2026-07-23 06:16:46

Kantara-1 Chamundi role controversy, Ranveer Singh apologizes | ಕಾಂತಾರ-1 ಚಾಮುಂಡಿ ಪಾತ್ರ ವಿವಾದ, ರಣವೀರ್ ಸಿಂಗ್ ಕ್ಷಮೆಯಾಚನೆ | Speed news kannada

Kantara-1 Chamundi role controversy, Ranveer Singh apologizes | ಕಾಂತಾರ-1 ಚಾಮುಂಡಿ ಪಾತ್ರ ವಿವಾದ, ರಣವೀರ್ ಸಿಂಗ್ ಕ್ಷಮೆಯಾಚನೆ | Speed news kannada

ಇತ್ತಿಚಿನ ದಿನಗಳಲ್ಲಿ ರಣವೀರ್‌ ಸಿಂಗ್‌  ಕಾಂತಾರ-1' ಸಿನಿಮಾದಲ್ಲಿನ ಚಾಮುಂಡಿ ಪಾತ್ರಕ್ಕೆ ಅವಮಾನ ಮಾಡಿದ್ವರು. ಇನ್ನೂ ಈ  ಆರೋಪಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆ ನಡೆದಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ರಣವೀರ್ ಸಿಂಗ್ ಕ್ಷಮೆಯಾಚಿಸಿದ್ದಾರೆ ಎಂದು ತಿಳಿದುಬಂದಿದೆ.

ಈ ಕುರಿತು ಬೆಂಗಳೂರಿನಲ್ಲಿ ಮಾಹಿತಿ ನೀಡಿದ ವಕೀಲ ಪ್ರಶಾಂತ್ ಮಿತ್ತಲ್, ಕರ್ನಾಟಕ ಹೈಕೋರ್ಟ್‌ನಲ್ಲಿ ಈ ಪ್ರಕರಣ ಇತ್ಯರ್ಥವಾಗಿದೆ ಎಂದು ತಿಳಿಸಿದ್ದಾರೆ. ವಿವಾದಕ್ಕೆ ಕಾರಣವಾಗಿದ್ದ ಅಂಶಗಳ ಬಗ್ಗೆ ನಟ ರಣವೀರ್ ಸಿಂಗ್ ಅವರು ಕ್ಷಮೆ ಕೋರಿದ್ದಾರೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಅಷ್ಟೇ ಅಲ್ಲದೆ, ಈ ವಿವಾದದ ತರುವಾಯ ನಟ ರಣವೀರ್ ಸಿಂಗ್ ಅವರು ಶೀಘ್ರದಲ್ಲೇ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಲಿದ್ದಾರೆ ಎಂಬ ಮಾಹಿತಿಯನ್ನೂ ವಕೀಲರು ಹಂಚಿಕೊಂಡಿದ್ದಾರೆ. ಈ ಮೂಲಕ ಹಲವು ದಿನಗಳಿಂದ ಸಾರ್ವಜನಿಕ ವಲಯದಲ್ಲಿ ಚರ್ಚೆಯಲ್ಲಿದ್ದ ಈ ಪ್ರಕರಣಕ್ಕೆ ಈಗ ತೆರೆಬಿದ್ದಂತಾಗಿದೆ

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.