2026-03-07 07:33:54

Jeffrey Epstein | ಜೆಫ್ರಿ ಎಪ್‌ಸ್ಟೈನ್‌ ಫೈಲ್ಸ್‌ ಭಾರತೀಯ ಯುವತಿಭಾಗಿ ಪತ್ತೆಗೆ ಮುಂದಾದ ಅಮೆರಿಕ | Speed News Kannada

Jeffrey Epstein | ಜೆಫ್ರಿ ಎಪ್‌ಸ್ಟೈನ್‌ ಫೈಲ್ಸ್‌ ಭಾರತೀಯ ಯುವತಿಭಾಗಿ ಪತ್ತೆಗೆ ಮುಂದಾದ ಅಮೆರಿಕ | Speed News Kannada

ನವದೆಹಲಿ: ಜಾಗತಿಕ ಮಟ್ಟದಲ್ಲಿ ಭಾರಿ ಚರ್ಚೆಯಾಗುತ್ತಿರುವ ಜೆಫ್ರಿ ಎಪ್‌ಸ್ಟೈನ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸ ದಾಖಲೆಗಳನ್ನು ನ್ಯಾಯಾಂಗ ಇಲಾಖೆ ಬಿಡುಗಡೆ ಮಾಡಿದ್ದು, ಇದರಲ್ಲಿ ಭಾರತೀಯ ಯುವತಿಯೊಬ್ಬಳು ಇರುವುದು ಬೆಳಕಿಗೆ ಬಂದಿದೆ.
2020ರ ಜನವರಿ 13ರಂದು ಬಿಡುಗಡೆಯಾದ ಆಂತರಿಕ ಇಮೇಲ್‌ನ ಪ್ರಕಾರ, ಎಪ್‌ಸ್ಟೈನ್‌ ಫೈಲ್‌ ನ ಸಂತ್ರಸ್ತರಿಗೆ ನೀಡುವ ನಿಧಿಯನ್ನು ಯುವತಿಗೆ ನೀಡಲು ಅಮೆರಿಕದ ಆಧಿಕಾರಿಗಳು ಭಾರತೀಯ ಯುವತಿಯನ್ನು ಪತ್ತೆ ಹಚ್ಚಲು ಮುಂದಾಗಿದ್ದಾರೆ.
ಎಪ್‌ಸ್ಟೀನ್ ಸಂತ್ರಸ್ತರು ಎಂಬ ಹೆಸರಿನ ಇಮೇಲ್‌ನಲ್ಲಿ, ಭಾರತೀಯ ಮೂಲದ ಯುವತಿಯ ವಿಳಾಸ ಮತ್ತು ಸಂಪರ್ಕದ ವಿವರಗಳನ್ನು ಪಡೆಯಲು ಭಾರತದಲ್ಲಿರುವ ಅಮೆರಿಕ ರಾಯಭಾರ ಕಚೇರಿಯ ಜೊತೆ ಅಧಿಕಾರಿಗಳು ಚರ್ಚೆ ನಡೆಸಿದ್ದಾರೆ. ಒಂದು ವೇಳೆ ಯುವತಿಯ ಮಾಹಿತಿ ಲಭ್ಯವಾದರೆ ಗೌಪ್ಯವಾಗಿ ಇಡುವುದಾಗಿಯೂ ಭರವಸೆ ನೀಡಿದ್ದಾರೆ.
ಕೆಲವು ಮಾಧ್ಯಮಗಳ ವರದಿಗಳ ಪ್ರಕಾರ ಅಮೆರಿಕದ ಅಧಿಕಾರಿಗಳು ಎಪ್‌ಸ್ಟೈನ್‌ ಫೈಲ್ ಸಂತ್ರಸ್ತರಿಗೆ ಒದಗಿಸಲಾಗುವ ಪರಿಹಾರ ವಿಧಾನಗಳನ್ನು ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ ಜೊತೆಗೆ ಎಫ್‌ಬಿಐಗೆ ಸಲ್ಲಿಸಬೇಕಾದ ದಾಖಲೆಗಳು, ಅರ್ಜಿಯ ನಮೂನೆಯನ್ನು ರವಾನಿಸುವಂತೆ ಅಧಿಕಾರಿಗಳಿಗೆ ಕೇಳಿರುವುದಾಗಿ ವರದಿಯಲ್ಲಿ ಉಲ್ಲೇಖಿಸಲಾಗಿದೆ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.