ಬೆಂಗಳೂರು: ಕಿಲಾಡಿ ಕಳ್ಳಿಯೊಬ್ಬಳನ್ನು ಕೋಣನಕುಂಟೆ ಪೊಲೀಸರು (Konankunte Police) ನಡೆಸಿದ ಕಾರ್ಯಾಚರಣೆಯಲ್ಲಿ ಬಂಧಿಸಿದ್ದಾರೆ (Arrest).
ಬಂಧಿತಳನ್ನು ತಮಿಳುನಾಡು ಮೂಲದ ದೀಪಾ ಎಂದು ಗುರುತಿಸಲಾಗಿದೆ. ಈಕೆ ಕೋಣನಕುಂಟೆ ನಿವಾಸಿ ಜಗದೀಶ್ ಎಂಬವರ ಮನೆಯಲ್ಲಿ ಕಳೆದ ಒಂದು ವರ್ಷದಿಂದ ಮನೆಕೆಲಸ ಮಾಡುತ್ತಿದ್ದಳು.
ಜಗದೀಶ್ ಮನೆಯಲ್ಲಿ ಮನೆಕೆಲಸ ಮಾಡುತ್ತಲೇ ದೀಪಾ, ಮನೆಯಲ್ಲಿದ್ದ ಚಿನ್ನಾಭರಣಗಳ ಮೇಲೆ ಕಣ್ಣಿಟ್ಟಿದ್ದಳು. ಒಂದೇ ಬಾರಿಗೆ ಕಳ್ಳತನ ಮಾಡದೆ ಆಗಾಗ ಒಂದೊಂದೇ ಚಿನ್ನದ ಆಭರಣ ಕದ್ದು ತನ್ನ ಕೈಚಳಕ ತೋರಿದ್ದಳು. ಈ ಕೃತ್ಯದ ಬಗ್ಗೆ ಅನುಮಾನಗೊಂಡ ಮನೆ ಮಾಲೀಕ ಜಗದೀಶ್ ಅವರು ಪೊಲೀಸರಿಗೆ ದೂರು ನೀಡಿದ್ದರು.
ದೂರಿನ ಆಧಾರದ ಮೇಲೆ ತನಿಖೆ ಕೈಗೊಂಡ ಕೋಣನಕುಂಟೆ ಪೊಲೀಸರು, ಆರೋಪಿ ದೀಪಾಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ವಿಚಾರಣೆ ವೇಳೆ ಆರೋಪಿ ತನ್ನ ಕೃತ್ಯದ ಬಗ್ಗೆ ಬಾಯಿಟ್ಟಿದ್ದಾಳೆ. ಕದ್ದ ಹಣದಲ್ಲಿ ತಮಿಳುನಾಡಿನಲ್ಲಿ ಸೈಟ್ ಒಂದನ್ನ ಖರೀದಿಸಿದ್ದಾಗಿ ದೀಪಾ ತಪ್ರೊಪ್ಪಿಕೊಂಡಿದ್ದಾಳೆ.
ಸದ್ಯ ಪೊಲೀಸರು ಆರೋಪಿ ದೀಪಾಳನ್ನು ಬಂಧಿಸಿ, ಆಕೆಯಿಂದ 200 ಗ್ರಾಂ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.
ಸರಗಳ್ಳನನ್ನು ಹಿಡಿದ ಕಾನ್ಸ್ ಸ್ಟೇಬಲ್‌ಗೆ ಸನ್ಮಾನ: ಸರಗಳ್ಳನನ್ನು ಚೇಸ್ ಮಾಡಿ ಹಿಡಿದ ಪೊಲೀಸ್ ಕಾನ್ಸ್ ಸ್ಟೇಬಲ್ ನನ್ನು ಅಭಿನಂದಿಸಲಾಗಿದೆ. ಚೈನ್ ಸ್ನಾಚ್ ಮಾಡಿ ಪರಾರಿಯಾಗುತ್ತಿದ್ದ ಆಸಾಮಿಯನ್ನು ಚೇಸ್ ಮಾಡಿದ ಕಾನ್ಸ್‌ಸ್ಟೇಬಲ್ ಹಣಮಂತ ಪುಟಾಣಿಯನ್ನು ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ಗೌರವಿಸಿದ್ದಾರೆ.ಕಳೆದ ಫೆ.5 ರಂದು ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಕ್ಷಾಯಣಿ ಎಂಬಾ ಮಹಿಳೆಯ ಸರವನ್ನು ಕಿತ್ತು ಸೈಯದ್ ಜಾಫರ್ ಎಂಬಾತ ಎಸ್ಕೆಪ್ ಆಗುತ್ತಿದ್ದನು. ಇದನ್ನು ಗಮನಿಸಿದ ಹಣಮಂತ ಪುಟಾಣಿ ಆರೋಪಿಯ ಬೆನ್ನತ್ತಿ ಸೆರೆಹಿಡಿದಿದ್ದರು. ಸುಮಾರು ಒಂದು ಕಿ.ಲೋ ಚೇಸ್ ಮಾಡಿದ್ದ ಕಾನ್ಸ್ ಸ್ಟೇಬಲ್ ಆತನನ್ನು ಬಂಧಿಸಿದ್ದರು ನದರದ ಸಶಸ್ತ್ರ ಮೀಸಲು ಪಡೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಹಣಮಂತ ಪುಟಾಣಿ ಶೌರ್ಯಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿತ್ತು.