ಬೆಂಗಳೂರು : ಸ್ಯಾಂಡಲ್ ವುಡ್ ನಿರ್ಮಾಪಕ ಕನಕಪುರ ಶ್ರೀನಿವಾಸ್ ಆಗೊಮ್ಮೆ ಈಗೊಮ್ಮೆ ಸುದ್ದಿಯಲ್ಲಿರುತ್ತಾರೆ. ಅವರು ಮಾತನಾಡಿದರೆ ಭಯಂಕರ ಸುದ್ದಿಯೇ ಇರುತ್ತದೆ. ಅಂದರೆ ಅವರು ಆ ಮಟ್ಟಿಗೆ ಮಾತನಾಡಿರುತ್ತಾರೆ. ಅವರು ಏನು ಹೇಳುತ್ತಾರೆ ಎಂದು ಯಾರೂ ನಿರೀಕ್ಷೆ ಮಾಡಲು ಸಾಧ್ಯವಿಲ್ಲ.
ಇವರ ಮಾತಿನಿಂದ ರೊಚ್ಚಿಗೆದ್ದ ಜೋಗಿ ಖ್ಯಾತಿಯ ನಿರ್ದೇಶಕ ನಟ ಜೋಗಿ ಪ್ರೇಮ್ ಕೆರಳಿ ಕೆಂಡವಾಗಿದ್ದಾರೆ. ಶ್ರೀನಿವಾಸ್ ಕುರಿತೂ ಒಂದು ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ. ಪುನೀತ್ ರಾಜ್ ಕುಮಾರ್ ಚಿತ್ರ ಮಾಡಲು ನನಗೆ ಕನಕಪುರ ಶ್ರೀನಿವಾಸ್ 9 ಲಕ್ಷ ರೂಪಾಯಿ ಕೊಟ್ಟಿದ್ದರು. ಅವರು ದುಡ್ಡು ಕೊಟ್ಟ ಮೇಲೆ ನಾನು ಬರೋಬ್ಬರಿ 3 ವರ್ಷ ಕಾದಿದ್ದೇನೆ. ಅವರಿಗಾಗಿ ಬೇರೆ ಸಿನಿಮಾ ಮಾಡಲು ಆಗಲೇ ಇಲ್ಲ. ಅನೇಕ ಅವಕಾಶಗಳನ್ನು ಮಿಸ್ ಮಾಡಿಕೊಂಡಿದ್ದೇನೆ ಎಂದು ಕಿಡಿ ಕಾರಿದ್ದಾರೆ.
ದುಡ್ಡು ಕೊಟ್ಟು ಮೂರು ವರ್ಷ ಆದರೂ ಕನಕಪುರ ಶ್ರೀನಿವಾಸ್ ಸಿನಿಮಾ ಮಾಡಲೇ ಇಲ್ಲ. ಒಮ್ಮೆ ಇದ್ದಕ್ಕಿದ್ದಂತೆ ಪ್ರತ್ಯಕ್ಷರಾಗಿ ಕಷ್ಟದಲ್ಲಿದ್ದೇನೆ. 9 ಲಕ್ಷ ರೂಪಾಯಿ ವಾಪಸ್ ಕೇಳಿದರು. ನನಗೆ ಕಷ್ಟವಾದರೂ ಮರಳಿಸಿದ್ದೇನೆ. ಆದರೂ ಈಗ ಶ್ರೀನಿವಾಸ್ ಸುಳ್ಳು ಆರೋಪ ಮಾಡುತ್ತಿದ್ದಾರೆ. ಬಾಕಿ ಇರೋ ಹಣವನ್ನು ಅವರು ಕೋರ್ಟ್ ಮೂಲಕವೇ ತೆಗೆದುಕೊಳ್ಳಲಿ ಎಂದು ತಿರುಗೇಟು ನೀಡಿದ್ದಾರೆ.