಸರು ಮುಂದಾದಾಗ ಕಾಣೆಯಾದ ಸಹಚರರಲ್ಲಿ ಒಬ್ಬರಾದ ಹೇಮಂತ್ ಸೆಮ್ಯಾಲ್ ಫೆ.9 ರಂದು ರಾತ್ರಿ ರೇಸ್‌ರ್ಸ್ ಸಿ-ಬ್ಲಾಕ್‌ನಲ್ಲಿರುವ ತನ್ನ ಕೊಠಡಿಯಿಂದ ಟ್ಯಾಕ್ಸಿಯಲ್ಲಿ ಹೋಗಿದ್ದು ಗೊತ್ತಾಗಿದೆ. ಸಿಸಿಟಿವಿ ಕ್ಯಾಮೆರಾಗಳ ಮೂಲಕ ಟ್ಯಾಕ್ಸಿ ಬಗ್ಗೆ ಮಾಹಿತಿ ಪಡೆದ ನಂತರ, ಅದರ ಚಾಲಕ, ನ್ಯೂ ಪಟೇಲ್ ನಗರದ ನಿವಾಸಿ ರಾಜಾನಂದನ್ ಠಾಕೂರ್ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಯಿತು.
ಸೆಮ್ಯಾಲ್ ಮತ್ತು ಅವನ ಸಹಚರರು ತಮ್ಮ ಟ್ಯಾಕ್ಸಿಯಲ್ಲಿ ಒಬ್ಬ ವ್ಯಕ್ತಿಯ ಶವವನ್ನು ಕಂಬಳಿಯಲ್ಲಿ ಸುತ್ತಿ ಚಿಡಿಯಾಪುರ ಕಾಡಿನಲ್ಲಿ ಹೂಳಿದ್ದಾರೆ ಎಂದು ಠಾಕೂರ್ ಬಹಿರಂಗಪಡಿಸಿದ್ದಾರೆ. ದಾರಿಯಲ್ಲಿ, ಆರೋಪಿಗಳು ಮದ್ಯಪಾನ ಮಾಡುತ್ತಿದ್ದಾಗ ಧೀಮನ್ ಜೊತೆ ಜಗಳವಾಡಿದ್ದಾಗಿ ಮತ್ತು ಆಕಸಿಕವಾಗಿ ಬೇಸ್‌ಬಾಲ್ ಬ್ಯಾಟ್‌ನಿಂದ ಅವರ ತಲೆಗೆ ಹೊಡೆದಿದ್ದರಿಂದ ಅವರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ ಎಂದು ಠಾಕೂರ್ ಹೇಳಿದ್ದಾರೆ..ನಂತರ ಕಾರಿನಲ್ಲಿ ಸಮಾಧಿ ಮಾಡಿದದ್ದ ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ಶವ ಪತ್ತೆಯಾಗಿದೆ. ಘಟನೆಯಲ್ಲಿ ಭಾಗಿಯಾಗಿರುವ ಆರೋಪಿಗಳನ್ನು ಹುಡುಕಾಟಕ್ಕೆ ಪ್ರತ್ಯೇಕ ತಂಡಗಳನ್ನು ರಚಿಸಲಾಗಿದೆ ಎಲ್ಲಾ ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಪೊಲೀಸ್ ವರಿಷ್ಠಾಧಿಕಾರಿ (ನಗರ) ಪ್ರಮೋದ್ ಕುಮಾರ್ ತಿಳಿಸಿದ್ದಾರೆ.