2026-03-07 08:10:18

Joint Israeli American attack on Iran | ಇರಾನ್ ಮೇಲೆ ಇಸ್ರೇಲ್ ಅಮೆರಿಕ ಜಂಟಿ ದಾಳಿ 40 ಶಾಲಾ ಬಾಲಕಿಯರ ಸಾವು | Speed News Kannada

Joint Israeli American attack on Iran | ಇರಾನ್ ಮೇಲೆ ಇಸ್ರೇಲ್ ಅಮೆರಿಕ ಜಂಟಿ ದಾಳಿ 40 ಶಾಲಾ ಬಾಲಕಿಯರ ಸಾವು | Speed News Kannada

ಇಸ್ರೇಲ್ ಮತ್ತು ಅಮೆರಿಕ ಜಂಟಿಯಾಗಿ ನಡೆಸಿದ ವೈಮಾನಿಕ ದಾಳಿಯಿಂದಾಗಿ ಇರಾನ್‌ನಲ್ಲಿ ಕನಿಷ್ಠ 40 ಶಾಲಾ ವಿದ್ಯಾರ್ಥಿನಿಯರು ದುರ್ಮರಣಕ್ಕೀಡಾಗಿದ್ದಾರೆ ಎಂದು ಅಲ್ಲಿನ ಸರ್ಕಾರಿ ಸುದ್ದಿ ಸಂಸ್ಥೆ 'ಇರ್ನಾ' ವರದಿ ಮಾಡಿದೆ. ಇರಾನ್‌ ಸರ್ಕಾರಿ ಸ್ವಾಮ್ಯದ ಸುದ್ದಿ ಸಂಸ್ಥೆಯಾದ IRNA ವರದಿಯ ಪ್ರಕಾರ, ಇಸ್ರೇಲ್ ಮತ್ತು ಅಮೆರಿಕ ಜಂಟಿಯಾಗಿ ನಡೆಸಿದ ದಾಳಿಯಲ್ಲಿ 40 ಶಾಲಾ ವಿದ್ಯಾರ್ಥಿನಿಯರು ಮೃತಪಟ್ಟಿದ್ದಾರೆ. ಇದು ಬೆಳವಣಿಗೆಯಾಗುತ್ತಿರುವ ಸುದ್ದಿಯಾಗಿದ್ದು, ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.
ಡೊನಾಲ್ಡ್ ಟ್ರಂಪ್ ಅವರ ಕರೆ: ಶನಿವಾರ ಇರಾನ್ನಾದ್ಯಂತ ಅಮೆರಿಕ ಮತ್ತು ಇಸ್ರೇಲ್ ಭಾರಿ ದಾಳಿ ನಡೆಸಿದ ಬೆನ್ನಲ್ಲೇ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ಜನತೆಗೆ “ನಿಮ್ಮ ಸರ್ಕಾರವನ್ನು ವಶಪಡಿಸಿಕೊಳ್ಳಿ” ಎಂದು ಅಸಾಧಾರಣ ಕರೆ ನೀಡಿದ್ದಾರೆ. ದಶಕಗಳ ಉದ್ವಿಗ್ನತೆಯ ನಂತರ ಅಲ್ಲಿನ ಧಾರ್ಮಿಕ ಆಡಳಿತವನ್ನು ಅಂತ್ಯಗೊಳಿಸಲು ಮಿತ್ರರಾಷ್ಟ್ರಗಳು ಪ್ರಯತ್ನಿಸುತ್ತಿವೆ ಎಂಬ ಮುನ್ಸೂಚನೆ ಇದಾಗಿದೆ.
ಪ್ರಮುಖ ಗುರಿಗಳು ಮೊದಲ ಹಂತದ ದಾಳಿಗಳು ಟೆಹ್ರಾನ್‌ನಲ್ಲಿರುವ ಇರಾನ್‌ 86 ವರ್ಷದ ಪರಮೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ನಿವಾಸವನ್ನು ಗುರಿಯಾಗಿಸಿಕೊಂಡಿವೆ ಎಂದು ತಿಳಿದುಬಂದಿದೆ. ದಾಳಿಯ ಸಮಯದಲ್ಲಿ ಅವರು ಅಲ್ಲಿ ಇದ್ದರೇ. ಎಂಬುದು ಸ್ಪಷ್ಟವಾಗಿಲ್ಲ.
ಟ್ರಂಪ್ ಹೇಳಿಕೆ "47 ವರ್ಷಗಳಿಂದ ಇರಾನ್ ಆಡಳಿತವು 'ಅಮೆರಿಕಕ್ಕೆ ಸಾವು' ಎಂದು ಘೋಷಣೆ ಕೂಗುತ್ತಾ ರಕ್ತಪಾತ ಮತ್ತು ಸಮೂಹ ಹತ್ಯೆ ಮಾಡುತ್ತಿದೆ. ದಾಳಿ ಮುಗಿದ ನಂತರ ನಿಮ್ಮ ಸರ್ಕಾರವನ್ನು ನೀವೇ ವಶಪಡಿಸಿಕೊಳ್ಳಿ, ಅದು ನಿಮ್ಮದಾಗಲಿದೆ,” ಎಂದು ಟ್ರಂಪ್ ಸೋಶಿಯಲ್ ಮೀಡಿಯಾ ವಿಡಿಯೋದಲ್ಲಿ ತಿಳಿಸಿದ್ದಾರೆ.
ಇರಾನ್ ತಿರುಗೇಟು ದಾಳಿಗೆ ಪ್ರತಿಕ್ರಿಯೆಯಾಗಿ ಇರಾನ್‌ ರೆವಲ್ಯೂಷನರಿ ಗಾರ್ಡ್ ಇಸ್ರೇಲ್ ಮೇಲೆ ಡೋನ್ ಮತ್ತು ಕ್ಷಿಪಣಿಗಳ 'ಮೊದಲ ಅಲೆ'ಯನ್ನು ಉಡಾಯಿಸಿದೆ. ಇಸ್ರೇಲ್‌ನಲ್ಲಿ ರಾಷ್ಟ್ರವ್ಯಾಪಿ ಎಚ್ಚರಿಕೆ ನೀಡಲಾಗಿದೆ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.