2026-05-23 01:43:55

SIRನಿಂದ ಅನ್ಯಾಯವಾಗದಂತೆ ಎಚ್ಚರವಹಿಸಲು ರಾಜ್ಯ ಸರ್ಕಾರ ನಿರ್ಧಾರ:ಸಚಿವ ಹೆಚ್.ಕೆ.ಪಾಟೀಲ್| Speed News Kannada

SIRನಿಂದ ಅನ್ಯಾಯವಾಗದಂತೆ ಎಚ್ಚರವಹಿಸಲು ರಾಜ್ಯ ಸರ್ಕಾರ ನಿರ್ಧಾರ:ಸಚಿವ ಹೆಚ್.ಕೆ.ಪಾಟೀಲ್| Speed News Kannada

 

ಬೆಂಗಳೂರು: ರಾಷ್ಟ್ರದ ನಾಗರಿಕನಾಗಿರುವ ರಾಜ್ಯದ ಯಾವುದೇ ಪ್ರಜೆಗೆ ತನ್ನ ಮತದಾನದ ಹಕ್ಕನ್ನು ಅನಾವಶ್ಯಕವಾಗಿ ಕಸಿದುಕೊಳ್ಳುವಂತಹ ಪ್ರಕ್ರಿಯೆ ನಡೆದರೆ, ಅಂತಹ ಪ್ರಕ್ರಿಯೆಯಿಂದ ನಾಗರೀಕನ ಮತದಾನದ ಹಕ್ಕನ್ನು ಕಾಪಾಡಲು ಸರ್ವಪ್ರಯತ್ನಗಳನ್ನು ಮಾಡಲಾಗುವುದು ಎಂದು ಕಾನೂನು ಮತ್ತು ಪ್ರವಾಸೋದ್ಯಮ ಸಚಿವ ಹೆಚ್.ಕೆ.ಪಾಟೀಲ್ ತಿಳಿಸಿದ್ದಾರೆ. 

ಕಾನೂನು ಮತ್ತು ಪ್ರವಾಸೋದ್ಯಮ ಸಚಿವ ಹೆಚ್.ಕೆ. ಪಾಟೀಲ್ ಅವರು ಸಚಿವ ಸಂಪುಟ ಸಭೆಯ ನಂತರ ಸಂಪುಟದ ನಿರ್ಣಯಗಳನ್ನು ಕುರಿತು ಮಾಹಿತಿ ನೀಡಿದರು.

ಕರ್ನಾಟಕ ರಾಜ್ಯದಲ್ಲಿ ಪಟ್ಟಿಗಳ ಮತದಾರರ ವಿಶೇಷ ತೀವು ಪರಿಷ್ಕರಣೆ (Special Intensive Revision - SIR) ಬಗ್ಗೆ ಸುಧೀರ್ಘ ಚರ್ಚೆ ನಡೆದಿದೆ. ವಿಶೇಷವಾಗಿ ಪಶ್ಚಿಮ ಬಂಗಾಳದಲ್ಲಿ ಎಸ್ ಐ ಆರ್ ಪ್ರಕ್ರಿಯೆಯಿಂದ 27 ಲಕ್ಷ ಜನರ ಮತದ ಹಕ್ಕು ಕಸಿಯಲಾಗಿದೆ. ಎಸ್ ಐ ಆರ್ ನ ಅವಘಡಗಳು  ಮತ್ತು ಗಂಭೀರ ಆಕ್ಷೇಪಗಳ ಬಗ್ಗೆ ಚರ್ಚಿಸಲಾದ್ದು, ಸುಪ್ರೀಂಕೋರ್ಟ್‌  ಮೊರೆ ಹೋಗಲು ಚಿಂತನೆ ನಡೆಸಲಾಗಿದೆ. ಅಂತಿಮ ಮತದಾರರ ಪಟ್ಟಿ , ಎಸ್ ಐ ಆರ್ ಪ್ರಕ್ರಿಯೆ, ಅದರ ಪಾರದರ್ಶಕತೆಗೆ ಸಂಬಂಧಿಸಿದ ಹಲವು ಅಂಶಗಳ ಬಗ್ಗೆ ಮತ್ತಷ್ಟು ವಿವರವಾದ ಚರ್ಚೆಗಳನ್ನು ನಡೆಯಬೇಕಿದ್ದು, ಈ ಬಗ್ಗೆ ಶೀಘ್ರದಲ್ಲಿಯೇ ನಿರ್ಣಯ ಕೈಗೊಳ್ಳಲಾಗುವುದು ಎಂದರು.

 

ಸಂಪುಟದಲ್ಲಿ ನಡೆದ ಚರ್ಚೆಯ ವಿವರ:

ಮತದಾನದ ಹಕ್ಕನ್ನು ಉದ್ದೇಶ ಪೂರ್ವಕವಾಗಿ ಕಸಿಯುವ ಪ್ರಕ್ರಿಯೆ ನಡೆದರೆ ಸರ್ಕಾರ ಸುಮ್ಮನಿರಬಾರದು. ಪಾರದರ್ಶಕವಾಗಿ ನಡೆಸುವಂತೆ ಚುನಾವಣಾ ಆಯೋಗದ ಮೇಲೆ ಒತ್ತಡ; ಎಸ್‌ಐಆ‌ ಬಳಿಕ ಪಟ್ಟಿಯನ್ನು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಬೇಕು ಎಂದು ಆಯೋಗಕ್ಕೆ ನಿರ್ದೇಶನ ನೀಡುವಂತೆ ನ್ಯಾಯಾಲಯದ ಮೊರೆಗೆ ಚಿಂತನೆ ಮತ್ತು ಹಲವು ರಾಜ್ಯಗಳಲ್ಲಿ ನಡೆದ ಅವಘಡಗಳು ನಡೆಯದಂತೆ ಎಚ್ಚರಿಕೆ ವಹಿಸಲು ನಿರ್ಧಾರ.

 

ಎಸ್‌ಐಆರ್‌ಗೆ ಚುನಾವಣಾ ಆಯೋಗ ಸಿದ್ಧತೆ

ರಾಜ್ಯದಲ್ಲಿ ಎಸ್‌ಐಆರ್‌ ನಡೆಸಲು ವೇಳಾಪಟ್ಟಿ ನಿಗದಿಯಾಗಿದೆ. ಜೂನ್ 30ರಿಂದ ಮತಗಟ್ಟೆ ಅಧಿಕಾರಿಗಳು ಮನೆ ಮನೆಗೆ

ಭೇಟಿ ನೀಡಲಿದ್ದಾರೆ. ಆಗಸ್ಟ್ 5ರಂದು ಕರಡು ಮತದಾರರ ಪಟ್ಟಿ ಮತ್ತು ಅಕ್ಟೋಬರ್ 5ರಂದು ಅಂತಿಮ ಪಟ್ಟಿ

ಪ್ರಕಟವಾಗಲಿದೆ.

ಈ ಕೆಲಸಕ್ಕಾಗಿ 59,050 ಮತಗಟ್ಟೆ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಎಸ್‌ಐಆರ್ ಪ್ರಕ್ರಿಯೆಯಲ್ಲಿ ಭಾಗಿಯಾಗುವ ಎಲ್ಲ ಹಂತದ ಅಧಿಕಾರಿಗಳಿಗೆ ತರಬೇತಿ ನೀಡಲಾಗುತ್ತಿದೆ. ಎಸ್‌ಐಆ‌ ಭಾಗವಾಗಿ ರಾಜಕೀಯ ಪಕ್ಷಗಳು, ಸ್ವಯಂ ಸೇವಾ ಸಂಸ್ಥೆಗಳ ಜತೆಗೆ ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿಯು ಸಮಾಲೋಚನೆ ನಡೆಸುತ್ತಿದೆ.

ಎಸ್‌ಐಆರ್‌ಗೆ ಪೂರ್ವತಯಾರಿ ಭಾಗವಾಗಿ 2025ರ ಮತದಾರರ ಪಟ್ಟಿಯಲ್ಲಿ ಇರುವ ಮತದಾರರ ವಿವರಗಳನ್ನು

2002ರ ಮತದಾರರ ಪಟ್ಟಿಯಲ್ಲಿನ ವಿವರಕ್ಕೆ ಹೋಲಿಸಿ (ಮ್ಯಾಪಿಂಗ್) ನೋಡಲಾಗಿದೆ. 5.50 ಕೋಟಿ ಮತದಾರರ ಪೈಕಿ

4.83 ಕೋಟಿ ಮತದಾರರ ವಿವರ ಮ್ಯಾಪ್ ಆಗಿದೆ.

Share:


Tags:

sir cabinet

Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.