2026-05-11 04:57:06

keralam; Three strong aspirants; selection become headache to highcommand| ಕೇರಳಂ: ಮೂವರು ಪ್ರಬಲ ಆಕಾಂಕ್ಷಿಗಳು; ಕಗ್ಗಂಟಾದ ಮುಖ್ಯಮಂತ್ರಿ ಆಯ್ಕೆ| Speed News Kannada

keralam; Three strong aspirants; selection become headache to highcommand| ಕೇರಳಂ: ಮೂವರು ಪ್ರಬಲ ಆಕಾಂಕ್ಷಿಗಳು; ಕಗ್ಗಂಟಾದ ಮುಖ್ಯಮಂತ್ರಿ ಆಯ್ಕೆ| Speed News Kannada

ಕೇರಳಂ: ಮೂವರು ಪ್ರಬಲ ಆಕಾಂಕ್ಷಿಗಳು; ಕಗ್ಗಂಟಾದ ಮುಖ್ಯಮಂತ್ರಿ ಆಯ್ಕೆ

ತಿರುವನಂತಪುರ: 'ಕೇರಳಂನಲ್ಲಿ ಸ್ಪಷ್ಟ ಬಹುಪತ ಪಡೆದಿದ್ದರೂ ನೂತನ ಮುಖ್ಯಮಂತ್ರಿ ಆಯ್ಕೆ ಕಾಂಗ್ರೆಸ್‌ ಹೈಕಮಾಂಡ್‌ ಗೆ ಕಗ್ಗಂಟಾಗಿ ಪರಣಮಿಸಿದೆ. ಮೂವರು ಪ್ರಮುಖ ಆನಾಯಕರು ಮುಖ್ಯಮಂತ್ರಿ ಹುದ್ದೆಗೆ ಆಕಾಂಕ್ಷಿಗಳಾಗಿರುವುದೇ ಈ ಬಿಕ್ಕಟ್ಟಿಗೆ ಕಾರಣವಾಗಿದೆ. ವಿ.ಡಿ. ಸತೀಶನ್, ಕೆ.ಸಿ. ವೇಣುಗೋಪಾಲ್ ಮತ್ತು ರಮೇಶ್ ಚೆನ್ನಿತ್ತಲ ತಮ್ಮದೇ ಆದ ರೀತಿಯಲ್ಲಿ ಸಿಎಂ ಗದ್ದುಗೆ ಏರಲು ಸೆವಪ್ರಯತ್ನ ನಡೆಸಿದ್ದಾರೆ.

ಮೇ 4ರಂದು ಕೇರಳಂ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದರೂ ಈವರೆಗೆ ಸಿಎಂ ಆಯ್ಕೆ ಪ್ರಕ್ರಿಯೆ ಪೂರ್ಣಗೊಳಿಸಲು ಕಾಂಗ್ರೆಸ್‌ಗೆ ಸಾಧ್ಯವಾಗಿಲ್ಲ. ಈ ಮೂಲಕ ರಾಜಕೀಯ ಅನಿಶ್ಚಿತತೆ ಮುಂದುವರಿದಿದೆ.

ಪಕ್ಷದ ಪರಿಷ್ಠರಾದ ಎಐಸಿಸಿ ಅಧ್ಯ ಮಲ್ಲಿಕಾರ್ಜುನ ಖರ್ಗೆ ಹಾಗೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಗಳ ಜತೆ ಚರ್ಚಿಸಿದ್ದಾರೆ. ಸಿಎಂ ಆಯ್ಕೆ ಸಂಬಂಧ ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿ ಅವರನ್ನು ಭೇಟಿಯಾದ ಬಳಿಕ ಖರ್ಗೆ ಅಂತಿಮ ತೀರ್ಮಾನ ಪ್ರಕಟಿಸುವ ನಿರೀಕ್ಷೆ ಇದೆ ಎಂದು ಮೂಲಗಳು ಖಚಿತಪಡಿಸಿವೆ.

ರಮೇಶ್ ಚೆನ್ನಿತ್ತಲ ಪ್ರತಿಕ್ರಿಯೆ ನೀಡಿ ಕಾಂಗ್ರೆಸ್ ಹೈಕಮಾಂಡ್ ನಿರ್ಧಾರಕ್ಕೆ ಬದ್ಧವಾಗಿದ್ದೇನೆ. ನಾವು ಹೇಳಬೇಕು ಅಂದುಕೊಂಡಿದ್ದನ್ನು ಹೇಳಿಯಾಗಿದೆ. ಅವರು ಎಲ್ಲವನ್ನು ಕೇಳಿದ್ದಾರೆ. ಅಂತಿಮವಾಗಿ ವರಿಷ್ಠರು ನಿರ್ಧಾರ ಕೈಗೊಳ್ಳುತ್ತಾರೆ ಎಂದು ಎಂದು ತಿಳಿಸಿದ್ದಾರೆ. ವಿಳಂಬವಾಗುತ್ತಿದೆ ಎಂಬ ಜೆಪಿಯ ಟೀಕೆಗೆ ಅವರು, ಕಾಂಗ್ರೆಸ್ ನಾಗ್ಪುರದ ಸೂಚನೆಗಳ ಮೇರೆಗೆ ಕೆಲಸ ಮಾಡುವ ಪಕ್ಷವಲ್ಲ ಎಂದು ತಿರುಗೇಟು ನೀಡಿದ್ದಾರೆ.

140 ಸದಸ್ಯ ಬಲದ ಕೇರಳಂ ವಿಧಾನಸಭೆಯಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಮೈತ್ರಿಕೂಟ 102 ಸ್ಥಾನಗಳನ್ನು ಗೆದ್ದಿದೆ. ಆದರೂ ಸಿಎಂ ಆಯ್ಕೆ ವಿಳಂಬವಾಗುತ್ತಿದೆ. ತ್ವರಿತ ನಿರ್ಧಾರ ಕೈಗೊಳ್ಳದಿರುವ ವರಿಷ್ಠರ ವಿರುದ್ಧ ಅಸಮಾಧಾನದ ಹೊಗೆಯಾಡುತ್ತಿದೆ.  ಪ್ರಸ್ತುತ ಕೇರಳಂ ವಿಧಾನಸಭೆಯ ಅವಧಿ ಮೇ 23ರಂದು ಮುಕ್ತಾಯವಾಗಲಿದೆ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.