2026-03-07 12:47:50

Kenyan MLA takes oath holding Bhagavad Gita | ಬಲಗೈಯಲ್ಲಿ ಭಗವದ್ಗೀತೆ ಹಿಡಿದು ಪ್ರಮಾಣವಚನ ಸ್ವೀಕರಿಸಿದ ಕೀನ್ಯಾ ಶಾಸಕ | Speed News Kannada

Kenyan MLA takes oath holding Bhagavad Gita | ಬಲಗೈಯಲ್ಲಿ ಭಗವದ್ಗೀತೆ ಹಿಡಿದು ಪ್ರಮಾಣವಚನ ಸ್ವೀಕರಿಸಿದ ಕೀನ್ಯಾ ಶಾಸಕ | Speed News Kannada

ಕೀನ್ಯಾ, ಫೆಬ್ರವರಿ 26: ಕೀನ್ಯಾದ ಯುವ ನಾಯಕರೊಬ್ಬರು ಬಲಗೈಯಲ್ಲಿ ಭಗವದ್ಗೀತೆ ಹಿಡಿದು ಪ್ರಮಾಣವಚನ ಸ್ವೀಕರಿಸಿರುವ ಫೋಟೊ ಎಲ್ಲೆಡೆ ವೈರಲ್ ಆಗಿದೆ. ಈ ಯುವ ನಾಯಕನ ಹೆಸರು ಕ್ಯಾಲೆಬ್. ಮೊಂಬಾಸಾದ ಕೌಂಟಿಯಲ್ಲಿರುವ ವಿಧಾನಸಭೆಯಲ್ಲಿ ಈ ಐತಿಹಾಸಿಕ ಘಟನೆ ನಡೆದಿದೆ.
ಮೊಂಬಾಸಾ ಕೌಂಟಿಯ ಚಂಗವ್ವ ಕ್ಷೇತ್ರವನ್ನು ಪ್ರತಿನಿಧಿಸುವ ಯುವ ಶಾಸಕ ಕ್ಯಾಲೆಬ್ ಪ್ರಮಾಣವಚನ ಸ್ವೀಕರಿಸಲು ಭಗವದ್ಗೀತೆಯೊಂದಿಗೆ ಬಂದಿದ್ದರು.
ಈ ಕುರಿತು ಇಸ್ಕಾನ್‌ನ ಓಂಕಾರ ಮುಕುಂದ ದಾಸ್ ಮಾತನಾಡಿ, ಈ ನಡೆ ನಾಟಕೀಯವಲ್ಲ, ಪ್ರಚಾರಕ್ಕೂ ಅಲ್ಲ ಆ ಭಾವ ಅವರ ಹೃದಯಲ್ಲಿ ಹುಟ್ಟಿಕೊಂಡಿರುವುದು, ಅದೇ ಸತ್ಯ, ಹಾಗೂ ಇದು ಉದ್ದೇಶ ಪೂರ್ವಕ ನಡೆ ಎಂದರು. ಸಾರ್ವಜನಿಕ ಹುದ್ದೆಯು ಹೆಚ್ಚಾಗಿ ಪ್ರಬಲ ಧಾರ್ಮಿಕ ಸಂಪ್ರದಾಯಗಳೊಂದಿಗೆ ಹೆಣೆದುಕೊಂಡಿರುವ ರಾಷ್ಟ್ರದಲ್ಲಿ ಭಗವದ್ಗೀತೆಯ ಮೇಲೆ ಪ್ರಮಾಣ ಮಾಡುವ ಕ್ಯಾಲೆಬ್ ಅವರ ನಿರ್ಧಾರವು ಹೊಸ ಭರವಸೆಯನ್ನು ಹುಟ್ಟುಹಾಕಿದೆ.
ಕ್ಯಾಲೆಬ್ ಹರೇ ಕೃಷ್ಣ ಸಮುದಾಯದಲ್ಲಿರುವ ಭಕ್ತ, ಅವರ ಅಣ್ಣನ ಮೂಲಕ ಇಸ್ಕಾನ್ ಜತೆ ಸೇರಿಕೊಂಡರು. ಮೊಂಬಾಸಾದ ವಿದ್ಯಾರ್ಥಿಗಳಲ್ಲಿ ವೈಷ್ಣವ ಸಂಸ್ಕೃತಿಯನ್ನು ಹರಡಲು 2021 ರಲ್ಲಿ ಸ್ಥಾಪಿಸಲಾದ ವಿಶ್ವವಿದ್ಯಾಲಯ ಆಧಾರಿತ ಉಪಕ್ರಮವಾದ ದಿ ಬೆಟರ್ ಯು ಕ್ಲಬ್‌ನ ಅಧ್ಯಕ್ಷರಾಗಿ, ಕ್ಯಾಲೆಬ್ ಕ್ಲಬ್ ಅನ್ನು 180 ಸದಸ್ಯರನ್ನು ಬೆಳೆಸಲು ಸಹಾಯ ಮಾಡಿದ್ದಾರೆ. ವಿಧಾನಸಭೆಯ ಸದಸ್ಯರ ಸಮ್ಮುಖದಲ್ಲಿ ಕ್ಯಾಲೆಬ್ ಅವರು ಭಗವದ್ಗೀತೆ ಆಸ್ ಇಟ್ ಈಸ್ ಪುಸ್ತಕವನ್ನು ಎತ್ತಿ ಪ್ರಮಾಣ ವಚನ ಸ್ವೀಕರಿಸಿದರು. ಮೊಂಬಾಸಾ ಯುವ ಅಸೆಂಬ್ಲಿ ಕೀನ್ಯಾ ಯುವ ಅಸೆಂಬ್ಲಿ ಚೌಕಟ್ಟಿನಡಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಇದು ಯುವ ನಾಯಕರಿಗೆ ಔಪಚಾರಿಕ ರಾಜಕೀಯಕ್ಕೆ ಮುಂಚೆ ಜವಾಬ್ದಾರಿಯನ್ನು ಅಭ್ಯಾಸ ಮಾಡುವ ವೇದಿಕೆಯಾಗಿದೆ. ಈ ಮೊದಲು ಕೆನಡಾದ ವಿದೇಶಾಂಗ ಸಚಿವೆಯಾದ ಅನಿತಾ ಆನಂದ್ ಭಗವದ್ಗೀತೆ ಹಿಡಿದು ಪ್ರಮಾಣವಚನ ಸ್ವೀಕರಿಸಿದ್ದರು. ಇನ್ನು ಅಮೆರಿಕದಲ್ಲಿ ಕಾಶ್ ಪಟೇಲ್ ಎಫ್‌ಬಿಐ ಡೈರೆಕ್ಟರ್ ಆದ ಬಳಿಕ ಅವರೂ ಕೂಡ ಭಗವದ್ಗೀತೆ ಹಿಡಿದು ಪ್ರಮಾಣವಚನ ಸ್ವೀಕರಿಸಿದ್ದರು. ಇಂಡಿಯನ್ ಆಸ್ಟ್ರೇಲಿಯನ್ ಸಂಸದ ವರುಣ್ ಘೋಷ್ ಕೂಡ ಹೀಗೆಯೇ ಮಾಡಿದ್ದರು. ಆದರೆ ಅವರೆಲ್ಲರೂ ಮೂಲತಃ ಭಾರತೀಯರು.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.