2026-06-08 04:07:18

Karnataka MLAs demand IPL tickets DK says its okay|ಕರ್ನಾಟಕ ಶಾಸಕರಿಂದ IPL ಟಿಕೆಟ್‌ಗೆ ಬೇಡಿಕೆ ಸರಿಯಿದೆ ಎಂದ ಡಿಕೆ|Speed News Kannada

Karnataka MLAs demand IPL tickets DK says its okay|ಕರ್ನಾಟಕ ಶಾಸಕರಿಂದ IPL ಟಿಕೆಟ್‌ಗೆ ಬೇಡಿಕೆ ಸರಿಯಿದೆ ಎಂದ ಡಿಕೆ|Speed News Kannada

ರಾಜ್ಯದಲ್ಲಿ ನೂರೆಂಟು ಸಮಸ್ಯೆ ತಾಂಡವವಾಡ್ತಿದೆ. ಈ ಮಧ್ಯೆ ಇರಾನ್- ಇಸ್ರೇಲ್‌ ನಡುವೆ ವಾರ್‌ನಿಂದಾಗಿ ಕಚ್ಚಾತೈಲ, ಗ್ಯಾಸ್‌ ಸಮಸ್ಯೆ ಹೆಚ್ಚಾಗಿದೆ. ರಾಜ್ಯದ ಜನತೆ ಎದುರಿಸುತ್ತಿರುವ ಸಮಸ್ಯೆಗೆ ಪರಿಹಾರ ಕಲ್ಪಿಸುವ ಬದಲು ರಾಜ್ಯ ನಾಯಕರು, ಐಪಿಎಲ್‌ ಟಿಕೆಟ್‌ಗಾಗಿ ದುಂಬಾಲು ಬಿದ್ದಿದ್ದಾರೆ.

 

ಎಲ್ಲಾ ಶಾಸಕರಿಗೂ 4 ಟಿಕೆಟ್ ಕೊಡಿಸಬೇಕೆಂದು ಬೇಡಿಕೆ ಇಟ್ಟಿದ್ದಾರೆ. ಇದೇ ವಿಚಾರ ನಿನ್ನೆ ವಿಧಾನಸಭೆ ಕಲಾಪದಲ್ಲೂ ಚರ್ಚೆ ಆಗಿದೆ. ಕೆಲಸ ಮಾಡಿ ನಾಯಕರೇ ಅಂತಾ ಜನ ಒದ್ದಾಡ್ತಿದ್ರೆ, ರಾಜಕಾರಣಿಗಳು ಐಪಿಎಲ್‌ ಟಿಕೆಟ್‌ ಹಿಂದೆ ಬಿದ್ದಿದ್ದಾರೆ. ಇದಕ್ಕೆ ಡಿಕೆಶಿ ಸಮರ್ಥನೆ ಬೇರೆ ಕೊಟ್ಟಿದ್ದಾರೆ.

ಐಪಿಎಲ್ ಟಿಕೆಟ್‌ಗೆ ಶಾಸಕರ ಬೇಡಿಕೆ ಕುರಿತು ಮಾತನಾಡಿದ ಡಿಸಿಎಂ ಡಿ.ಕೆ ಶಿವಕುಮಾರ್, ಶಾಸಕರ ಬೇಡಿಕೆ ಸರಿ ಇದೆ. ಶಾಸಕರು ಕೂಡ ವ್ಯವಸ್ಥೆಯ ಭಾಗ. ನಮ್ಮ ಶಾಸಕರಿಗೆ ವ್ಯವಸ್ಥೆ ಮಾಡಬೇಕು. ನಾನು ಕೆಎಸ್‌ಸಿಎ ಅಧ್ಯಕ್ಷರ ಜೊತೆ ಇಂದು ಮಾತಾಡ್ತೀನಿ ಎಂದರು.‌ ಶಾಸಕರ ಬೇಡಿಕೆ ಸರಿಯಿದೆ. ಅದ್ರಲ್ಲೇನು ತಪ್ಪು ಅಂತಾ ಕನಕಪುರ ಬಂಡೆ ಸಮರ್ಥಿಸಿಕೊಂಡಿದ್ದಾರೆ.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.